ಬಾಗಲಕೋಟೆ
ರಾಜ್ಯ ರಾಜಕಾರಣದಲ್ಲಿ ಬಾರೀ ಗದ್ದಲ ಎಬ್ಬಸಿರುವ ಜಾತಿ ಗಣತಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆಯಲ್ಲಿ ಈ ಕುರಿತು ಮಾತನಾಡಿದ ಅವರು, ಈಗಾಗಲೇ ಜಾತಿಗಣತಿ ವಿಚಾರವಾಗಿ ಕಾಂಗ್ರೆಸ್ ನ ಹಿರಿಯರು,ವೀರಶೈವ ಸಮಾಜದ ಪ್ರಮುಖರು ಶಾಮನೂರು ಶಿವಶಂಕ್ರಪ್ಪನವರೇ ಹೇಳಿದ್ದಾರೆ. ಅವರು ಅದೇ ಪಕ್ಷದಲ್ಲಿ ಇದ್ದುಕೊಂಡು ಇದು ಮಾಡೋದು ಸರಿಯಲ್ಲ ಅಂತ ಹೇಳಿದ್ದಾರೆ.
ರಾಜ್ಯದಲ್ಲಿ ಅಂದಾಜು 1.30 ಕೋಟಿ ಜನ ವೀರಶೈವ ಲಿಂಗಾಯತರಿದ್ದಾರೆ. ಆದರೆ, ಕಾಂಗ್ರೆಸ್ನವರು ಬರೀ 60 ಲಕ್ಷ ಜನರಿರುವುದು ಎಂದು ತೋರಿಸಲು ಹೊರಟಿದ್ದಾರೆ. ಕರ್ನಾಟಕ ರಾಜ್ಯದ ಏಳು ಕೋಟಿ ಜನರಲ್ಲಿ ಅಂದಾಜು 26% ವೀರಶೈವ ಲಿಂಗಾಯತ ಸಮಾಜವಿದೆ. ಈಗ ಇರುವ ಜನಸಂಖ್ಯೆಗಿಂತ ಶೇ.50ರಷ್ಟು ಕಡಿಮೆ ಇರುವುದಾಗಿ ತೋರಿಸಲು ಮುಂದಾಗಿದ್ದಾರೆ.
ಹೀಗೆ ತಮಗೆ ಬೇಕಾದ ಸಮಾಜವನ್ನು ಡಬಲ್ ಆಗಿ ತೋರಿಸೋದು ಬೇಡದೆ ಇರುವ ಸಮಾಜವನ್ನು ಕಡಿಮೆ ತೋರಿಸುವ ಹುನ್ನಾರ ನಡೆದಿದೆ. ಕಾಂಗ್ರೆಸ್ನವರು 2018ರಲ್ಲಿ ಡಿವೈಡ್ ಮಾಡಲು ಹೋಗಿ ಹೀನಾಯವಾಗಿ ಸೋತಿದ್ದಾರೆ. ಈಗ ನೋಡಿದರೆ ಜಾತಿಗಣತಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರೇ ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಐದು ಗ್ಯಾರಂಟಿಗಳನ್ನು ಘೋಷಿಸಲಾಗಿದ್ದು, ಈವರೆಗೆ ಸರಿಯಾಗಿ ಜಾರಿಯಾಗಿಲ್ಲ. ಈ ಸರ್ಕಾರಕ್ಕೆ ಏಳು ಕೋಟಿ ಜನ ಸಾಫ ಹಾಕುತ್ತಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನತ ಇದಕ್ಕೆ ತಕ್ಕ ಉತ್ತರ ಕೊಡಲಿದ್ದು, ಬಿಜೆಪಿ 28 ಸ್ಥಾನಗಳಲ್ಲಿ ಗೆಲ್ಲುವುದು ಪಕ್ಕಾ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಭವಿಷ್ಯ ನುಡಿದಿದ್ದಾರೆ.