This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Crime NewsEducation NewsFeature ArticleHealth & FitnessLocal NewsNational NewsState News

ಮಾಲೀಕರಿಗೆ ಚೆಲ್ಲಾಟ ಕಾರ್ಮಿಕರಿಗೆ ಪ್ರಾಣ ಸಂಕಟ ಹೊಣೆ ಯಾರು ?

ಮಾಲೀಕರಿಗೆ ಚೆಲ್ಲಾಟ ಕಾರ್ಮಿಕರಿಗೆ ಪ್ರಾಣ ಸಂಕಟ ಹೊಣೆ ಯಾರು ?

ದುರಂತಗಳಿಗೆ ಬಲಿಯಾಗುವರಿಗೆ ಹೊಣೆಯಾರು?
Or
ಮಾಲೀಕರಿಗೆ ಚೆಲ್ಲಾಟ
ರಕ್ಷಣೆ ಸುರಕ್ಷಿತ ಬಗ್ಗೆ ಕಾರ್ಮಿಕರಿಗಿರಲಿ ಮಾಹಿತಿ

ಪ್ರಕೃತಿ ವಿಕೋಪದಿಂದ ಆಗುವ ದುರಂತಗಳಿಗೂ ಹಾಗೂ ಮಾನವ ನಿರ್ಮಿತ ದುರಂತಗಳಿಗೂ ಬಹಳ ವ್ಯತ್ಯಾಸ ಇದೆ ಪ್ರಕೃತಿ ವಿಕೋಪದಿಂದ ಆಗುವ ದುರಂತಗಳು ತಡೆಗಟ್ಟಲು ಎಷ್ಟೇ ಮುಂಜಾಗ್ರತೆ ಕ್ರಮ ಕೈಗೊಂಡರು ಪ್ರಕೃತಿ ಮುನಿಸಿಕೊಂಡರೆ ಕ್ಷಣಮಾತ್ರದಲ್ಲಿ ಏನು ಬೇಕಾದರೂ ಆಗಬಹುದು.

ಇಂಥ ದುರಂತ ನಡೆದಾಗ ಎಷ್ಟೇ ಮುಂಜಾಗ್ರತೆ ಕ್ರಮ ಕೈಗೊಂಡರು ದುರಂತ ತಪ್ಪಿಸಲು ಸಾಧ್ಯವಾಗುವುದಿಲ್ಲ ಆದರೆ ಮಾನವ ನಿರ್ಮಿತ ದುರಂತ ನಡೆದಾಗ ನಾವು ಮುಂಜಾಗ್ರತೆ ಕ್ರಮ ಕೈಗೊಂಡರೆ ಆಗಬಹುದಾದ ದುರಂತ ತಪ್ಪಿಸಬಹುದು.

ಇಂತಹ ದುರಂತಗಳು ಇತ್ತೀಚೆಗೆ ರಾಜ್ಯದಲ್ಲಿ ಆಗಾಗ ಹೆಚ್ಚಿನ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಕಟ್ಟಡ ಅಗ‌್ನಿ ದುರಂತಗಳಂತ ದುರ್ಘಟನೆಗಳು ನಡೆಯುತ್ತಿದ್ದು ಇಂತವು ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸದೆ ಇರುವುದು ಗುತ್ತಿಗೆದಾರರು, ಇಂಜಿನಿಯರ್, ಬಹುಮಹಡಿ ಕಟ್ಟಡಗಳ ಮಾಲೀಕರುಗಳು, ವ್ಯಾಪಾರಸ್ಥರು ಅಜಾಗರೂಕತೆಯಿಂದ ಆದಾಯದ ಕಡೆ ಮಾತ್ರ ಗಮನ ಹರಸಿ ರಕ್ಷಣಾ ಸುರಕ್ಷಿತ ಬಗ್ಗೆ ಅಜಾಗರೂಕತೆ ತೋರಿಸುತ್ತಿರುವುದೇ ದುರಂತಗಳು ಹೆಚ್ಚಾಗಲು ಕಾರಣವಾಗುತ್ತಿದೆ.

ಮಾಲೀಕರು ತಮ್ಮ ಮೂಲ ಆದಾಯ ಹೆಚ್ಚಿಸಿಕೊಳ್ಳುವತ್ತ ಹೆಚ್ಚು ಗಮನ ಹರಿಸಿ ಸುರಕ್ಷಿತೆಯ ಬಗ್ಗೆ ನಿರ್ಲಕ್ಷ ತೋರುತ್ತಾ ಬರುತ್ತಿರುವುದೇ ದುರಂತಗಳು ದುರ್ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇವುಗಳಿಗೆ ಬಲಿ ಯಾಗುವವರಿಗೆ ಹೊಣೆ ಯಾರು ಇಲ್ಲದಂತಾಗಿ ಬಲಿಯಾದವರ ಕುಟುಂಬಗಳ ಸೋಚನಿಯ ಸ್ಥಿತಿ ಯಾರಿಗೂ ಕಾಣಿಸುವುದಿಲ್ಲ.

ವ್ಯಾಪಾರಸ್ಥರು, ಅಂಗಡಿ ಮಾಲೀಕರು, ಗುತ್ತಿಗೆದಾರರು,ಇಂಜಿನಿಯರ್ ಗಳು ಮಾಡುವ ಪ್ರಮಾದಗಳಿಂದ ಬಿಸಿನೆಸ್ ಮಾಡುವ ಗೋದಾಮ ಅಂಗಡಿಗಳ ಮಾಲಿಕರು ಕಟ್ಟಡ ಗಳ ಮೇಲೆ ಜೀವ ಹಿಮಾ ಪಾಲಿಸಿ ಮಾಡಿಸಿ ಕೈ ತೋಳಿದು ಜಾರಿಕೊಂಡು ಬಡ ಕುಟುಂಬ ಬಲಿ ಪಡುತ್ತಿರುವುದು ಯಾರಿಗೂ ಗೊತ್ತಾಗದಂತಾಗಿದೆ

ಯಾವುದೇ ವ್ಯವಹಾರ ವ್ಯಾಪಾರಸ್ಥರು ಗುತ್ತಿಗೆದಾರರು ಇಂಜಿಯರಗಳು ತಾವು ನಿರ್ಮಾಣ ಮಾಡುವ ಕಟ್ಟಡ ಬಹುಮಹಡಿ ಕಟ್ಟಡ ಗೋಧಾಮಗಳಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೆ ಮನಬಂದಂತೆ ಉಪಯೋಗಿಸುತ್ತಿರುವುದೇ ಇವತ್ತಿನ ಕಟ್ಟಡ ,ಅಗ್ನಿ, ಮತ್ತು ಇತರೆ ದುರಂತ ದುರ್ಘಟನೆಗಳಿಗೆ ಕಾರಣವಾಗುತ್ತಿದೆ.

ರಾಜ್ಯದಲ್ಲೆಡೆ ಇಂತಹ ಅನೇಕ ದುರಂತಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಾರ್ಮಿಕರನ್ನು ಬಲಿಪಡುತ್ತಲೇ ಬಂದಿರುತ್ತವೆ , ಕಟ್ಟಡ ಅಗ್ನಿ ಹಾಗೂ ಇತರೆ ಕಟ್ಟಡ ದುರಂತಗಳಲ್ಲಿ ಬಲಿಯಾಗುವವರ ಕುಟುಂಬಗಳಿಗೆ ಜವಾಬ್ದಾರಿ ಇಲ್ಲದಂತಾಗಿದೆ ಹೊಟ್ಟೆಪಾಡಿಗಾಗಿ ದುಡಿಯಲಿಕ್ಕೆ ಬಂದು ಶವಾಗಿ ಮನೆಗೆ ಹೋಗುವ ಅದೆಷ್ಟೋ ಕಾರ್ಮಿಕ ಕುಟುಂಬ ವರ್ಗದ ಗೋಳು ಕೇಳುವವರಿಲ್ಲದಂತಾಗಿದೆ.

ಹೀಗಾಗಿ ವ್ಯವಹಾರ ವ್ಯಾಪಾರ ಮಾಡುವ ಪ್ರತಿಯೊಬ್ಬ ವ್ಯಾಪಾರಸ್ಥರಿಗೂ ಸರ್ಕಾರ ಹೇಗೆ ಜಿ,ಎಸ್‌,ಟಿ, ಕಡ್ಡಾಯ ಮಾಡಿರುತ್ತದೆಯೊ ಅದೇ ಮಾದರಿಯ ಸುರಕ್ಷಿತಾ ಕ್ರಮ ಕಟ್ಟು ನಿಟ್ಟಾಗಿ ಜಾರಿಗೊಳಿಸುವಂತೆ ಕ್ರಮ ಕೈಗೊಂಡು ಮುನ್ನಲೆಗೆ ತಂದರೆ ಮಾತ್ರ ಇಂಥಹ ದುರಂತ ದುರ್ಘಟನೆಗಳು ಕಡಿಮೆಗೊಳಿಸಲು ಮತ್ತು ತಪ್ಪಿಸಲು ಸಾಧ್ಯ

ಹಾಗಾಗಿ ಕೇಂದ್ರ ರಾಜ್ಯ ಸರ್ಕಾರಗಳು ಕಟ್ಟಡ, ಬಹುಮಹಡಿ ಕಟ್ಟಡ, ಗೋಧಾಮ ಅಂಗಡಿ ವ್ಯಾಪಾರ ಮಳಿಗೆ ಪ್ರತಿ ಕಾರ್ಮಿಕರು ದುಡಿಯುವ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತಯ ಬಗ್ಗೆ ಮೊದಲನೆಯ ಆದ್ಯತೆ ಕೊಟ್ಟು ಕಟ್ಟುನಿಟ್ಟಿನ ಆದೇಶ ಮಾಡಿ ಜಾರಿಗೆ ತಂದು ಕಾರ್ಮಿಕರು ದುಡಿಯುವ ಸ್ಥಳಗಳಲ್ಲಿ ಪಾಲನೆಯಾಗಬೇಕಾಗಿರುವ ಕ್ರಮ ಅನುಸರಿಸಿದರೆ ಕಟ್ಟಡ ಅಗ್ನಿ ಅನಾಹುತ ದುರಂತ ದುರ್ಘಟನೆಗಳು ಇತರೆ ಅನಾಹುತಗಳ ತಡೆಗಟ್ಟಲು ಸಾಧ್ಯವಾಗುತ್ತದೆ

ಇಲ್ಲದಿದ್ದರೆ ಕಾರ್ಮಿಕರ ಸಾವುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಾರ್ಮಿಕರ ಕುಟುಂಬಗಳು ಬೀದಿ ಪಾಲಾಗುತ್ತಿರುವದು ತಪ್ಪಿಸಲಿಕ್ಕೆ ಸರ್ಕಾರದಿಂದಲೂ ಹಾಗೂ ದುಡಿಸಿಕೊಳ್ಳುವ ಮಾಲೀಕರಿಂದಲೂ ಸಾಧ್ಯವಿಲ್ಲ ಇದರಿಂದಾಗಿ ಕೇವಲ ಜೀವ ವಿಮಾ ಪಾಲಿಸಿ ಮಾಡಿಸಿ ಜಾರಿಕೊಳ್ಳುವ ಮಾಲೀಕರ ಮೇಲೆ ನಿರ್ದಾಕ್ಷಣೀಯ ಕ್ರಮ ಕೈಗೊಂಡು ಸೂಕ್ತವಾದ ಸುರಕ್ಷಿತ ಕ್ರಮ ಕೈಗೊಳ್ಳದೆ ಹೋದರೆ ಆಗುವ ಅನಾಹುತಗಳಿಂದ ಅನೇಕ ಕುಟುಂಬಗಳು ಬೀದಿ ಪಾಲಾಗುತ್ತಿವೆ .

ಇವುಗಳನ್ನು ತಪ್ಪಿಸುವ ಜವಾಬ್ದಾರಿ ಸರ್ಕಾರ ಮತ್ತು ದುಡಿಸಿಕೊಳ್ಳುವ ಮಾಲೀಕರ ಮೇಲೆ ಇರುವುದರಿಂದ ಅದನ್ನು ಅಚ್ಚುಕಟ್ಟಾಗಿ ಸುರಕ್ಷಿತಾ ಕ್ರಮ ಅಳವಡಿಸಿಕೊಂಡು ದುಡಿಯುವ ಕಾರ್ಮಿಕರ ರಕ್ಷಣೆ ಮಾಡುವ ಹೋಣೆ ಹೊತ್ತಿರುವ ಗುತ್ತಿಗೆದಾರರು ಇಂಜಿನಿಯರ್‌ ಕಟ್ಟಡಗಳ ಮಾಲೀಕರು ವ್ಯಾಪಾರಸ್ಥರು ಮತ್ತು ಅಂಗಡಿಯ ಮಾಲೀಕರುಗಳ ಮೇಲಿರುವುದರಿಂದ ಸುರಕ್ಷಿತಾ ಕ್ರಮ ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸರ್ಕಾರವು ಕ್ರಮ ಕೈಗೊಂಡು ಜಾರಿಗೆ ತಂದು ಮತ್ತು ಅವುಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುವ ಜವಾಬ್ದಾರಿ ದುಡಿಸಿಕೊಳ್ಳುವ ಮಾಲೀಕರ ಮೇಲೆ ಹೊಣೆ ಹಾಕಿ ಕಟ್ಟು ನಿಟ್ಟಾಗಿ ಪಾಲನೆ ಮಾಡಿ ದುರಂತಗಳು ನಡೆಯದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯು ಕಟ್ಟಡದ ವ್ಯಾಪಾರಸ್ಥ ಮಾಲೀಕರ ಮೇಲೆ ಇರುತ್ತದೆ.

ಕಟ್ಟಡ ಮತ್ತು ಬಹುಮಹಡಿ ಕಟ್ಟಡಗಳ ವ್ಯಾಪಾರಸ್ಥರು ಅಂಗಡಿಕಾರರು ತಾವು ದುಡಿಸಿಕೊಳ್ಳುವ ಮತ್ತು ಕಟ್ಟಡದಲ್ಲಿ ಕೆಲಸ ಮಾಡಿಸಿಕೊಳ್ಳುವ ಕಾರ್ಮಿಕರ ಹಿತದೃಷ್ಟಿಯಿಂದ ಹಾಗೂ ತಮ್ಮ ವಸ್ತುಗಳ ರಕ್ಷಣೆಗಾಗಿ ಕಟ್ಟಡಗಳನ್ನು ಆಗಾಗ ಸರ್ಕಾರದಿಂದ ಬರುವ ಹೊಸ ಹೊಸ ಮಾರ್ಗಸೂಚಿಗಳಂತೆ ಪರಿಶೀಲನೆ ಮಾಡಿಸುತ್ತಾ ಕಟ್ಟಡದ ಸಾಂದ್ರತೆ ದಕ್ಷತೆ ಪರೀಕ್ಷಿಸಿಕೊಳ್ಳುತ್ತ ಪದೇ ಪದೇ ಪರಿಶೀಲನೆಯಲ್ಲಿರಬೇಕು.

ಸರ್ಕಾರಗಳು ನೀಡಿರುವ ನಿಯಮಗಳ ಪಾಲನೆಗಾಗಿ ಸಂಬಂಧಪಟ್ಟ ಇಲಾಖೆಯವರನ್ನ ಸಂಪರ್ಕಿಸಿ ಕಟ್ಟಡಗಳ ಪ್ರಸ್ತುತ ಇರುವಿಕೆಯ ಸಾಮರ್ಥ್ಯ ಹಾಗೂ ಅಗ್ನಿ ಸುರಕ್ಷಿತ ಕ್ರಮ ಕೈಗೊಂಡು ಅವುಗಳು ಸರಿಯಾದ ಕ್ರಮದಲ್ಲಿ ಕೆಲಸ ನಿರ್ವಹಿಸುತ್ತವೆ ಇಲ್ಲವೋ ಎಂದು ಆಗಾಗ ಪರೀಕ್ಷಿಸಿಕೊಂಡು ಕೆಲಸ ನಿರ್ವಹಿಸಬೇಕು.

ಅಂದಾಗ ಮಾತ್ರ ಕಟ್ಟಡಗಳಿಗೆ ಅಳವಡಿಸಿದ ಸುರಕ್ಷಿತ ವಸ್ತುಗಳ ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಕಾರ್ಮಿಕರನ್ನು ಮತ್ತು ತಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ ಅಚಾನಾಕಾಗಿ ಇಂಥಹ ದುರ್ಘಟನೆ ನಡೆದಾಗ ಅವುಗಳಿಂದ ನಾವು ಹೇಗೆ ರಕ್ಷಣೆ ಪಡೆಯಬೇಕು ಎನ್ನುವುದನ್ನು ಸರ್ಕಾರದ ಅಧೀನದಲ್ಲಿರುವ ಆಯಾ ಇಲಾಖೆಗಳಿಂದ ಕೆಲಸ ಮಾಡುವ ಕಾರ್ಮಿಕರಿಗೆ ತರಬೇತಿ ಕೊಡಿಸಿ ದಿಡೀರಂತೆ ನಡೆಯುವ ದುರ್ಘಟನೆಯಿಂದ ಹೊರಬರುವ ಮತ್ತು ಅವುಗಳಿಂದ ಹೇಗೆ ರಕ್ಷಣೆ ಪಡೆಯಬೇಕು ಎಂದು ತರಬೇತಿ ಕೊಡಿಸಿದಾಗ ಮಾತ್ರ ಇಂಥಹ ದುರ್ಘಟನೆ ನಡೆದಾಗ ಕಾರ್ಮಿಕರನ್ನು ರಕ್ಷಿಸಲು ಸಾಧ್ಯವಾಗುತ್ತದೆ.

ಹಾಗಾಗಿ ಕಾರ್ಮಿಕರಿಗೆ ತಾವು ಮಾಡುವ ಕೆಲಸದ ಸ್ಥಳದ ಸಂಪೂರ್ಣ ಮಾಹಿತಿ ಹಾಗೂ ಆ ಕಟ್ಟಡಗಳಲ್ಲಿ ಯಾವ ಯಾವ ವಸ್ತುಗಳು ಎಲ್ಲಿ ಇರುತ್ತವೆ ಎನ್ನುವ ಮನವರಿಕೆಯೊಂದಿಗೆ ಬಹುಮಹಡಿ ಕಟ್ಟಡಗಳಾಗಿದ್ದರೆ ಒಂದು ವೇಳೆ ದುರ್ಘಟನೆ ನಡೆದರೆ ಎಲ್ಲೆಲ್ಲಿ ಪ್ರವೇಶಿಸುವ ಮತ್ತು ನಿರ್ಗಮಿಸುವ ಬಾಗಿಲುಗಳು ಇರುತ್ತವೆ ಮತ್ತು ಎಲ್ಲೆಲ್ಲಿ ಯಾವ ಯಾವ ರೂಮ್ ಗಳು ಇರುತ್ತವೆ ಎನ್ನುವ ಸಂಪೂರ್ಣ ಮಾಹಿತಿಯೊಂದಿಗೆ ತರಬೇತಿಗೊಳಿಸಿ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕು.

ಅಂದಾಗ ಮಾತ್ರ ದಿಡಿರಂತೆ ದುರಂತ ದುರ್ಘಟನೆಗಳು ನಡೆದರೂ ಅವುಗಳಿಂದ ರಕ್ಷಣೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಕಟ್ಟಡಗಳ ಮಾಲೀಕರು ಸರಕಾರದ ಆದೇಶಗಳನ್ನು ಗಾಳಿಗೆ ತೂರಿ ಸುರಕ್ಷಿತ ಮತ್ತು ರಕ್ಷಣೆಗೆ ಆದ್ಯತೆ ಕೊಡದೆ ತಮಗೆ ಮನಬಂದಂತೆ ಕಟ್ಟಡ ಉಪಯೋಗಿಸಿಕೊಳ್ಳುವುದು ಏನೇ ದುರಂತ ಅವಘಡಗಳು ನಡೆದರೆ ಸತ್ತ ಕಾರ್ಮಿಕರಿಗೆ ಪರಿಹಾರ ಎನ್ನುವ ಆಮಿಷ ವಡ್ಡಿ ಕಾರ್ಮಿಕರನ್ನು ದುಡಿಸಿಕೊಂಡು ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುವ ಸರ್ಕಾರ ಮಾಲೀಕರುಗಳು ರಕ್ಷಣಾ ಸುರಕ್ಷತೆಯ ಬಗ್ಗೆ ಆದ್ಯತೆ ನೀಡಿ ಪಾಲನೆ ಮಾಡಿದರೆ ಪರಿಹಾರ ಕೊಡುವ ಪ್ರಮಾಣವೇ ಬರುವುದಿಲ್ಲ.

ಮೂಲವಾಗಿ ಸುರಕ್ಷಿತ ಕ್ರಮಗಳನ್ನು ಅನುಸರಿಸುವಲ್ಲಿ ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ ಇಂತಹ ಪರಂಪರೆ ಮುಂದುವರಿಸಿಕೊಂಡು ಕಟ್ಟಡ ದುರಂತಗಳು ಅಗ್ನಿ ಅವಘಡಗಳಂತ ದೊಡ್ಡ ದೊಡ್ಡ ಘಟನೆಗಳು ಸಂಭವಿಸಿ ಕಾರ್ಮಿಕರ ಸತ್ತ ಜೀವಗಳಿಗೆ ಲೆಕ್ಕವೇ ಇಲ್ಲ ಕಟ್ಟಡ ಬಹುಮಹಡಿ ಕಟ್ಟಡಗಳ ಮಾಲೀಕರುಗಳು ತೋರುವ ನಿರ್ಲಕ್ಷದಿಂದಾಗಿ ಅಮಾಯಕ ಕಾರ್ಮಿಕರು ಜೀವಗಳ ಕಳೆದುಕೊಳ್ಳುತ್ತಿರುವ ಇಂತಹ ದುರ್ಘಟನೆಗಳಿಂದ ಸರ್ಕಾರಗಳಾಗಲಿ ದುಡಿಸಿಕೊಳ್ಳುವ ಮಾಲೀಕರುಗಳಾಗಲಿ ಎಚ್ಚೆತ್ತುಕೊಳ್ಳುವುದು ಯಾವಾಗ ಎನ್ನುವ ಚಿಂತೆ ಕಾರ್ಮಿಕರಲ್ಲಿ ಕೊರಗುತ್ತಿದೆ.

ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇರುವ ಕಾರ್ಮಿಕರು ದುಡಿಯದೇ ಹಾಗೆ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ ಬದುಕಿನ ಹೊಟ್ಟೆಪಾಡಿಗಾಗಿ ದುಡಿಯಲು ತೆರಳುವ ಕಾರ್ಮಿಕರಿಗೆ ರಕ್ಷಣೆ ಇಲ್ಲದೆ ಜೀವ ತೆತ್ತುತ್ತಿರುವ ಕಾರ್ಮಿಕರ ಕುಟುಂಬಗಳು ಬೀದಿಪಾಲ ಆಗುತ್ತಿದ್ದರು ರಕ್ಷಣೆಯ ಸುರಕ್ಷತಾ ಬಗ್ಗೆ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರು ಅವಗಳ ಜಾರಿಗೆ ತರಲು ಮತ್ತು ಅಳವಡಿಸಿಕೊಳ್ಳಲು ಕಾರ್ಮಿಕರನ್ನು ದುಡಿಸಿಕೊಳ್ಳುವ ಮಾಲೀಕರುಗಳು ಹಿಂದೇಟು ಹಾಕುತ್ತಿದ್ದಾರೆ

ಹೀಗಾಗಿ ಕಟ್ಟಡ ಅಗ್ನಿ ದುರಂತದಂತ ದುರ್ಘಟನೆಗಳು ನಡೆದು ಕಾರ್ಮಿಕರು ಜೀವ ತೆತ್ತುವ ಪರಿಸ್ಥಿತಿ ಕಾರ್ಮಿಕರ ಅವರ ಕುಟುಂಬ ವರ್ಗದ ಜೀವಗಳಿಗೆ ಕುತ್ತು ತಂದು ಒಡುತ್ತಿದೆ.

ಬೆಂಗಳೂರ ನಗರ ಧಾರವಾಡ ವಿಜಯಪುರ ಕಲಬುರ್ಗಿ ಹಾಗೂ ರಾಜ್ಯದಲ್ಲೆಡೆ ನಡೆದ ನಿರ್ಮಾಣದ ಹಂತದಲ್ಲಿದ್ದ ಕಟ್ಟಡಗಳೆ ಕುಸಿದು ಬಿದ್ದಂತಹ ಕಟ್ಟಡಗಳಲ್ಲಿ ರಾಜ್ಯದಲ್ಲಿಡೆ ಸಂಭವಿಸಿದ ಅಗ್ನಿ ದುರಂತಗಳಂತಹ ದುರ್ಘಟನೆಗಳು ಸಂಭವಿಸಿದಾಗ ಜೀವ ಕಳೆದುಕೊಂಡು ಸತ್ತ ಕುಟುಂಬಗಳ ಗೋಳು ಒಂದೆಡೆಯಾದರೆ ಅಚಾನಕ್ಕಾಗಿ ನಡೆಯುವ ಇಂತಹ ದುರಂತ ಅವಘಡ ದುರ್ಘಟನೆಗಳಲ್ಲಿ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವಾಗ ಸತ್ತವರಿಗೆ ಪರಿಹಾರ ಬದುಕಿದವರಿಗೆ ಸಾಂತ್ವಾನ ಹೇಳಿ ಹೋಗುವ ಅದೆಷ್ಟೋ ಜನಗಳ ಮಧ್ಯೆ ಆಗತಕ್ಕೊಳಗಾದ ವ್ಯಕ್ತಿ ಸಾಂತ್ವನದ ಮಾತುಗಳನ್ನು ಕೇಳಿ ನನ್ನ ಬದುಕಿಗೆ ಇವರು ಆಸರೆ ಆಗುತ್ತಾರೆ ಎನ್ನುವ ಭರವಸೆಯನ್ನು ಇಟ್ಟುಕೊಳ್ಳುತ್ತಾನೆ.

ಆದರೆ ದುರಂತ ನಡೆದಾಗ ಸಾಂತ್ವನ ಹಾರೈಸಿ, ಧೈರ್ಯದ ಮಾತು ಹೇಳಿದ ಜನರು ಮುಂದಿನ ಬದುಕಿನಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳದಿದ್ದಾಗ ಮೊದಲೇ ದುರಂತದಿಂದ ಅಸಹಾಯಕನಾಗಿರುವ ವ್ಯಕ್ತಿ ಇಂಥ ಆಘಾತಗಳು ಆಗಾಗ ಎದುರಾದಾಗ ಅದರಿಂದ ಇನ್ನಷ್ಟು ಖಿನ್ನತೆಗಳಾಗುತ್ತಾನೆ

ಹೀಗಾಗಿ ಬದುಕಿ ಬಂದವರ ಸ್ಥಿತಿಯಂತೂ ಅಯೊಮಯವಾಗಿರುತ್ತದೆ ದುರಂತದಲ್ಲಿ ಸಿಲುಕಿ ಕೊಂಡಾಗ ದೇಹದ ಯಾವುದೇ ಭಾಗಕ್ಕೂ ಪೆಟ್ಟು ಬಿದ್ದರು ಶಾಶ್ವತ ಹೂನತೆ ಹೊಂದಿ ಜೀವನಪರ್ಯಂತ ಅನುಭವಿಸುವ ನರಕ ಯಾತನೆಯಂತೂ ಯಾರೂ ಕಾಣರು ದುಡಿದು ಕುಟುಂಬ ರಕ್ಷಣೆ ಮಾಡಬೇಕಾದ ಕುಟುಂಬದ ಮುಖ್ಯಸ್ಥನೇ ದುರಂತದಲ್ಲಿ ಸಿಲುಕಿ ಅನಾಹುತಕ್ಕೆ ಒಳಗಾದಾಗ ತನ್ನ ಕುಟುಂಬ ಸಾಕಿ ಸಲುವವರ್ಯಾರು ಎನ್ನುವ ಗೋಳು ಅನುಭವಿಸುವ ನೋವು ಹೇಳುತ್ತಿರುವುದು

ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಗುವ ನಿರ್ಲಕ್ಷತೆಯ ಬಗ್ಗೆ ಮುಂಜಾಗ್ರತೆ ವಹಿಸಿದ್ದರೆ ಇಂಥಹ ಅನಾಹುತಗಳಿಂದ ಕಾರ್ಮಿಕರು ದುಡಿದು ಬದುಕು ಕಟ್ಟಿಕೊಳ್ಳಲು ಹೋಗಿ ಬದುಕನ್ನೇ ಹಾಳು ಮಾಡಿಕೊಂಡು ಜೀವನಪರ್ಯಂತ ಅನುಭವಿಸುವ ನೋವುಗಳಿಗೆ ಹೊಣೆ ಯಾರು ಎನ್ನುವುದು ಕಾರ್ಮಿಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಡುತ್ತದೆ ಈ ರೀತಿ ಸಂಕಷ್ಟದಲ್ಲಿರುವ ಕುಟುಂಬದ ರಕ್ಷಣೆ ಮಾಡುವ ಹೊಣೆ ಯಾರದು ?

ಆಗಾಗ ವಿಕೋಪಗಳನ್ನು ಸೃಷ್ಟಿಸುವ ಪ್ರಕೃತಿ ಮುನಿಸಿಕೊಂಡರೆ ಕ್ಷಣಮಾತ್ರದಲ್ಲಿ ಏನು ಬೇಕಾದರೂ ಅಲ್ಲೋಲು ಕಲ್ಲೋಲ್ಲ ಮಾಡಿ ಹೋಗುತ್ತದೆ ಅಚಾನಕವಾಗಿ ನಡೆಯುವ ಪ್ರಕೃತಿ ವಿಕೋಪದಿಂದ ಆಗುವಂಥ ದುರಂತ ಯಾರಿಂದಲೂ ತಡೆಯಲಿಕ್ಕೆ ಸಾಧ್ಯ ಇಲ್ಲ ಎನ್ನಬಹುದು ಆದರೆ ನಾವೇ ಮಾಡಿದ ಪ್ರಮಾದದಿಂದ ಸುರಕ್ಷಿತ ಕ್ರಮ ಪಾಲಿಸದಿದ್ದರೆ ಆಗುವ ದುರಂತಗಳಿಗೆ ನಾವೇ ಹೊಣೆಗಾರ ಆಗಬೇಕಾಗುತ್ತದೆ

ಇಲ್ಲಿ ದುಡಿಸಿಕೊಳ್ಳುವ ಮಾಲೀಕರಷ್ಟೇ ಜವಾಬ್ದಾರಿ ದುಡಿಯುವ ಕಾರ್ಮಿಕರು ಸುರಕ್ಷಿತ ರಕ್ಷಣೆ ವಿಷಯದಲ್ಲಿ ಕಾರ್ಮಿಕರು ತಿಳಿದಿರಬೇಕು ಕಾರ್ಮಿಕರ ಮೇಲೆಯೂ ಮಾಲಕರಷ್ಟೇ ಜವಾಬ್ದಾರಿ ಕಾರ್ಮಿಕರ ಮೇಲೆ ಇರುತ್ತದೆ ಯಾವುದೇ ಕಟ್ಟಡವಿರಲಿ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಮಿಕರು ಸುರಕ್ಷಿತಾ ಕ್ರಮ ಅಳವಡಿಸಿಕೊಂಡು ಕೆಲಸ ನಿರ್ವಹಿಸಿದರೆ ದುರಂತಗಳು ಸಂಭವಿಸುವುದನ್ನು ತಡೆಗಟ್ಟಬಹುದು

ಯಾವುದೇ ಸುರಕ್ಷಿತ ಕ್ರಮ ಅನುಸರಿಸದೇ ಹುಂಬತನ ಮಾಡಿ ಕೆಲಸಕ್ಕೆ ಹೋಗುವ ಕಾರ್ಮಿಕರು ತಮ್ಮ ಜೀವವನ್ನು ತಾವೇ ಬಲಿ ಕೊಡುತ್ತಾರೆ ಕಾರ್ಮಿಕರು ಜವಾಬ್ದಾರಿಯುತವಾಗಿ ಕೆಲಸ ಮಾಡುವ ಸಂದರ್ಭದಲ್ಲಿ ತಮ್ಮ ರಕ್ಷಣೆ ತಾವು ಮಾಡಿಕೊಂಡು ನಂತರ ಕಾರ್ಮಿಕರು ತಮ್ಮ ತಮ್ಮ ಕೆಲಸ ನಿರ್ವಹಿಸುವ ಕ್ಷೇತ್ರದಲ್ಲಿ ಸುರಕ್ಷಿತವಾಗಿ ಕೆಲಸ ನಿರ್ವಹಿಸಿದರೆ ಮಾತ್ರ ಸುರಕ್ಷಿತವಾಗಿ ಮನೆಗೆ ಬರುತ್ತಾರೆ ಕೆಲಸ ನಿರ್ವಹಿಸುವಾಗ ಸ್ವಲ್ಪ ಅಜಾಗ್ರತೆಯನ್ನು ತೋರಿಸಿದರು ಅಲ್ಲಿ ನಡೆಯುವಂತ ದುರಂತಗಳಿಗೆ ಬಲಿಯಾಗಿ ತಮ್ಮ ಜೀವ ತಾವೇ ಬಲಿ ಕೊಟ್ಟು ಕುಟುಂಬಗಳನ್ನ ಅನಾಥ ಮಾಡಿ ಹೋಗುತ್ತಾರೆ.

ಹೀಗಾಗಿ ಸುರಕ್ಷಿತ ರಕ್ಷಣೆ ದೃಷ್ಟಿಯಿಂದ ದುಡಿಸಿಕೊಳ್ಳುವ ಮಾಲೀಕರ ಜವಾಬ್ದಾರಿ ಎಷ್ಟು ಇರುತ್ತದೆಯೋ ಅಷ್ಟೇ ಜವಾಬ್ದಾರಿ ದುಡಿಯುವ ಕಾರ್ಮಿಕರ ಮೇಲಿರುತ್ತದೆ ಕಾರ್ಮಿಕರು ಕೂಡ ಇಂತಹ ಸಂದರ್ಭದಲ್ಲಿ ಕೆಲಸದ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಅಲ್ಲಿರುವಂತಹ ಸಮಸ್ಯೆಗಳೇನಾದರೂ ಇದ್ದರೆ ದುಡಿಸಿಕೊಳ್ಳುವ ಮಾಲೀಕರಿಗೆ ತಿಳಿಸಿ ಕ್ರಮಗಳನ್ನು ಕೈಗೊಂಡು ಅನಾಹುತಗಳ ಬಗ್ಗೆ ಪೂರ್ವ ಯೋಜನೆ ಯೋಚನೆ ಮಾಡಿ ಕೆಲಸ ಮಾಡಿದಾಗ ಮಾತ್ರ ಇಂಥಹ ದುರಂತಗಳಿಂದ ತಪ್ಪಿಸಿಕೊಳ್ಳಬಹುದು.

ಜಗದೀಶ.ಎಸ್.ಗಿರಡ್ಡಿ.
ಲೇಖಕರು.
9902470856

Nimma Suddi
";