ವಿಜಯಪುರ, ಡಿ. 09: ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದಲಾಗುತ್ತಿರುವ ವಿದ್ಯಮಾನಗಳಿಗೆ ತಕ್ಕಂತೆ ಶಿಕ್ಷಕರು ನಿರಂತರ ಜ್ಞಾನಾರ್ಜನೆ ಮಾಡುತ್ತ ಆದರ್ಶ ಶಿಕ್ಷಕರಾಗಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ನಗರದ ಕಂದಗಲ ಹನಮಂತರಾಯ ರಂಗಮಂದಿರದಲ್ಲಿ ಆದರ್ಶ ಶಿಕ್ಷಕರ ವೇದಿಕೆ ಮತ್ತು ಜಿಲ್ಲಾ ಯುವ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ನಡೆದ ಶೈಕ್ಷಣಿಕ ಚಿಂತನಾಗೋಷ್ಠಿ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಗಾಟಿಸಿ ಅವರು ಮಾತನಾಡಿದರು.
ದೇಶ ಮತ್ತು ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಶ್ಲಾಘನೀಯವಾಗಿದೆ. ಶಿಕ್ಷಕರು ಆದರ್ಶರಾಗಿರಬೇಕು. ಇದರಿಂದ ಸ್ಪೂರ್ತಿ ಪಡೆದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕನಸುಗಳನ್ನು ನನಸು ಮಾಡಲು ಶ್ರಮಿಸುತ್ತಾರೆ. ನಮ್ಮ ಅಜ್ಜ ತಿಕೋಟಾದ ಎ. ಟಿ. ಪಾಟೀಲರು ರಾಷ್ಟ್ರ ಮಟ್ಟದಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿದ್ದರು. ಅಲ್ಲದೇ, ತರಗತಿಗಳಿಗೆ ಗೈರು ಹಾಜರಾದ ತಮ್ಮ ಸ್ವಂತ ಮಗನನ್ನೇ ಒಂದು ವರ್ಷ ಫೇಲ್ ಮಾಡಿ ಆದರ್ಶ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಶಿಕ್ಷಕರ ಆದರ್ಶಗಳು ಇತರರಿಗೆ ಪ್ರೇರಣೆಯಾಗಬೇಕು. ಪ್ರತಿಯೊಂದು ಗ್ರಾಮಗಳಲ್ಲಿ ಪ್ರತಿಭೆಗಳಿವೆ. ಗ್ರಾಮೀಣ ಮಕ್ಕಳಿಗೆ ಪ್ರೋತ್ಸಾಹ ಸಿಕ್ಕರೆ ಅವರು ಕಾನ್ವೆಂಟ್ ಮಕ್ಕಳಿಗಿಂತಲೂ ಹೆಚ್ಚು ಸಾಧನೆ ಮಾಡುತ್ತಾರೆ. ನಮ್ಮ ಕಾಲದಲ್ಲಿ ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಕಠಿಣ ಶ್ರಮದಿಂದ ಈಗ ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಮಕ್ಕಳಲ್ಲಿ ಕೀಳರಿಮೆ ಬಾರದಂತೆ ಗಮನ ವಹಿಸಬೇಕು. ಬಡವರ ಮಕ್ಕಳು ಅನಾನುಕೂಲಕತೆ ಮಧ್ಯೆ ಸಾಧನೆ ಮಾಡುವುದರಿಂದ ಅವರಿಗೆ ಶಿಕ್ಷಕರು ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು.
ಕೃತಕ ಬುದ್ದಿಮತ್ತೆ ಬಹಳ ದೊಡ್ಡ ಬದಲಾವಣೆ ತರಲಿದ್ದು, ಮುಂಬರುವ ದಿನಗಳಲ್ಲಿ ಶಿಕ್ಷಕರರಿಗೆ ಸವಾಲಾಗಲಿದೆ. ಇದರಿಂದ ಒಳ್ಳೆಯದು ಮತ್ತು ಕೆಟ್ಟದ್ದೂ ಎರಡೂ ಆಗುತ್ತದೆ. ಕೃತಕ ಬುದ್ದಿಮತ್ತೆಯಲ್ಲಿ ಮಾನವೀಯ ಸ್ಪರ್ಷ(Human Touch) ಗಳಿಗೆ ಆಸ್ಪದವಿರುವುದಿಲ್ಲ. ಹೀಗಾಗಿ ಶಿಕ್ಷಕರು ಅಂತರ್ಜಾಲ ಬಳಸಿಕೊಂಡು ಸುಳ್ಳುಸುದ್ದಿಗಳನ್ನು ಬಿಟ್ಟು, ವಿಶ್ವಾಸಾರ್ಹತೆ, ಸತ್ಯ ಸಂಗತಿಗಳ ಬಗ್ಗೆ ಅಪಡೇಟ್ ಆಗಬೇಕು. ಪಾಪ- ಪುಣ್ಯದ ಅರಿವಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಒಳಿತನ್ನು ಮಾಡಿದರೆ, ಅದರ ಪುಣ್ಯ ಪ್ರತಿಯೊಬ್ಬರಿಗೂ ಸಿಗುತ್ತದೆ. ನಾನು ಸಾಧ್ಯವಿರುವಷ್ಡು ಬಡವರಿಗೆ ಶೈಕ್ಷಣಿಕ ನೆರವು ನೀಡುತ್ತಿದ್ದೇನೆ. ಸರಕಾರಿ ಕೋಟಾದಡಿ ಸೀಟು ಪಡೆದ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುತ್ತೇನೆ. ಅವರ ಕನಸು ನನಸು ಮಾಡಲು ಸಹಾಯ ಮಾಡುತ್ತಿದ್ದೇನೆ. ಹೀಗಾಗಿ ಶಿಕ್ಷಕರ ವೃತ್ತಿ ಪವಿತ್ರ ಮತ್ತು ಶ್ರೇಷ್ಠವಾಗಿದೆ. ಕಾರ್ಯಕ್ರಮದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳಿಗೆ ಗೌರವ ಸಲ್ಲಿಸಿರುವ ಶಿಕ್ಷಕರು ಸ್ವಾಮೀಜಿಗಳ ಆಶಯದಂತೆ ಆದರ್ಶ ಶಿಕ್ಷಕರಾಗಿ ಬಾಳಬೇಕು ಎಂದು ಅವರು ಕರೆ ನೀಡಿದರು.
ಇದೇ ವೇಳೆ, ಹೊರ ರಾಜ್ಯಗಳ ಶಿಕ್ಷಕರು ಸಲ್ಲಿಸಿದ ಮನವಿಗೆ ಸ್ಪಂದಿಸಿ, ಅರ ಬೇಡಿಕೆಗಳಿಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸ್ಪಂದಿಸಲಾಗುವುದು ಎಂದು ಎಂ. ಬಿ. ಪಾಟೀಲ ಭರಸವೆ ನೀಡಿದರು.
ಈ ಸಂದರ್ಭದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ದೇವರು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್. ಎಚ್. ನಾಗೂರ, ಆದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ಉಮೇಶ ಕವಲಗಿ, ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ನಿವೃತ್ತ ಉಪನಿರ್ದೇಶಕಿ ಸಾಯಿರಾಬಾನು ಖಾನ, ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ವಿಜಯಪುರ ಗ್ರಾಮೀಣ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಸಿದ್ದಣ್ಣ ಸಕ್ರಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ, ಯುವ ಪರಿಷತ ಜಿಲ್ಲಾಧ್ಯಕ್ಷ ಶರಣು ಸಬರದ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಜುಬೇರ ಕೆರೂರ, ಎಂ. ಎಸ್. ಭೂಸಗೊಂಡ, ಶಂಕರ ಖಂಡೆಕರ, ಎಸ್. ಎಸ್. ಜೇವೂರ, ರಾಜು ಬಿಸನಾಳ, ಎಸ್. ಎಸ್. ಪಾಟೀಲ, ಆನಂದ ಮೂಲಿಮನಿ, ಶಿವಾನಂದ ಮಂಗಾನವರ, ಎಸ್. ಡಿ. ಪಾಟೀಲ, ಎಸ್. ಆರ್. ಪಾಟೀಲ, ಎಸ್. ಎಸ್. ಸೋಲಾಪುರ, ಎಂ. ಕೆ. ಪಾಟೀಲ, ಬಸವರಾಜ ಅಮರಪ್ಪಗೋಳ, ಮುತ್ತಪ್ಪ ಪೂಜಾರಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.
ಜಗದೀಶ ಬೋಳಸೂರ ಸ್ವಾಗತಿಸಿದರು. ಎಚ್. ಕೆ. ಬೂದಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಬೂಲ್ ಕೊಕಟನೂರ ಮತ್ತು ರೇವತಿ ಬೂದಿಹಾಳ ನಿರೂಪಿಸಿದರು. ಸಂತೋಷ ಕುಲಕರ್ಣಿ ವಂದಿಸಿದರು.
*1.ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ:* ವಿಜಯಪುರ ನಗರದಲ್ಲಿ ನಡೆದ ಶೈಕ್ಷಣಿಕ ಚಿಂತನಾಗೋಷ್ಠಿ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಸಚಿವ ಎಂ. ಬಿ. ಪಾಟೀಲ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಚನ್ನವೀರ ದೇವರು, ಎನ್. ಎಚ್. ನಾಗೂರ, ಉಮೇಶ ಕವಲಗಿ, ಸಂಗಮೇಶ ಬಬಲೇಶ್ವರ, ಸಾಯಿರಾಬಾನು ಖಾನ, ಸಿದ್ದಣ್ಣ ಸಕ್ರಿ, ಸುರೇಶ ಶೆಡಶ್ಯಾಳ, ಶರಣು ಸಬರದ ಮುಂತಾದವರು ಉಪಸ್ಥಿತರಿದ್ದರು.
*2.ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ:* ವಿಜಯಪುರ ನಗರದಲ್ಲಿ ನಡೆದ ಶೈಕ್ಷಣಿಕ ಚಿಂತನಾಗೋಷ್ಠಿ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಗಾಟಿಸಿ ಸಚಿವ ಎಂ. ಬಿ. ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ಚನ್ನವೀರ ದೇವರು, ಎನ್. ಎಚ್. ನಾಗೂರ, ಉಮೇಶ ಕವಲಗಿ, ಸಂಗಮೇಶ ಬಬಲೇಶ್ವರ, ಸಾಯಿರಾಬಾನು ಖಾನ, ಸಿದ್ದಣ್ಣ ಸಕ್ರಿ, ಸುರೇಶ ಶೆಡಶ್ಯಾಳ, ಶರಣು ಸಬರದ ಮುಂತಾದವರು ಉಪಸ್ಥಿತರಿದ್ದರು.
*3.ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ:* ವಿಜಯಪುರ ನಗರದಲ್ಲಿ ನಡೆದ ಶೈಕ್ಷಣಿಕ ಚಿಂತನಾಗೋಷ್ಠಿ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಚಿವ ಎಂ. ಬಿ. ಪಾಟೀಲ ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಚನ್ನವೀರ ದೇವರು, ಎನ್. ಎಚ್. ನಾಗೂರ, ಉಮೇಶ ಕವಲಗಿ, ಸಂಗಮೇಶ ಬಬಲೇಶ್ವರ, ಸಾಯಿರಾಬಾನು ಖಾನ, ಸಿದ್ದಣ್ಣ ಸಕ್ರಿ, ಸುರೇಶ ಶೆಡಶ್ಯಾಳ, ಶರಣು ಸಬರದ ಮುಂತಾದವರು ಉಪಸ್ಥಿತರಿದ್ದರು.