ಬಾಗಲಕೋಟೆ:
ಜಿಲ್ಲೆಯ ಹುನಗುಂದ ಶಾಸಕ ಕಾಶಪ್ಪನವರ ಮಧ್ಯಸ್ಥಿಕೆಯಲ್ಲಿ ೧೦ ವರ್ಷ ಹಳೆಯದಾದ ಮುಸ್ಲಿಂ ಸಮಾಜದ ವ್ಯಾಜ್ಯವೊಂದನ್ನು ಶನಿವಾರ ರಾತ್ರಿ ನಡೆದ ರಾಜೀ ಸಂದಾನದ ಸಭೆಯಲ್ಲಿ ಸೌಹಾರ್ಧಯುತವಾಗಿ ಬಗೆ ಹರಿಸಲಾಯಿತು.
ಹುನಗುಂದ ಮತ್ತು ಇಲಕಲ್ಲನ ಮುಖಂಡರಾದ, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮೆಹಬೂಬ ಸರಕಾವಸ , ಇಲಕಲ್ಲ ಅಂಜುಮನ್ ಅಧ್ಯಕ್ಷ ಉಸ್ಮಾನಗನಿ ಹುಮನಾಬಾದ, ರಾಜ್ಯ ಕೆ.ಎಂ.ಯೂ ಅಧ್ಯಕ್ಷ ಜಬ್ಬಾರ ಕಲಬುರ್ಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜಾಕ ತಟಗಾರ ನೇತೃತ್ವದಲ್ಲಿ ಎರಡು ಗುಂಪಿನ ಮಧ್ಯೆ ನಡೆಯುತ್ತಿದ್ದ ಸಮಾಜದ ವ್ಯಾಜ್ಯಕ್ಕೆ ಉಭಯ ಗುಂಪಿನ ಜನರು ಒಪ್ಪುವ ನ್ಯಾಯೋಜಿತ ಪರಿಹಾರ ಕಂಡುಕೊಂಡ ಹಿನ್ನೆಲಯಲ್ಲಿ ಕಳೆದ ಹತ್ತು ವರ್ಷಗಳಿಂದ ಗ್ರಾಮದಲ್ಲಿ ನಡೆಯುತ್ತಿದ ದ್ವೇಶ, ಅಸೂಯೆಯ ಪ್ರಕರಣಕ್ಕೆ ಅಂತಿಮ ಮೊಳೆ ಹೊಡೆಯಲಾಯಿತು,
ಪ್ರಕರಣ ಸುಖಾಂತ್ಯಗೊಳಿಸಿದ ನಂತರ ಉಭಯ ಗುಂಪಿನ ಮುಖಂಡರಾದ ಖಾಜೆಸಾಬ್ ಬಾಗವಾನ್ ಹಾಗೂ ಬಶೀರ್ ಅಹಮ್ಮದ್ ಕರ್ನೂಲ್ ಇಬ್ಬರನ್ನು ಶಾಸಕ ವಿಜಯಾನಂದ ಕಾಶಪ್ಪನವರ ಸಕ್ಕರೆ ತಿನ್ನಿಸಿ ಶುಭ ಕೋರಿದರು.
ನಂತರ ಮಾತನಾಡಿ, ಇದೊಂದು ಐತಿಹಾಸಿಕ ಘಟನೆ ಇಂದು ಇತಿಹಾಸದ ಪುಟ ಸೇರಿದ್ದು ಸಂತಸ ತಂದಿದೆ ಎಂದ ರಲ್ಲದೆ ಗ್ರಾಮದಲ್ಲಿ ಮುಸ್ಲಿಂ ಸಮಾಜ ೧೫-೨೦ ವರ್ಷಗಳ ಹಿಂದೆ ಯಾವ ರೀತಿ ಅನ್ಯೋನ್ಯತೆ, ಸಹೋದರತೆ ಹಾಗೂ ಸ್ನೇಹದಿಂದ ಕೂಡಿಕೊಂಡು ಬಾಳುತ್ತಿದ್ದರೂ ಅದೆ ರೀತಿ ಜೀವನ ನಡೆಸಬೇಕು,
ಹಳೆಯದನ್ನು ಎಲ್ಲರೂ ಮರೆಯಬೇಕು, ಸಮುದಾಯದ ಹಿರಿಯರು, ಇಬ್ಬರಿಗೂ ಸೂಚಿಸಿರುವ ಪರಿಹಾರದಂತೆ ಗ್ರಾಮಕ್ಕೆ ಒಂದೇ ಇಸ್ಲಾಮಿಯ ತಂಜೀಮ ಕಮೀಟಿ ಅಸ್ತಿತ್ವದಲ್ಲಿ ಇರಬೇಕು.
ಸುನ್ನಿ ಪಂಗಡಕ್ಕೆ ಈಗಾಗಲೇ ಮಸೀದಿ ಕಟ್ಟಡವಿದೆ ತಬ್ಲಿಕ್ ಪಂಗಡದ ಸಹೋದರರಿಗೆ ಪ್ರಾರ್ಥನೆ ಮಾಡಲು ತಂಜೀಮ ಕಮೀಟಿಯ ಜಾಗದಲ್ಲಿ ಹೊಸ ಮಸಿದಿ ನಿರ್ಮಾಣ ಮಾಡಿಕೊಂಡು ಪ್ರೀತಿ-ಪ್ರೇಮ ಹಾಗೂ ಸೌಹಾರ್ಧತೆಯಿಂದ ಇರಬೇಕು.
ಗ್ರಾಮದ ಸಮುದಾಯದ ಅಭಿವೃದ್ಧಿಗೆ ಬೇಕಿರುವ ಶಾದಿಮಹಲ ನಿರ್ಮಾಣದ ಜವಾಬ್ದಾರಿ ನನ್ನ ಮೇಲೆ ಬಿಡಿ ೧ ಕೋಟಿ ಅನುದಾನದ ಸಮುದಾಯ ಭವನ ನಿರ್ಮಾಣ ಮಾಡಿ ಕೊಡೆತ್ತೇನೆ ಎಂದರು.
ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಉಭಯತರು ಕಾನೂನಾತ್ಮಕವಾಗಿ ಪರಿಹರಿಸಿಕೊಳ್ಳಲು ನ್ಯಾಯಾಂಗ ವ್ಯವಸ್ಥೆಯಲ್ಲಿ ಅವಕಾಶಗಳಿದ್ದು ರಾಷ್ಟ್ರೀಯ ಕಾನೂನು ಸೇವೆಗಳ ಕಾಯ್ದೆ ೧೯೮೭ ಸೆಕ್ಷನ್ ೨೦ ಮತ್ತು ೨೧ ಕೇಂದ್ರ ನ್ಯಾಯಾಲಯ ಶುಲ್ಕ ಕಾಯ್ದೆ ೧೯೭೦ರ ಸೆಕ್ಷನ್ ೧೬ ರನ್ವಯ ರಾಜಿ ಸಂದಾನದ ಮೂಲಕ ಇಧ್ಯರ್ಥಗೊಂಡು ಸುಖಾಂತ್ಯಗೊಳ್ಳುವ ಪ್ರಕರಣಗಳಿಗೆ, ಶೇ. ೧೦೦ ಶುಲ್ಕ ಮರುಪಾವತಿಗೆ ಹೈಕೊರ್ಟ ಆದೇಶಿಸಿರುತ್ತದೆ.
ಈ ಆದೇಶದಂತೆ ಉಭಯ ಕಕ್ಷಿದಾರರಿಗೆ ಶೇ. ೧೦೦ ಶುಲ್ಕ ಮರುಪಾವತಿಯ ಸೌಲಭ್ಯ ಸಿಗಲಿದ್ದು ನ್ಯಾಯವಾದಿಗಳ ಮುಖಾಂತರ ವ್ಯಾಜ್ಯ ಹಿಂದಕ್ಕೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರಲ್ಲದೆ ಕಾನೂನು ಮಾರ್ಗದರ್ಶನ ನೀಡುವದಾಗಿ ಹೇಳಿದರು.
ಈ ಸಂಧರ್ಭ ದಲ್ಲಿ ಗುಡೂರ್ ಗ್ರಾಮ ದ ಮುಸ್ಲಿಂ ಸಮುದಾಯದ ನೂರಾರು ಜನರು ಉಪಸ್ಥಿತರಿದ್ದರು