ಬಾಗಲಕೋಟೆ
ಭೂಮಿಯ ಮೇಲೆ ವಾಸಿಸುವ ಎಲ್ಲ ಜೀವಿಗಳಿಗೆ ಮಣ್ಣು ಮತ್ತು ನೀರು ಅತಿ ಅವಶ್ಯ, ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ಹಸ್ತಾಂತರಿಸುವದು ನಮ್ಮ ಕರ್ತವ್ಯ ಎಂದು ಬಿ .ವಿ. ವಿ.ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಡಾ.ಆರ್.ಎನ್.ಹೆರಕಲ್ ಅವರು ಕಾಲೇಜಿನಲ್ಲಿ ದಿ: ೮ ರಂದು ವಿಶ್ವ ಮಣ್ಣು ದಿನಾಚರಣೆ ಆಚರಿಸುವ ಸಂದರ್ಭದಲ್ಲಿ ಸಸಿ ನೆಟ್ಟು ಮಾತನಾಡಿದರು.
ಮನುಷ್ಯನ ಉತ್ತಮ ಆರೋಗ್ಯಕ್ಕೆ ಮಣ್ಣು ಮತ್ತು ನೀರು ಅವಶ್ಯಕ, ಮಣ್ಣಿನಲ್ಲಿ ಒಂದು ಚೈತನ್ಯ ಶಕ್ತಿ ಇದೆ ,ವೈದ್ಯಕೀಯ ಕ್ಷೇತ್ರದ ನಿಸರ್ಗ ಚಿಕಿತ್ಸೆಯಲ್ಲಿ ಮಣ್ಣನ್ನು ಚಿಕಿತ್ಸೆಗಾಗಿ ಬಳಸುವುದನ್ನು ನಾವು ಕಾಣುತ್ತಿದ್ದೇವೆ ,ಒಂದು ಇಂಚು ಮಣ್ಣಿನ ಪದರು ನಿರ್ಮಾಣವಾಗಬೇಕಾದರೆ ಸಾವಿರಾರು ವರ್ಷಗಳು ಬೇಕು ಎಂದು ಹೇಳಿದರು .
ಕಾಲೇಜಿನ ಪ್ರಾಚಾರ್ಯರಾದ ಡಾ. ದಾಕ್ಷಾಯಿಣಿ ಜಂಗಮಶೆಟ್ಟಿ ಅವರು ನಿಸರ್ಗದಲ್ಲಿ ಮಣ್ಣು ಮತ್ತು ನೀರು ದುರ್ಬಳಕೆ ಆಗುವುದನ್ನು ತಡೆಗಟ್ಟುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು. “ಜೀವನಕ್ಕಾಗಿ ಮಣ್ಣು ಮತ್ತು ನೀರು” ಎಂಬ ದ್ಯೇಯ ವಾಕ್ಯದಡಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಸಿವಿಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಆರ್. ಹಿರೇಮಠ ಕಾರ್ಯಕ್ರಮ ಆಯೋಜನೆ ಮಾಡಿದ್ದರು.
ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರಿAಗ್ ಅಧ್ಯಾಪಕರು ,ಇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.