ಬಾಗಲಕೋಟೆ
ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ನಡೆದ ಜಿಲ್ಲಾಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಮಹಾದೇವಿ ಶೆಟ್ಟರ ತಯಾರಿಸಿದ ಸಿರಿಧಾನ್ಯದ ಮೈಸೂರ ಪಾಕ್ ಹಾಗೂ ಜಯಶ್ರೀ ತೆಗ್ಗಿ ತಯಾರಿಸಿದ ಮೋಮೋಸ್ ಖಾರದ ತಿನಿಸು ಪ್ರಥಮ ಬಹುಮಾನ ಪಡೆದುಕೊಂಡವು.
೨೦೨೩ ನೇ ವರ್ಷವನ್ನು ಅಂತರರಾಷ್ಟಿçÃಯ ಸಿರಿಧಾನ್ಯಗಳ ವರ್ಷವೆಂದು ಆಚರಿಸುತ್ತಿದೆ. ಅಂತರರಾಷ್ಟಿçÃಯ ಸಿರಿಧಾನ್ಯ ಮತ್ತು ಸಾವಯುವ ಮೇಳೆ-೨೦೨೪ರ ಅಂಗವಾಗಿ ರಾಜ್ಯಮಟ್ಟದ ಸಿರಿಧಾನ್ಯ ಪಾಕಸ್ಪರ್ಧೆಯ ಪೂರ್ವಭಾವಿಯಾಗಿ ಜಿಲ್ಲಾಮಟ್ಟದ ಸಿರಿಧಾನ್ಯ ಪಾಕಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ತಯಾರಿಸಲಾದ ರುಚಿ ರುಚಿಯಾದ ನಾನಾ ಬಗೆಯ ಸಿರಿಧಾನ್ಯ ಪಾಕಗಳಲ್ಲಿ ಮೈಸೂರು ಪಾಕ್ ಮತ್ತು ಮೋಮೋಸ್ ಪ್ರಥಮ ಸ್ಥಾನ ಪಡೆದುಕೊಂಡಿವೆ.
ಪಾಕ ಸ್ಪರ್ಧೆಯಲ್ಲಿ ೪೬ ಜನ ಪಾಕ ಪ್ರವೀಣೆಯರು ಭಾಗವಹಿಸಿ ಸಿರಿಧಾನ್ಯಗಳಲ್ಲಿ ಸಿಹಿ ಪದಾರ್ಥಗಳಾದ ಸಿರಿಧಾನ್ಯದ ಮೈಸೂರ ಪಾಕ್, ನವಣೆ ಪಾಯಸ, ರಾಗಿ ಉಂಡೆ, ರಾಗಿ ಹಲ್ವಾ, ಪಾಯಸ ಹಾಗೂ ಖಾರದ ತಿನಿಸುಗಳಾದ ಸಜ್ಜೆ ಬಿಸಿಬೆಳೆ ಬಾತ್, ಸಜ್ಜೆ ರೊಟ್ಟಿ, ಸಿರಿಧಾನ್ಯ ಮಸಾಲಾ ರೊಟ್ಟಿ, ಸಿರಿಧಾನ್ಯದ ಚಕ್ಕುಲಿ, ಫಲಾವ್, ಸಿರಿಧಾನ್ಯದ ಮೋಮೋಸ್, ಸಾವಿ ಕಿಚಡಿ ಹಾಗೂ ರಾಗಿ ಹಪ್ಪಳ ಅಲ್ಲದೇ ಹತ್ತು ಹಲವು ಖಾದ್ಯಗಳನ್ನು ಪ್ರದರ್ಶಿಸಲಾಯಿತು. ನೋಡುಗರ ಬಾಯಲ್ಲಿ ನೀರೂರಿಸಿದವು.
ಜಿಪಂ ಸಿಇಒ ಶಶೀಧರ ಕುರೇರ ಸಿರಿಧಾನ್ಯ ಪಾಕಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಆರೋಗ್ಯಕರ ಸಮಾಜಕ್ಕೆ ಸಿರಿಧಾನ್ಯಗಳ ಮಹತ್ವ ಸಾರುವ ಉದ್ದೇಶದಿಂದ ಪಾಕಸ್ಪರ್ಧೆ ಏರ್ಪಡಿಸಲಾಗಿದೆ. ಸಿರಿಧಾನ್ಯಗಳ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಬೇಕು. ಅವುಗಳನ್ನು ದಿನನಿತ್ಯ ಬಳಸುವ ಮೂಲಕ ಉತ್ತಮ ಆರೋಗ್ಯ ಪಡೆದುಕೊಳ್ಳಬೇಕು. ಸಿರಿಧಾನ್ಯಗಳ ಮೌಲ್ಯರ್ವತ ಉತ್ಪನ್ನ ತಯಾರಿಸಲು ಆದ್ಯತೆ ನೀಡಲು ತಿಳಿಸಿದರು.
ಕೃಷಿ ಇಲಾಖೆಯ ಉಪನಿರ್ದೇಶಕ ಎಲ್.ಐ.ರೂಢಗಿ ಸೇರಿದಂತೆ ಕೃಷಿ ಇಲಾಖೆ ಅಕಾರಿ ಹಾಗೂ ಸಿಬ್ಬಂದಿ ಇದ್ದರು. ಪಾಕಸ್ಪರ್ಧೆಯ ತೀರ್ಪುಗಾರರಾಗಿ ಬಸವೇಶ್ವರ ಎಂಜಿನೀಯರಿAಗ್ ಕಾಲೇಜಿನ ಪ್ರಾದ್ಯಾಪಕಿ ಡಾ.ಭಾರತಿ ಮೇಟಿ, ವಿಜಯಪುರ ಕೃಷಿ ಮಹಾವಿದ್ಯಾಲಯದ ಪ್ರಾದ್ಯಾಪಕಿ ಕಾಶಿಬಾಯಿ ಖ್ಯಾದಗಿ, ತೋವಿವಿಯ ಪ್ರಾಧ್ಯಾಪಕಿ ಭುವನೇಶ್ವರಿ ಆಗಮಿಸಿದ್ದರು.