ಹಾಸನ
ಕಾಂಗ್ರೆಸ್ನ ಪ್ರಮುಖ ನಾಯಕರೇ ಐವತ್ತು ಶಾಸಕರನ್ನು ಕರೆತರುವ ಬಗ್ಗೆ ರಾಷ್ಟ್ರಮಟ್ಟದ ಬಿಜೆಪಿ ನಾಯಕರ ಜತೆ ಹೊಸದಿಲ್ಲಿಯಲ್ಲಿ ಮಾತನಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸಬಾಂಬ್ ಸಿಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಾ ನಾನು ಐವತ್ತು, ಅರವತ್ತು ಜನ ಕರ್ಕಂಡು ಬಂದುಬಿಡ್ತಿನಿ ನನಗೆ ಏನು ತೊಂದರೆ ಆಗುವುದು ಬೇಡ ಅಂತ ಹೋಗಿದ್ದಾರೆ ಎಂದು ಹೇಳಿದರು.
ಯಾವ ನಾಯಕರು ಎಂಬ ಸುದ್ದಿಗಾರರ ಪ್ರಶ್ನೆಗೆ ಸಣ್ಣಪುಟ್ಟವರು ಹೋಗಲು ಆಗುತ್ತಾ ಐವತ್ತು, ಅರವತ್ತು ಜನ ಕರ್ಕಂಡು ಎಂದು ಮರುಪ್ರಶ್ನೆ ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಿ‘ನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ಬಗ್ಗೆ ಪ್ರತಿಕ್ರಿಯಿಸಿ ಬರೀ ಹರಿಪ್ರಸಾದ್ ಅಲ್ಲ ಇನ್ನೂ ಸಾಕಷ್ಟು ಜನ ಇದ್ದಾರೆ
ಒಂದೊಂದೇ ‘ನಿ ಹೊರ ಬರುತ್ತದೆ ಕಾದುನೋಡಿ ಎಂದು ಹೇಳಿದರು.
ಫೆನ್ಡ್ರೈವ್ ವಿಷಯದಲ್ಲಿ ನಾನೇನು ಹಿಂದೆ ಸರಿಯಲ್ಲ ದಾಖಲೆ ಇಟ್ಟೇ ಮಾತನಾಡುತ್ತೇನೆ
ಈ ಸರಕಾರ ಲೋಕಸ‘ ಚುನಾವಣೆ ಮುಗಿದ ಬಳಿಕ ಏನಾಗುತ್ತದೆ ಎಲ್ಲವೂ ಗೊತ್ತಾಗುತ್ತದೆ ಕಾದುನೋಡಿ ಎಂದರು.
ನಾನು ನಿಮ್ಮ ಜತೆ ಬರ್ತಿನಿ, ಐವತ್ತು ಜನ ಕರ್ಕೊಂಡ್ ಬರ್ತಿನಿ ಅಂತ ಕೇಂದ್ರದ ನಾಯಕರ ಬಳಿ ಮಾತನಾಡಿರುವ ಬಗ್ಗೆ ಮಾಹಿತಿ ಇದೆ ರಾಜ್ಯದಲ್ಲಿ ಯಾರು ಯಾರಿಗು ನಿಷ್ಠರಾಗಿ , ಪ್ರಾಮಾಣಿಕರಾಗಿ ಉಳಿದಿಲ್ಲ ಅವರವರ ಅನುಕೂಲಕ್ಕೆ ತಕ್ಕಂತೆ ಮಾಡುತ್ತಾರೆ ಎಂದು ಟೀಕಿಸಿದರು.
ರಾಜ್ಯ ಸರಕಾರದ ಶಕ್ತಿ ಯೋಜನೆಯಿಂದ ಹೆಣ್ಣುಮಕ್ಕಳಿಗೆ ಅನುಕೂಲವಾಗಿದೆ
ಸ್ವತಂತ್ರವಾಗಿ ಓಡಾಟ ಮಾಡುತ್ತಿದ್ದಾರೆ ಸಾರಿಗೆ ಸಚಿವರೇ ಸಾಲ ಇರುವ ಬಗ್ಗೆ ಹೇಳಿದ್ದಾರೆ
ದಿನಗೂಲಿ ಆ‘ರದಲ್ಲಿ ೯೫೦೦ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ
ಐದು ಸಾವಿರ ಹೊಸ ಬಸ್ ಖರೀದಿ ಮಾಡ್ತಿನಿ ಅಂದಿದ್ದಾರೆ ಇದಕ್ಕೆಲ್ಲ ಹಣವನ್ನು ಎಲ್ಲಿಂದ ತರ್ತಾರೆ ನೋಡೋಣ ಸರಕಾರದ ವೆ‘ಫಲ್ಯದ ಬಗ್ಗೆ ಜನರ ಮುಂದೆ ಇಡ್ತಿನಿ
ಎರಡು ದಿನ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡ್ತಿನಿ ಅಂದಿದ್ದಾರೆ ಬರಿ ‘ಷಣ ಮಾಡಿಕೊಂಡು ಕಾಲ ತಳ್ಳಿಕೊಂಡು ಹೊರಟಿದ್ದ