This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsNational NewsSports NewsState News

IPL 2024 : ಐಪಿಎಲ್ ಹರಾಜಿಗೆ ನೋಂದಣಿ ಮಾಡಿದ್ದಾರೆ ಸಾವಿರಕ್ಕೂ ಅಧಿಕ ಕ್ರಿಕೆಟಿಗರು!

IPL 2024 : ಐಪಿಎಲ್ ಹರಾಜಿಗೆ ನೋಂದಣಿ ಮಾಡಿದ್ದಾರೆ ಸಾವಿರಕ್ಕೂ ಅಧಿಕ ಕ್ರಿಕೆಟಿಗರು!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿಗೆ (IPL 2024) ಕೆಲವು ಜನಪ್ರಿಯ ಕ್ರಿಕೆಟಿಗರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಮುಂಬೈ ಇಂಡಿಯನ್ಸ್ ಬಿಡುಗಡೆ ಪಡೆದುಕೊಂಡ ವೇಗದ ಬೌಲರ್​ ಜೋಫ್ರಾ ಆರ್ಚರ್ ಅವರು ಉತ್ಸಾಹ ತೋರಿಲ್ಲ. ಒಟ್ಟು 1,166 ಆಟಗಾರರು ಶುಕ್ರವಾರ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಹಂಚಿಕೊಂಡಿರುವ ದಾಖಲೆಯಲ್ಲಿ ತಮ್ಮ ಹೆಸರುಗಳನ್ನು ಹಾಕಿದ್ದಾರೆ. ಡಿಸೆಂಬರ್ 19 ರಂದು ದುಬೈನಲ್ಲಿ ಹರಾಜು ನಡೆಯಲಿದ್ದು, ಈ ಎಲ್ಲ ಆಟಗಾರರು ನಾನಾ ಫ್ರಾಂಚೈಸಿಗಳನ್ನು ಸೇರಿಕೊಳ್ಳಲಿದ್ದಾರೆ. ಆದರೆ ಯಾರೆಲ್ಲ ಅವಕಾಶ ಪಡೆಯುತ್ತಾರೆ ಎಂಬುದೇ ಕುತೂಹಲಕಾರಿ ಸಂಗತಿಯಾಗಿದೆ.

ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಟ್ರಾವಿಸ್ ಹೆಡ್, ಡ್ಯಾರಿಲ್ ಮಿಚೆಲ್ ಮತ್ತು ರಚಿನ್ ರವೀಂದ್ರ ಅವರಂತಹ ಅಗ್ರ ವಿಶ್ವಕಪ್ ಆಟಗಾರರು 10 ತಂಡಗಳ ಫ್ರಾಂಚೈಸಿಯನ್ನು ಲೀಗ್​ನಲ್ಲಿ ಸ್ಥಾನ ಪಡೆಯಲು ಯತ್ನಿಸಿದ್ದಾರೆ. ಲೀಗ್​ನ ಪಾಲ್ಗೊಳ್ಳುವುದಿಲ್ಲ ಎಂದು ವರದಿಯಾಗಿದ್ದ ಆಸ್ಟ್ರೇಲಿಯಾದ ಜೋಶ್​ ಹೇಜಲ್ವುಡ್ ಕೂಡ ತಮ್ಮ ಹೆಸರನ್ನು ಸಲ್ಲಿಸಿದ್ದಾರೆ. ಅವರನ್ನು ಆರ್​​ಸಿ ಬಿ ತಂಡ ಬಿಡುಗಡೆ ಮಾಡಿತ್ತು.

ಯಾವ ದೇಶದವರಿದ್ದಾರೆ?
1,166 ಆಟಗಾರರ ಪೈಕಿ 830 ಭಾರತೀಯ ಆಟಗಾರರು, 336 ವಿದೇಶಿ ಆಟಗಾರರು. ಈ ಪಟ್ಟಿಯಲ್ಲಿ 212 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದವು, 909 ಕ್ರಿಕೆಟಿಗರ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡದವರು 45 ಅಸೋಸಿಯೇಟ್ ಆಟಗಾರರು ಸೇರಿದ್ದಾರೆ.

830 ಭಾರತೀಯರಲ್ಲಿ ವರುಣ್ ಅರೋನ್, ಕೆಎಸ್ ಭರತ್, ಕೇದಾರ್ ಜಾಧವ್, ಸಿದ್ಧಾರ್ಥ್ ಕೌಲ್, ಧವಳ್ ಕುಲಕರ್ಣಿ, ಶಿವಂ ಮಾವಿ, ಶಹಬಾಜ್ ನದೀಮ್, ಕರುಣ್ ನಾಯರ್, ಮನೀಶ್ ಪಾಂಡೆ, ಹರ್ಷಲ್ ಪಟೇಲ್, ಚೇತನ್ ಸಕಾರಿಯಾ, ಮನ್ದೀಪ್ ಸಿಂಗ್, ಬರಿಂದರ್ ಸ್ರಾನ್, ಶಾರ್ದೂಲ್ ಠಾಕೂರ್, ಜಯದೇವ್ ಉನಾದ್ಕತ್, ಹನುಮ ವಿಹಾರಿ, ಸಂದೀಪ್ ವಾರಿಯರ್ ಮತ್ತು ಉಮೇಶ್ ಯಾದವ್ ಇದ್ದಾರೆ.

ಇತ್ತೀಚೆಗೆ ಫ್ರಾಂಚೈಸಿಗಳು ಬಿಡುಗಡೆ ಮಾಡಿದ ಭಾರತೀಯರ ಪೈಕಿ ಹರ್ಷಲ್ ಪಟೇಲ್, ಕೇದಾರ್ ಜಾಧವ್, ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್ ಮಾತ್ರ ತಮ್ಮ ಮೂಲ ಬೆಲೆಯನ್ನು ಗರಿಷ್ಠ 2 ಕೋಟಿ ರೂ.ಗೆ ನಿಗದಿಪಡಿಸಿದ್ದಾರೆ. ಉಳಿದ 14 ಆಟಗಾರರು 50 ಲಕ್ಷ ರೂ.ಗಳ ಮೀಸಲು ಬೆಲೆಯಲ್ಲಿ ಲಭ್ಯವಿದ್ದಾರೆ.

ಆರ್ಚರ್ (27) ಹರಾಜಿಗೆ ತಮ್ಮ ಹೆಸರನ್ನು ಏಕೆ ನೀಡಿಲ್ಲ ಎಂಬುದಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಪ್ರತಿಕ್ರಿಯಿಸಿಲ್ಲ ಆದರೆ ಗಾಯದಿಂದಾಗಿ ಅವರು ಈ ವರ್ಷ ಹಾಜರಾಗುವುದಿಲ್ಲ ಎಂದು ಐಪಿಎಲ್ ತಂಡಗಳಲ್ಲಿ ಮಾತನಾಡಲಾಗುತ್ತಿದೆ. ಆದಾಗ್ಯೂ, ವಿಶ್ವಕಪ್ ಆಟಗಾರರಾದ ಆದಿಲ್ ರಶೀದ್, ಹ್ಯಾರಿ ಬ್ರೂಕ್ ಮತ್ತು ಡೇವಿಡ್ ಮಲಾನ್ ಸೇರಿದಂತೆ ಸಾಕಷ್ಟು ಇಂಗ್ಲಿಷ್ ಆಟಗಾರರಿದ್ದಾರೆ. ರೆಹಾನ್ ಅಹ್ಮದ್ (50 ಲಕ್ಷ ರೂ.), ಗಸ್ ಅಟ್ಕಿನ್ಸನ್ (1 ಕೋಟಿ ರೂ.), ಟಾಮ್ ಬ್ಯಾಂಟನ್ (2 ಕೋಟಿ ರೂ.), ಸ್ಯಾಮ್ ಬಿಲ್ಲಿಂಗ್ಸ್ (1 ಕೋಟಿ ರೂ.), ಹ್ಯಾರಿ ಬ್ರೂಕ್ (2 ಕೋಟಿ ರೂ.), ಬ್ರೈಡನ್ ಕಾರ್ಸ್ (50 ಲಕ್ಷ ರೂ.), ಟಾಮ್ ಕರ್ರನ್ (1.5 ಕೋಟಿ ರೂ.), ಬೆನ್ ಡಕೆಟ್ (2 ಕೋಟಿ ರೂ.), ಜಾರ್ಜ್ ಗಾರ್ಟನ್ (50 ಲಕ್ಷ ರೂ.), ರಿಚರ್ಡ್ ಗ್ಲೀಸನ್ (50 ಲಕ್ಷ ರೂ.) ಸ್ಯಾಮ್ಯುಯೆಲ್ ಹೇನ್ (50 ಲಕ್ಷ ರೂ.), ಕ್ರಿಸ್ ಜೋರ್ಡಾನ್ (1.5 ಕೋಟಿ ರೂ.), ಡೇವಿಡ್ ಮಲಾನ್ (1.5 ಕೋಟಿ ರೂ.), ಟೈಮಲ್ ಮಿಲ್ಸ್ (1.5 ಕೋಟಿ ರೂ.), ಜೇಮಿ ಓವರ್ಟನ್ (2 ಕೋಟಿ ರೂ.), ಆಲ್ಲಿ ಪೋಪ್ (50 ಲಕ್ಷ ರೂ.), ಆದಿಲ್ ರಶೀದ್ (2 ಕೋಟಿ ರೂ.), ಫಿಲಿಪ್ ಸಾಲ್ಟ್ (1.5 ಕೋಟಿ ರೂ.), ಜಾರ್ಜ್ ಸ್ಕ್ರಿಮ್ಶಾ (50 ಲಕ್ಷ ರೂ.), ಓಲಿ ಸ್ಟೋನ್ (75 ಲಕ್ಷ ರೂ.), ಡೇವಿಡ್ ವಿಲ್ಲಿ (2 ಕೋಟಿ ರೂ.), ಕ್ರಿಸ್ ವೋಕ್ಸ್ (2 ಕೋಟಿ ರೂ.) ಲ್ಯೂಕ್ ವುಡ್ (50 ಲಕ್ಷ ರೂ.) ಮತ್ತು ಮಾರ್ಕ್ ಅಡೈರ್ (50 ಲಕ್ಷ ರೂ.)

ಫ್ರಾಂಚೈಸಿಗಳಿಗೆ ಸೂಚನೆ
ಹರಾಜು ರಿಜಿಸ್ಟರ್​ನಲ್ಲಿ ಪಟ್ಟಿ ಮಾಡದ ಹೆಚ್ಚುವರಿ ಆಟಗಾರರ ವಿನಂತಿಗಳೊಂದಿಗೆ ಪ್ರತಿಕ್ರಿಯಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಫ್ರಾಂಚೈಸಿಗಳನ್ನು ವಿನಂತಿಸಿದೆ. ವಿನಂತಿಸಿದ ಆಟಗಾರರು ಅರ್ಹರಾಗಿದ್ದರೆ ಮತ್ತು ಆಸಕ್ತಿ ಹೊಂದಿದ್ದರೆ ಸ್ವಯಂಚಾಲಿತವಾಗಿ ಹರಾಜಿನಲ್ಲಿ ಸೇರಿಕೊಳ್ಳಲಿದ್ದಾರೆ. ಹರಾಜಿನಲ್ಲಿ ಸೇರಿಸಲು ಬಯಸುವ ಆಟಗಾರರ ಪಟ್ಟಿಯೊಂದಿಗೆ ಪ್ರತಿಕ್ರಿಯಿಸಲು ಫ್ರಾಂಚೈಸಿಗಳಿಗೆ ಸೂಚನೆ ನೀಡಲಾಗಿದೆ. ಕೇವಲ 77 ಸ್ಲಾಟ್​ಗಳನ್ನು ಮಾತ್ರ ಭರ್ತಿ ಮಾಡಬೇಕಾಗಿದೆ, ಅದರಲ್ಲಿ ಗರಿಷ್ಠ 30 ವಿದೇಶಿ ಆಟಗಾರರು ಇರಬಹುದು.

Nimma Suddi
";