ಭಾನುವಾರದ ಕ್ಲೈಮ್ಯಾಕ್ಸ್ ಗೆ ರೆಡಿ
ಬಾಗಲಕೋಟೆ
* ಡಿ.೨೪ರಂದು ಮತದಾನ
* ಮಾದರಿ ಪ್ರಾಥಮಿಕ ಶಾಲೆ ನಂ.೧
* ೨೬ ಅಭ್ಯರ್ಥಿಗಳು ಕಣದಲ್ಲಿ
* ಬೆಳಗ್ಗೆ ೯ ರಿಂದ ಮಧ್ಯಾಹ್ನ ೪ ಗಂಟೆವರೆಗೆ ಮತದಾನ
* ಸಾಲಗಾರರ ಕ್ಷೇತ್ರದಡಿ ೧೦ ಅಭ್ಯರ್ಥಿಗಳ ಆಯ್ಕೆ
* ಸಾಲೇತರ ಕ್ಷೇತ್ರಕ್ಕೆ ಒಬ್ಬರ ಆಯ್ಕೆ
ಕಳೆದ ೨೦ ವರ್ಷದಿಂದಲೂ ಚುನಾವಣೆ ನಡೆಯದೆ ಅವಿರೋಧವಾಗಿ ಆಯ್ಕೆ ಮಾಡಿಕೊಂಡು ಬಂದಿದ್ದ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಡಿ.೨೪ರಂದು ಮತದಾನ ನಡೆಯಲಿದ್ದು ಕಣದಲ್ಲಿರುವ ಅಭ್ಯರ್ಥಿಗಳ ಪ್ರಚಾರ ಕಾವು ಪಡೆದುಕೊಂಡಿದೆ.
ಪಟ್ಟಣದ ಪಿಕೆಪಿಎಸ್‌ನ ೧೨ ಸ್ಥಾನಗಳಿಗೆ ಚುನಾವಣೆ ಘೋಷಣೆ ಆಗಿತ್ತು. ಎಸ್‌ಟಿ ವರ್ಗದಡಿ ಒಬ್ಬರೇ ಅಭ್ಯರ್ಥಿ ಕಣದಲ್ಲಿ ಉಳಿದಿದ್ದರಿಂದ ಅವರ ಆಯ್ಕೆ ಅವಿರೋಧವಾಗಿ ಆಯಿತು. ಎಸ್‌ಟಿ ವರ್ಗದಡಿ ನಾಮಪತ್ರ ಸಲ್ಲಿಸಿದ್ದ ಹುಲ್ಲಪ್ಪ ತಳವಾರ ಅವರ ಆಯ್ಕೆ ಅವಿರೋಧವಾಗಿ ಆಯಿತು.
ಉಳಿದ ೧೧ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಇದೀಗ ಕಣದಲ್ಲಿರುವ ಅಭ್ಯರ್ಥಿಗಳು ಚುನಾವಣೆ ಪ್ರಚಾರ ಭರಾಟೆಯಲ್ಲಿದ್ದು ಡಿಸೆಂಬರ್ ತಿಂಗಳ ಚಳಿಯಲ್ಲೂ ಬೆವರುವ ಪರಿಸ್ಥಿತಿಯಲ್ಲಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವೆAದರೂ ಈ ಚುನಾವಣೆ ರಾಜಕೀಯ ಬಣ್ಣ ಪಡೆದುಕೊಂಡಿದ್ದು ಒಂದು ಗುಂಪು ಬಿಜೆಪಿ ಹಾಗೂ ಮತ್ತೊಂದು ಗುಂಪು ಕಾಂಗ್ರೆಸ್‌ನೊAದಿಗೆ ಗುರ್ತಿಸಿಕೊಂಡಿದ್ದು ಹೀಗಾಗಿ ಮತದಾನ ಬಿರುಸು ಪಡೆಯುವ ಲಕ್ಷಣಗಳು ಗೋಚರಿಸುತ್ತಿವೆ.
ಸಾಲಗಾರರ ಸಾಮಾನ್ಯ ಕ್ಷೇತ್ರದ ೫ ಸ್ಥಾನಗಳಿಗೆ ೧೧ ಅಭ್ಯರ್ಥಿಗಳು, ಪಜಾ ಕ್ಷೇತ್ರದ ೧ ಸ್ಥಾನಕ್ಕೆ ೩ ಅಭ್ಯರ್ಥಿಗಳು, ಹಿಂವಅ ಕ್ಷೇತ್ರದ ೧ ಸ್ಥಾನಕ್ಕೆ ೩ ಅಭ್ಯರ್ಥಿಗಳು, ಹಿಂವಬ ಕ್ಷೇತ್ರದ ೧ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು, ಮಹಿಳಾ ಕ್ಷೇತ್ರದ ೨ ಸ್ಥಾನಕ್ಕೆ ೪ ಅಭ್ಯರ್ಥಿಗಳು ಹಾಗೂ ಸಾಲೇತರ ಕ್ಷೇತ್ರದ ೧ ಸ್ಥಾನಕ್ಕೆ ೩ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಸಾಮಾನ್ಯ ಕ್ಷೇತ್ರ ಕಣದಲ್ಲಿರುವ ಈಶಪ್ಪ ಚಳ್ಳಗಿಡದ, ಗ್ಯಾನನಗೌಡ ಪಾಟೀಲ, ಪುಂಡಲೀಕಪ್ಪ ರಕ್ಕಸಗಿ, ರವಿ ಬಂಡಿ, ಸಿದ್ದು ಸಜ್ಜನ, ಹಿಂದುಳಿದ ವರ್ಗ ಬ ಅಡಿಯಲ್ಲಿ ಅಶೋಕ ಯರಗೇರಿ, ಹಿಂದುಳಿದ ವರ್ಗ ಅ ಅಡಿಯಲ್ಲಿ ಸಂತೋಷ ಕತ್ತಿ, ಎಸ್‌ಸಿ ವರ್ಗದಡಿ ಅಶೋಕ ಲಮಾಣಿ, ಮಹಿಳಾ ಕ್ಷೇತ್ರದಡಿ ಸ್ಪರ್ಧಿಸಿರುವ ಪ್ರೇಮಾ ಚವ್ಹಾಣ ಹಾಗೂ ಮಳಿಯವ್ವ ಮದ್ಲಿ, ಸಾಲೇತರ ಕ್ಷೇತ್ರದಡಿ ಪಟ್ಟಣ ಪಂಚಾಯಿತಿ ಸದಸ್ಯ ಬಾಬು ಛಬ್ಬಿ ಸ್ಪರ್ಧಿಸಿದ್ದು ಈ ಎಲ್ಲ ಅಭ್ಯರ್ಥಿಗಳ ಪರ #ಬಿಜೆಪಿ ಮುಖಂಡರು ಬಿರುಸಿನ ಮತ ಯಾಚನೆಯಲ್ಲಿ ತೊಡಗಿದ್ದಾರೆ.
ಮತ್ತೊಂದೆಡೆ ಸಾಮಾನ್ಯ ಕ್ಷೇತ್ರದಡಿ ಸ್ಪರ್ಧಿಸಿರುವ ಲೋಹಿತ ರಕ್ಕಸಗಿ, ಹುಸೇನಸಾಬ ಬಾಗೇವಾಡಿ, ಸಂಗಪ್ಪ ಕತ್ತಿ, ಚಂದ್ರಕಾAತ ಚೌಕಿಮಠ, ಮೈಲಾರಪ್ಪ ನರಿ, ಪಜಾ ಕ್ಷೇತ್ರದಿಂದ ಪಾಂಡಪ್ಪ ವಡ್ಡರ, ತಾಯಪ್ಪ ಹುಲಗಿನಾಳ, ಹಿಂವಅ ಕ್ಷೇತ್ರದಿಂದ ಚಂದ್ರಕಾAತ ಸಂಗಟಿ, ಹಿಂವಬ ಕ್ಷೇತ್ರದಿಂದ ಬಸವರಾಜ ನರಿ. ಮಹಿಳಾ ಕ್ಷೇತ್ರದಿಂದ ಶಿವವ್ವ ರಾಮಥಾಳ, ಪಂಪವ್ವ ಯಡಪ್ಪನ್ನವರ, ಸಾಲೇತರ ಕ್ಷೇತ್ರ ಕಣದಲ್ಲಿರುವ ಪಾಪಣ್ಣ ಭದ್ರಶೆಟ್ಟಿ ಪರ #ಕಾಂಗ್ರೆಸ್ ಮುಖಂಡರು ಬೀದಿಗಿಳಿದು ಮತ ಯಾಚನೆ ಮಾಡುತ್ತಿದ್ದಾರೆ.
ಮೇಲಿನ ಎರಡೂ ಬಣ ಹೊರತು ಪಡಿಸಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಚಿದಾನಂದಪ್ಪ ತತ್ರಾಣಿ, ಹಿಂವಅ ಕ್ಷೇತ್ರದಡಿ ಯಲ್ಲನಗೌಡ ಪಾಟೀಲ ಹಾಗೂ ಹಿಂದಬ ಕ್ಷೇತ್ರದಡಿ ಸ್ಪರ್ಧಿಸಿರುವ ಕೂಡ್ಲಪ್ಪ ಚಿತ್ತರಗಿ ತಮ್ಮದೆ ಆದ ಪ್ರಚಾರ ಕಾರ್ಯದ ಮೂಲಕ ಮತ ಯಾಚಿಸುತ್ತಿದ್ದಾರೆ.
ಸಾಲಗಾರರ ಸಾಮಾನ್ಯ ಕ್ಷೇತ್ರದಡಿ ೪೨೨ ಮತದಾರರಿದ್ದು ಪ್ರತಿ ಮತದಾರರ ಐದು ಕ್ಷೇತ್ರದಡಿ ೧೦ ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕಿದೆ. ಸಾಲೇತರ ಕ್ಷೇತ್ರದಡಿ ೩೯ ಅರ್ಹ ಮತದಾರರಿದ್ದು ಈ ಕ್ಷೇತ್ರದಡಿ ಮೂವರು ಕಣದಲ್ಲಿದ್ದು ಒಬ್ಬರಿಗೆ ಮತ ಚಲಾಯಿಸಬೇಕಿದೆ.
ಒಟ್ಟಿನಲ್ಲಿ ಈ ಬಾರಿಯ ಪಿಕೆಪಿಎಸ್ ಚುನಾವಣೆ ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆ ನಡೆಯುವ ರೀತಿಯಲ್ಲಿ ನಡೆದಿದ್ದು ಸ್ಪರ್ಧಿಸಿದ ಅಭ್ಯರ್ಥಿಗಳು ದಿನಾಲೂ ಬೆಳಗ್ಗೆಯಿಂದ ಸಂಜೆವರೆಗೆ ಮತದಾರ ಇರುವಲ್ಲಿ ತೆರಳಿ ಮತ ಯಾಚಿಸುತ್ತಿದ್ದಾರೆ. ಇವರೆಲ್ಲರ ಬಣ ತಿಕ್ಕಾಟಕ್ಕೆ ಡಿ.೨೪ರಂದು ರಾತ್ರಿ ವೇಳೆಗೆ ಬ್ರೇಕ್ ಬೀಳಲಿದೆ.