ಜನಪರ ಕೇಂದ್ರ ಸರ್ಕಾರದ ಯೋಜನೆಗಳು ಸದುಪಯೋಗವಾಗಲಿ: ಗದ್ದಿಗೌಡರ
ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಆಡಗಲ್ಲ್ ಗ್ರಾಮದಲ್ಲಿ ನಮ್ಮ ಸಂಕಲ್ಪ ವಿಕಸಿತ ಭಾರತ ಅಭಿಯಾನದ ಸಮಾರಂಭ ವನ್ನು ಸಂಸದರಾದ ಪಿ.ಸಿ .ಗದ್ದಿಗೌಡರ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು,ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲಪುಬೇಕು ಎಂಬ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಜಾಗೃತ ಮೂಡಿಸುವ ಕಾರ್ಯ ಮಾಡುತ್ತಿದೆ.ಹಿಂದುಳಿದ ಜನಾಂಗದ ಇರುವ ಗ್ರಾಮಗಳಲ್ಲಿ ಈ ಯಾತ್ರೆ ಹಮ್ಮಿಕೊಂಡಿದ್ದು,ಪ್ರಧಾನ ಮಂತ್ರಿ ಮೋದಿ ಅವರು ಸಾಮಾನ್ಯ ಜನರಿಗೆ ಯೋಜನೆ ತಲುಪಬೇಕು ಎಂಬ ದೃಷ್ಟಿಯನ್ನು ಇಟ್ಟುಕೊಂಡಿದ್ದು ವಿಕಸಿತ ಭಾರತ ಅಭಿಯಾನ ಪ್ರಾರಂಭಿಸಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಸದರು ಕರೆ ನೀಡಿದರು.
ಇದೇ ಸಮಯದಲ್ಲಿ ಮುಂದಿನ ದಿನಮಾನದಲ್ಲಿ ಭಾರತ ವಿಕಸಿತ ಮಾಡುವುದಕ್ಕೆ ಸಂಕಲ್ಪ ಮಾಡುವ ಪ್ರಮಾಣಿಸಲಾಯಿತು.ನಂತರ ಕೇಂದ್ರ ಸರ್ಕಾರದ ಯೋಜನೆಯನ್ನು ವಿಡಿಯೋ ಮೂಲಕ ಮಾಹಿತಿ ನೀಡುವ ವಾಹನಕ್ಕೆ ಸಂಸದ ಪಿ ಸಿ ಗದ್ದಿಗೌಡರ ಚಾಲನೆ ನೀಡಿ,ವಿಡಿಯೋ ವೀಕ್ಷಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ವಿಭಾಗೀಯ ವ್ಯವಸ್ಥಾಪಕರಾದ ಕೆ.ಆರ್. ಶೈಲಜಾ, ಲೀಡ್ ಬ್ಯಾಂಕ್ ಮ್ಯಾನೇಜರ್ ಮಧುಸೂಧನ, ಕೆನರಾ ಬ್ಯಾಂಕ್ ಮ್ಯಾನೇಜರ್ ಅನಿತಾ , ಕೆವಿಜಿ ಬ್ಯಾಂಕ್ ಮ್ಯಾನೇಜರ್ ಕಿರಣ ಬಾಬು, ಆಡಗಲ್ ಗ್ರಾಪಂ ಅಧ್ಯಕ್ಷೆ ನಾಗವ್ವ ಮುಷ್ಠಿಗೇರಿ, ಪಿಡಿಓ ಶಿವಪ್ಪ ಕೆ ,
ನಬಾರ್ಡ್ ಡಿಡಿಎಂ ಮಂಜುನಾಥ ರೆಡ್ಡಿ, ಕೆವಿಜಿವಿ ಡಿಎಂ ಶ್ರೀಧರ ಆರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಎಂ.ಸಿ.ಮಧುಸೂದನ್,ಎನ್ ಐಸಿ ಹೆಡ್ ಗಿರಿಯಾಚಾರ್, ಕೆವಿಕೆ ಮುಖ್ಯಸ್ಥರು ಎಸ್.ವಿ.ಪಾಟೀಲ್, ಐಓಸಿ ನಲ್ಲಾ ರಡ್ಡೆ, ಮಿರ್ಜಿ, ಗ್ರಾಮದ ಮುಖಂಡರಾದ ಎಚ್.ವಿ.ಹಿರೇಮಠ, ಪರಸಪ್ಪ ನಾಯ್ಕರ ಸೇರಿದಂತೆ ಗ್ರಾಮಸ್ಥರು ಇದ್ದರು.