ಬಾಗಲಕೋಟೆ
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ 25 ಬೂತ್ ನಂಬರ್ 164 ರ ಅಧ್ಯಕ್ಷರಾದ ಶ್ರೀ ಪ್ರಕಾಶ ಗು ಹಿರೆಹೊನ್ನಳ್ಳಿ ಅವರ ನಿವಾಸಕ್ಕೆ ಭೇಟಿ ನೀಡಿ ಬೂತ್ ಸಶಕ್ತೀಕರಣದ ಕುರಿತು ಚರ್ಚಿಸಲಾಯಿತು.
ದೇಶದ ಪ್ರತಿ ಗ್ರಾಮದ, ಪ್ರತಿ ಮನೆಯಲ್ಲಿಯೂ ಮೋದಿ ಜೀ ಅವರ ಸರ್ಕಾರದ ಒಂದಿಲ್ಲೊಂದು ಯೋಜನೆಗಳ ಫಲಾನುಭವಿಗಳಿರುವುದು ಸರ್ವವ್ಯಾಪಿ ಸರ್ವಸ್ಪರ್ಶಿ ಆಡಳಿತಕ್ಕೆ ಸಾಕ್ಷಿಯಾಗಿದ್ದು, ಮಗದೊಮ್ಮೆ ಪ್ರಧಾನಿ ಮಾಡುವ ದೃಷ್ಟಿಯಿಂದ ಬೂತ್ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಶ್ರಮಿಸುವ ಸಂಕಲ್ಪ ತೊಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಕಾರಜೋಳ, ಜಿಲ್ಲಾಧ್ಯಕ್ಷ ಶ್ರೀ ಶಾಂತಗೌಡ ಪಾಟೀಲ್, ಮಾಜಿ ಶಾಸಕರಾದ ಶ್ರೀ ವೀರಣ್ಣ ಚರಂತಿಮಠ, ಮುಖಂಡರಾದ ಶ್ರೀ ಬಸವರಾಜ ಯಂಕಂಚಿ ಅವರು ಸೇರಿದಂತೆ ಪಕ್ಷದ ಮುಖಂಡರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.