ರೈತರಿಗೆ ಬರಗಾಲ ದರ್ಶನ ಮಾಡಿದ ವರ್ಷ
2023ನೇ ವರ್ಷದ ಕುರಿತು ಬಾಗಲಕೋಟೆ ಜಿಲ್ಲೆ ಇಳಕಲ್ ನ ಗೊರಬಾಳದ ಲೇಖಕ ಜಗದೀಶ ಗಿರಡ್ಡಿ ತಮ್ಮದೇ ಆದ ವಿಶ್ಲೇಷಣೆ ಮೂಲಕ ವಿಡಂಬನಾತ್ಮಕವಾಗಿ ಲೇಖನ ಬರೆದಿದ್ದಾರೆ. ತಪ್ಪದೇ ಓದಿ.
2023ನೇ ವರ್ಷವೂ ರಾಜ್ಯದ ರೈತರ ಪಾಲಿಗೆ ಶಾಪವಾಗಿ ಕಾಡಿತು 2023 ಆರಂಭದಿಂದಲೂ ರೈತರಿಗೆ ವರವಾಗಲೇ ಇಲ್ಲ ಮುಂಗಾರು-ಹಿಂಗಾರು ಎರಡು ಮಳೆ ಕೈಕೊಟ್ಟಿದ್ದರಿಂದ ಗತಿಸುತ್ತಿರುವ ವರ್ಷ ರೈತರಿಗೆ ಕೊಂಚ ಕಷ್ಟವನ್ನೇ ನೀಡಿ ಹೋಯಿತು.
ಅನೇಕ ಆಗು-ಹೋಗುಗಳ ದುರಂತಗಳ 2023ರಲ್ಲಿ ರಾಜ್ಯದ ಜನರಿಗೆ ದರ್ಶನವಾಯಿತು ರಾಜ್ಯದ ವಿಜಯಪುರದ ಜ್ಞಾನ ಯೋಗಶ್ರಮದ ಸಿದ್ದೇಶ್ವರ ಸ್ವಾಮೀಜಿಗಳು ಕೊಂಡಿ ಕಳಚಿದ್ದು ರಾಜ್ಯದ ಜನರ ಪಾಲಿಗೆ ತುಂಬಾ ದುಃಖ ಉಂಟು ಮಾಡಿತು..
ರಾಜ್ಯದ ಅನೇಕ ಸಾಧಕರು ತಮ್ಮ ಸಾಧನೆಯ ಮೆಟ್ಟಿಲನ್ನು ಉನ್ನತಕ್ಕೆ ಏರಿಸಿರುವುದು ಖುಷಿ ನೀಡಿದರೆ ಕೆಲವು ದೊಡ್ಡ ದೊಡ್ಡ ದುರಂತಗಳು ಜನರ ಪಾಲಿಗೆ ಕಷ್ಟವನ್ನು ನೀಡಿದವು ಅದರಲ್ಲೂ ಅಗ್ನಿ ದುರಂತಗಳಂತೂ ಜನರಿಗೆ ಬಿಟ್ಟುಬಿಡದೆ ಕಾಡಿದವು.
ಈ ವರ್ಷದ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಳೆಯ ಸರಕಾರ ಗತಿಸಿ ಹೊಸ ಸರಕಾರ ಬಂದಿದ್ದು ಇನ್ನೊಂದು ವಿಶೇಷ ಹೊಸ ಸರ್ಕಾರದ ಯೋಜನೆಗಳು ರಾಜ್ಯದ ಸಾರ್ವಜನಿಕರ ಪಾಲಿಗೆ ವರವಾಗಿವೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಗತಿಸಿದ ವರ್ಷ ನಲಿಯುತ ಸಾಗಿ ಬರಲಿರುವ ವರ್ಷ ಹರಿಸಲಿ ಬಿಸಿ”ಎಂಬ ಉಕ್ತಿಯು 2023 ರೈತರ ಪಾಲಿಗೆ ನಿಜವಾಗಲೇ ಇಲ್ಲ ಗತಿಸಿದ ವರ್ಷ ಬರಗಾಲವೆಂಬ ಭವಣೆ ನೀಡಿ ರೈತರ ಖುಷಿಯು ಕಸಿಯಿತು ಎನ್ನುವಂತಾಯಿತು.
ರಾಜ್ಯದ ರೈತರು ಈ ಹಿಂದೆ ಎಂದು ಕಂಡರೆಯದ ಬರಿಗಾಲಕ್ಕೆ ತುತ್ತಾದರೂ ಪ್ರತಿ ವರ್ಷ ರಾಜ್ಯದ ಹಾಗೂ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ನೆರೆಹಾವಳಿಯಿಂದ ತತ್ತರಿಸಿ ಹೋಗುತ್ತಿದ್ದ ಕೆಲವೊಂದು ಜಿಲ್ಲೆಗಳಲ್ಲಿ ನೋವು ಒಂದಡೆಯಾದರೆ ಈ ವರ್ಷ ಹನಿ ನೀರಿಗೂ ತಾತ್ಸರ ಉಂಟಾಗುವಂತಹ ಬರಗಾಲ ಬಂದು ಎರಗಿರುವುದು ರೈತರಿಗೆ ನುಂಗಲಾರದ ತುತ್ತಾಯಿತು.
ರೈತನ ಗೋಳು ಕೇಳುವವರು ಯಾರು ಎನ್ನುವಂತೆ ಆಯುತ್ತಾದರೂ ಸರಕಾರ ಸಾಕಷ್ಟು ಪ್ರಯತ್ನ ಪಟ್ಟರು ರೈತರನ್ನು ಬರಗಾಲವೆಂಬ ಬ್ರಮೆಯಿಂದ ಹೊರ ತರಲು ಸಾಧ್ಯವೇ ಆಗಲಿಲ್ಲ ಉತ್ತರ ಕರ್ನಾಟಕದಲ್ಲಿ ಬರ ಚಾಯ ಹೆಚ್ಚಾಗಿದ್ದು ದನ ಕರುಗಳನ್ನು ಸಾಕುವುದು ಬದುಕಿಸುವುದು ಸವಾಲ್ ಆದಂತಾಗಿದೆ.
ಕೆಲವೊಂದು ಭಾಗದಲ್ಲಿ ಸಣ್ಣಪುಟ್ಟ ಬೆಳೆಗಳನ್ನು ಕಂಡರೆ ಇನ್ನುಳಿದ ಕೆಲವು ಭಾಗಗಳಲ್ಲಿ ಉಳುಮೆ ಮಾಡದೆ ಹಾಗೆ ಬಿಟ್ಟಿರುವುದು ನೋಡಿದರೆ ರೈತರ ಸ್ಥಿತಿ ಬಹಳ ಚಿಂತಾ ಜನಕವಾಗಿದೆ ಎಂದೆನಿಸುತ್ತದೆ.
ರೈತರ ಗೋಳು ಕೇಳುವವರು ಯಾರು ಎನ್ನುವ ಹಾಗೆ ಬರಗಾಲವೆಂಬ ಭ್ರಮೆಯಿಂದ ರೈತನನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ ಬೇಲಿಯೇ ಎದ್ದು ಹೊಲ ಮೈದಂತೆ ಪ್ರಕೃತಿಯೇ ಮುನಿಸಿಕೊಂಡು ರೈತನಿಗೆ ಮುಂಗಾರು ಮುಂಗಾರು ಮಳೆ ಆಗದೆ ಇರುವದರಿಂದ ತೊಂದರೆ ಆಗಿದೆ ವಿನಹ ಬರಗಾಲದ ಛಾಯೆಯಿಂದ ಸರ್ಕಾರ ತಪ್ಪಿಸಲು ಮೋಡ ಬಿತ್ತನ ಕಾರ್ಯ ಮಾಡಿದರು ಕೂಡ ಅದು ಯಶಸ್ವಿಯಾಗಲೇ ಇಲ್ಲ.
ಹೀಗಾಗಿ ರೈತನ ಬದುಕು ಬೆಂಡಾದ ಬಾಳೆದಿಂಡಿನಂತಾಗಿದೆ ಅಲ್ಲಲ್ಲಿ ಸ್ವಲ್ಪ ಈರುಳ್ಳಿ ಬಳದ ಬೆಳೆದ ರೈತರಿಗಂತೂ ತುಂಬಾ ಶಾಕ್ ಆಗುವ ರೀತಿಯಲ್ಲಿ ಬೆಲೆ ಕುಸಿದಿದ್ದು ಮತ್ತಷ್ಟು ಸಂಕಷ್ಟ ಕೀಡು ಮಾಡಿತು ಅಲ್ಪ ಸ್ವಲ್ಪ ಮೆಣಸಿನಕಾಯಿ ಬೆಳೆದ ರೈತರಿಗೆ ಬೆಲೆ ಸಿಗಬಹುದೇನೋ ಎನ್ನುವ ನಿರೀಕ್ಷೆಯಲ್ಲಿದ್ದ ರೈತನಿಗೆ ಮುಂದಿನ ದಿನಮಾನದಲ್ಲಿ ಏನಾಗುವುದು ಏನೋ ಎನ್ನುವ ಚಿಂತೆ ಮೆಣಸಿನಕಾಯಿ ಬೆಳೆಗಾರರಲ್ಲಿ ಕಾಡತೊಡಗಿದೆ.
ಮೆಣಸಿನಕಾಯಿ ಬೆಳೆಗಳಿಗೆ ಏನೇ ರೋಗರು ದಿನಗಳು ಬಂದರೂ ತುಂಬಾ ಕಾಳಜಿಯಿಂದ ಕಾಯ್ದುಕೊಂಡು ಅಲ್ಪಸ್ವಲ್ಪ ಬೆಳೆ ಬೆಳೆದ ರೈತರಿಗೆ ಕೃಷಿ ನೀಡಬಹುದು ಎನ್ನುವ ನಿರೀಕ್ಷೆ ಇಲ್ಲಿದ್ದ ರೈತನಿಗೆ ಬೆಳೆಯ ಬರುವಷ್ಟೊತ್ತಿಗೆ ಏನಾಗಬಹುದು ಏನು ಎನ್ನುವ ಭಯ ಆತಂಕ ಮೆಣಸಿನಕಾಯಿ ಬೆಳೆಗಾರರಲ್ಲಿ ಶುರುವಾಗಿದೆ.
ಹೀಗೆ ಒಂದಿಲ್ಲೊಂದು ಹೊಡೆತಗಳ ಮೇಲೆ ಹೊಡೆತ 2023 ನೇ ಇಸ್ವಿಯಲ್ಲಿ ಪ್ರಾರಂಭದಿಂದಲೂ ಬೀಳುತ್ತಾ ಬಂದಿರುವುದು ರೈತನನ್ನು ಪೂರ್ತಿ ರಾ ಸಂಕಷ್ಟಕ್ಕೆ ಸುಲುಪಿಸಿದಂತಾಯಿತು ಅಲ್ಲಲ್ಲಿ ನೀರಾವರಿಯನ್ನು ನಂಬಿಕೊಂಡಿದ್ದ ರೈತನಿಗೂ ಕೂಡ ಬರಗಾಲದ ಛಾಯೆ ಬಿರಿದ್ದು ಬೋರ್ವೆಲ್ ಗಳಲ್ಲೂ ಬಾವಿಗಳಲ್ಲೂ ನೀರು ಬತ್ತಿ ಹೋಗುತ್ತಿರುವುದು ತೋಟಗಾರಿಕಾ ಬೆಳಗಾರರಿಗೂ ಆತಂಕ ಸೃಷ್ಟಿಯಾಗಿದೆ.
ಎಲ್ಲಾ ಹಂತದಲ್ಲೂ ಒಂದರ ಮೇಲೊಂದು, ರೈತನ ಮೇಲೆ ಬ್ರಹ್ಮಾಸ್ತ್ರಗಳಾಗುತ್ತಿದ್ದು ರೈತನು ಇದರಿಂದ ಹೊರಬರಲು ಎಷ್ಟನೇ ಪ್ರಯತ್ನ ಪಟ್ಟರು ಬರಗಾಲದ ಛಾಯಾದಿಂದ ಹೊರಬರಲು ಸಾಧ್ಯವಾಗಲಿಲ್ಲ ಅಲ್ಪಸಲ್ಪ ಬೇಳೆ ಬೆಳೆದ ರೈತನಿಗೆ ರೈತನೇ ಬೆಲೆ ನಿರ್ಧರಿಸ ಒಂದಾಗಬೇಕು ಎನ್ನುವ ಕೂಗು ಎಲ್ಲಾ ಕಡೆ ಕೇಳಿ ಬರುತ್ತದೆ.
ಆದರೂ ಅದು ಜಾರಿಗೆ ಆಗೋದು ಕಷ್ಟ ಸಾಧ್ಯವಾಗಿದೆ ಹೀಗಾಗಿ ರೈತ ತಾನು ಬದುಕಿ ತನ್ನ ಕುಟುಂಬವನ್ನು ಬದುಕಿಸುವ ವಣೆ ಒಂದೆಡೆಯಾದರೆ ತಾನು ಸಾಕಿದ ದನ ಕರುಗಳ ಬದುಕಿಸುವ ಸಂಕಷ್ಟ ಮಂಗಳಾರದ ತುತ್ತಾಗಿದೆ
ಈ ವರ್ಷ ರಾಜ್ಯಾದ್ಯಂತ ಅನೇಕ ದುರಂತಗಳು ಅವಘಡಗಳು ನಡೆದು ರಾಜ್ಯದ ಜನ ತತ್ತರಗೊಂಡಿದ್ದು ಒಂದೆಡೆಯಾದರೆ ಅಗ್ನಿ ದುರಂತಗಳು ಈ ವರ್ಷದಲ್ಲಿ ತುಂಬಾ ಹೆಚ್ಚಾಗಿ ಅದರಲ್ಲೂ ರೈತರು ಬೆಳದಿದ್ದ ಅಲ್ಪ-ಸಲ್ಪ ಕಬ್ಬು ಇನ್ನಿತರ ಬೆಳೆಗಳಿಗೆ ಬೆಂಕಿ ತಗಲುವ ಪ್ರಮಾಣ ಹೆಚ್ಚಾಗಿ ರೈತರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲಿಕಿಸುವಂತೆ ಮಾಡಿತು.
ಒಟ್ಟಾರೆ 2023 ವರ್ಷ ರೈತರ ಪಾಲಿಗೆ ಸ್ವಲ್ಪವೂ ವರವಾಗುವ ಯಾವ ಲಕ್ಷಣಗಳು ಗೋಚರಿಸಲಿಲ್ಲ ವರ್ಷದ ಪ್ರಾರಂಭದಿಂದ ಹಿಡಿದು ಅಂತ್ಯದವರೆಗೂ ರೈತನ ಗೋಳು, ಗೋಳಾಗಿಯೇ ಉಳಿಯಿತು.
ಸುಮಾರು 100 ವರ್ಷಗಳ ಇತಿಹಾಸದಲ್ಲಿಯೇ ರೈತರಿಗೆ 2023 ಅತ್ಯಂತ ಸಂಕಷ್ಟ ವರ್ಷವಾಗಿ ಮಾರ್ಪಟ್ಟಿದ್ದು ಅನೇಕ ಜಾಗೃತಿಗಳ ಮಧ್ಯೆಯು ರೈತರ ಆತ್ಮಹತ್ಯೆಗಳು ಬಹಳಷ್ಟಾದವು ಸರಕಾರ ರೈತರ ನೋವು ನಲಿವುಗಳಿಗೆ ಸ್ಪಂದಿಸಿ ಅನೇಕ ಕೃಷಿ ಯೋಜನೆಗಳ ಮೂಲಕ ಸಾಕಷ್ಟು ಸಹಾಯ ಸಹಕಾರ ಮಾಡಿದರು ಕೂಡ ಬರಗಾಲದ ಭೀಕರಕ್ಕೆ ರೈತರು ಬೆಂಡಾಗಿ ಹೋದರು.
ಬರಗಾಲವೆಂಬ ದೂತ ಈ ವರ್ಷ ಪೂರ್ತಿ ರೈತನನ್ನು ಕಾಡತೊಡಗಿದ್ದು ಗತಿಸುವ ಈ ವರ್ಷ ರೈತನ ಪಾಲಿಗೆ ಸ್ವಲ್ಪವೂ ಖುಷಿಯನ್ನು ನೀಡದಂತಾಯಿತು ಜನವರಿಯಿಂದ ಯುಗಾದಿಯ ಸಂಭ್ರಮದೊಂದಿಗೆ ಹೊಸ ವರ್ಷ ಬರಮಾಡಿಕೊಂಡ ರೈತರ ಗೋಳು, ಗೋಳಾಗಿಯೇ ಉಳಿಯಿತು.
ಕಳೆದ ಸೀಗಿ ಹುಣ್ಣಿಮೆ ಹಾಗೂ ಬರುವ ಎಳ್ಳ ಅಮವಾಸ್ಯೆಗೆ ಖುಷಿಯಿಂದ ಹೊಲಗಳಿಗೆ ಹೋಗಿ ಹಬ್ಬ ಆಚರಿಸಿ ಉಲ್ಲಲ್ಲಿಗೋ ಚೆಲ್ಲಂಬರಿಗೋ ಎನ್ನಲು ಹೊಲದಲ್ಲಿ ಬೆಳೆಗಳೇ ಇಲ್ಲದೆ ತಲೆಯ ಮೇಲೆ ಕೈಹೊತ್ತು ಕುಳಿತುಕೊಂಡು ತನ್ನ ಕೈ ತಾನೇ ಇಸುಕಿಕೊಳ್ಳುವಂತ ಪರಿಸ್ಥಿತಿ ರೈತನ ಪಾಲಿಗೆ ಉದ್ಭವವಾಗಿರುವುದು ಯಾರಿಗೂ ಕಿಂಚಿತ್ತು ಖುಷಿ ಇಲ್ಲದಂತೆ ಮಾಡಿದೆ.
ಬರಗಾಲದಿಂದಾಗಿ ಜೋಳ ರಾಗಿ ಗೋಧಿ ಕಬ್ಬು ತೊಗರಿ ಕಡಲೆ ಇವೆಲ್ಲವುಗಳು ಮಳೆಯ ಆಧಾರಿತ ಬೆಳೆಯಾಗಿದ್ದು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಈ ಬೆಳೆಗಳನ್ನು ಬೆಳೆಯಲು ರೈತರಿಗೆ ಸಾಧ್ಯವಾಗಲಿಲ್ಲ ರೈತರು ಮುಂಗಾರು ಕೈ ಕೊಟ್ಟಾಗ ಇಂಗಾರಾದರೂ ನಮ್ಮ ಕೈ ಹಿಡಿಯುತ್ತೆ ಅನ್ನುವ ಭರವಸೆ ಇಟ್ಟುಕೊಂಡಿದ್ದರು.
ಆದರೆ ಇಂಗಾರು ರೈತನ ಕೈ ಹಿಡಿಯದೆ ಇರುವುದರಿಂದ ರೈತ ಸಂಪೂರ್ಣ ಕಂಗಾಲಾಗಿ ಕೇವಲ ಸರಕಾರ ಕೊಡುವ ಪರಿಹಾರಕ್ಕಾಗಿ ಮಾತ್ರ ಕಾಯ್ದು ಕುಳಿತುಕೊಳ್ಳುವಂತ ಪರಿಸ್ಥಿತಿ ಬಂದಿತು ಇಂಥಹ ಸಂದಿಗ್ಧ ಪರಿಸ್ಥಿತಿಯ ವಾತಾವರಣದಲ್ಲಿ ರೈತ ಬದುಕುವುದೇ ಕಷ್ಟವಾದಾಗ ತಾನು ಸಾಕಿದ ಧನ-ಕರಗಳನ್ನು ಬದುಕಿಸುವುದು ಇನ್ನಷ್ಟು ಕಷ್ಟ ಎಂದು ಯೋಚಿಸುತ್ತಾ ಕಾಲ ಕಳೆಯುತ್ತಿದ್ದಾನೆ.
ರೈತ ತಾನು ಹೇಗಾದರೂ ಬದುಕಬಲ್ಲೆ ಎನ್ನುವ ಭರವಸೆ ಇದ್ದರೂ ದನಕರಗಳನ್ನು ಬದುಕಿಸುವುದು ಬಹಳ ಕಷ್ಟವಾಗಿದ್ದರಿಂದ ಸರ್ಕಾರಗಳು ಬೇರೆ ರಾಜ್ಯಗಳಿಂದ ಧನ-ಕರುಗಳ ಆಹಾರವನ್ನು ತರಿಸಿಕೊಡುವ ಪ್ರಯತ್ನವನ್ನಾದರೂ ಮಾಡಿದರೆ ರೈತನಿಗೆ ಸ್ವಲ್ಪ ನಿಟ್ಟುಸಿರು ಬಿಟ್ಟಂತಾಗುತ್ತದೆ ಗತಿಸಿ ಹೋಗುತ್ತಿರುವ ವರ್ಷ ಸಂಪೂರ್ಣ ರೈತನಿಗೆ ಕೈಕೊಟ್ಟಿದ್ದರಿಂದ 2023 ರನ್ನು ರೈತ ದುಃಖದಿಂದ ಬೀಳ್ಕೊಡುವಂತಾಯಿತು.
ಇಂತಹ ಬರಗಾಲಗಳು ಮುಂದಿನ ದಿನದಲ್ಲಿ ಎದುರಾಗದಂತೆ ಕಾಯ್ದುಕೊಳ್ಳಬೇಕಾದರೆ ನಾವುಗಳು ಜಾಗೃತರಾಗಬೇಕು ಪ್ರತಿಯೊಬ್ಬರು ಕುಟುಂಬಕ್ಕೂ ಒಂದೊಂದು ಗಿಡಗಳನ್ನು ನೆಟ್ಟರೆ ಮತ್ತು ನಾವು ಇರುವ ಸುತ್ತ ಮುತ್ತ ಜಾಗದಲ್ಲಿ ಆಗುವ ಅಲ್ಪ ಸ್ವಲ್ಪ ಮಳೆಯ ನೀರನ್ನು ಭೂಮಿಯಲ್ಲಿ ಇಂಗಿಸುವ ವ್ಯವಸ್ಥೆ ಮಾಡಿದಾಗ ನಾವು ನೀರಿನ ಸಮಸ್ಯೆಯಿಂದ ಮಳೆಗಾಲದ ಸಮಸ್ಯೆಯಿಂದ ದೂರಾಗಬಹುದು ಮಳೆಯಾದಾಗಲೆಲ್ಲ ಭೂಮಿಯಲ್ಲಿ ಜಲವನ್ನು ಹಿಂಗಿಸಿ ಜಲ ವೃದ್ಧಿಸಿಕೊಂಡರೆ ಮಾತ್ರ ಮುಂದಿನ ಪೀಳಿಗೆಗೆ ನಾವುಗಳು ನೀರುಗಳನ್ನು ಉಳಿಸಲು ಸಾಧ್ಯ
ಹೀಗಾಗಿ ಪ್ರತಿಯೊಬ್ಬರು ವಾಗ್ದಾನ ಮಾಡಬೇಕು ಕುಟುಂಬ ಕೊಂದರಂತೆ ಒಂದು ಗಿಡವನ್ನು ಬೆಳೆಸಿ ಪೋಷಿಸಿ ಹಾರೈಸುವಂತ ಜವಾಬ್ದಾರಿ ನಮ್ಮ ಮೇಲೆ ಬಂದಾಗ ಮಾತ್ರ ಮುಂಬರುವ ದಿನಗಳಲ್ಲಿ ಇಂಥ ಕಠೋರವಾದ ಬರಗಾಲ ಎದುರಿಸಲು ಮಾತ್ರ ಸಾಧ್ಯ. ಕೇಂದ್ರ ರಾಜ್ಯ ಸರ್ಕಾರಗಳು ಮುಂದಿನ ದಿನಮಾನದಲ್ಲಿ ಇಂಥ ಬರಗಾಲಗಳನ್ನು ಎದುರಿಸಬಾರದು ಎಂದರೆ ಹೀಗೆ ನಿನ್ನಿಂದಲೇ ಜಾಗೃತರಾಗಬೇಕು.
ಪ್ರತಿಯೊಂದು ಕುಟುಂಬಕ್ಕೂ ಒಂದೊಂದು ಗಿಡವನ್ನು ಬೆಳೆಸುವಂತೆ ಪ್ರೇರಣೆ ನೀಡಿ ಪ್ರತಿಯೊಂದು ಹಳ್ಳಿಗಳಲ್ಲೂ ಒಂದು ನಿರ್ದಿಷ್ಟವಾದ ಜಾಗವನ್ನು ನಿಗದಿಪಡಿಸಿ ಕಾಡು ಬೆಳೆಸುವ ಅಭಿಯಾನವನ್ನು ಜಾರಿಗೆ ತರದೆ ಹೋದರೆ ಇಂತಹ ಬರಗಾಲಗಳಿಂದ ಮುಂದಿನ ಪೀಳಿಗೆಯಲ್ಲಿ ಅತ್ಯಂತ ಕಠೋರವಾದ ದಿನಗಳನ್ನು ಎದುರಿಸಬೇಕಾಗುವ ಪರಿಸ್ಥಿತಿ ಬರಬಹುದು ಹೀಗಾಗಿ ಸರ್ಕಾರಗಳ ಜೊತೆ ಜೊತೆಗೆ ನಾವುಗಳು ಜಾಗೃತರಾಗಿ ಪ್ರತಿಯೊಂದು ಹಳ್ಳಿ ನಗರ ಪ್ರದೇಶಗಳಲ್ಲಿ ಒಂದು ನಿರ್ದಿಷ್ಟವಾದ ಜಾಗವನ್ನು ಗುರುತಿಸಿ ಪ್ರತಿ ಹಳ್ಳಿ ನಗರಗಳಲ್ಲೂ ಒಂದೊಂದು ಕಾಡುಗಳನ್ನು ಹುಟ್ಟುಹಾಕಿದಾಗ ಮಾತ್ರ ಇಂತಹ ಬರಗಾಲಗಳಿಂದ ರೈತರಿಗೆ ಬರುವ ಸಮಸ್ಯೆಗಳಿಂದ ದೂರಾಗಬಹುದು.
ಇಂತಹ ಜಾಗೃತಿಗಳನ್ನು ನಾವು ಹಮ್ಮಿಕೊಳ್ಳದೆ ಹೀಗೆ ಮುಂದುವರೆದರೆ ರೈತರ ಸ್ಥಿತಿ ಅದೋಗತಿಗೆ ಬರುವುದರಲ್ಲಿ ಎರಡು ಮಾತಿಲ್ಲ ರೈತ ಕಾಳು ಗಳನ್ನು ಬೆಳೆಯದಿದ್ದರೆ ಮುಂದಿನ ದಿನಮಾನದಲ್ಲಿ ಪ್ರತಿಯೊಬ್ಬರಿಗೂ ಒಂದು ತುತ್ತಿನ ಊಟಕ್ಕೂ ಅಲೆದಾಡುವ ಪರಿಸ್ಥಿತಿ ಬರುವುದಂತೂ ಕಟ್ಟಿಟ್ಟ ಬುತ್ತಿ ಹಾಗಾಗಿ ನಾವೆಲ್ಲರೂ ಈಗಿನಿಂದಲೇ ಜಾಗೃತರಾಗಿ ಗಿಡಗಳನ್ನು ಬೆಳೆಸುವ ರೂಢಿಯನ್ನು ಮೈಗೂಡಿಸಿಕೊಂಡರೆ ಮುಂದಿನ ದಿನಮಾನದಲ್ಲಿ ಬರುವ ಬರಗಾಲಗಳನ್ನು ತಡೆಯಬಹುದು
ಮುಂಗಾರು ಮತ್ತು ಇಂಗಾರುಗಳು ಕೈಕೊಟ್ಟಿದ್ದರ ಪರಿಣಾಮವಾಗಿ ರೈತರು ಸಂಕಷ್ಟಕ್ಕೆಡಾದರೂ ಪ್ರಕೃತಿ ವಿಕೋಪದಿಂದ ಬಂದು ಎರಗಿದ ಬರಗಾಲ ರೈತರಿಗೆ ಬಿಟ್ಟುಬಿಡದೆ ವರ್ಷ ಪೂರ್ತಿ ಕಾಡಿದ್ದರಿಂದ ರೈತರ ಖುಷಿಯು ಕುಸಿಯಿತು ರೈತರ ಕೃತಕ ಖುಷಿಯನ್ನು ನೀಡಲು ನೂತನವಾಗಿ ಬಂದಿರುವ ಹೊಸ ಸರ್ಕಾರವು ರೈತರ ಅಭಿವೃದ್ಧಿಗೋಸ್ಕರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ಧನಸಹಾಯ ರೂಪದಲ್ಲಿ ಸಾಕಷ್ಟು ಪರಿಹಾರಗಳನ್ನು ನೀಡುತ್ತಾ ಬಂದರು ರೈತರ ಸಂಪೂರ್ಣ ಭವಣೆ ನೀಗಿಸುವುದು ಕಷ್ಟ ಸಾಧ್ಯವಾಯಿತು.
ಪ್ರಕೃತಿ ನೀಡುವಷ್ಟು ಖುಷಿಯನ್ನು ಸರ್ಕಾರಕ್ಕೆ ಸಂಪೂರ್ಣವಾಗಿ ನೀಡಲು ಸಾಧ್ಯವಾಗಲಿಲ್ಲ ಹೀಗಾಗಿ ನಾವು ಮಳೆಯಿಂದ ವಂಚಿತರಾಗಬಾರದು ಎಂದರೆ ಕಾಡುಗಳನ್ನು ಬೆಳೆಸಿ ನಾಡನ್ನು ಉಳಿಸುವ ಪರಿಕಲ್ಪನೆ ಪ್ರತಿಯೊಬ್ಬರಲ್ಲಿಯೂ ಬಂದಾಗಲೇ ಮುಂಬರುವ ಬರಗಾಲಗಳನ್ನು ದೂರಸರಿಸಬಹುದು
••• ಜಗದೀಶ.ಎಸ್.ಗಿರಡ್ಡಿ.
ಲೇಖಕರು .ಗೊರಬಾಳ
9902470856