ಬಾಗಲಕೋಟೆ:
ಭಾರತ ಸಮರಸ, ಸುಸಂಪತ್ತು ಹಾಗೂ ಸಮರ್ಥವಾದ ದೇಶವಾಗಬೇಕಿದೆ ಎಂದು ರಾಷ್ಟç ಸೇವಿಕಾ ಸಮಿತಿಯ ಅಖಿಲ ಭಾರತೀಯ ಸಹಕಾರ್ಯವಾಹಿಕಾ ಅಲಕಾತಾಯಿ ಇನಾಮದಾರ್ ಹೇಳಿದರು.
ನಗರದ ಬವಿವಿ ಸಂಘದ ಮೈದಾನದಲ್ಲಿ ರಾಷ್ಟç ಸೇವಿಕಾ ಸಮಿತಿಯಿಂದ ಹಮ್ಮಿಕೊಂಡಿದ್ದ ಬೌದ್ಧಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
೧೦೦ ವರ್ಷಗಳ ಹಿಂದೆ ದೇಶ ಬಹಳ ವಿಚಿತ್ರವಾದ ಸ್ಥಿತಿಯಲ್ಲಿತ್ತು. ಹಿಂದು ಎಂದರೆ ಸಮಾಜ ಕೀಳರಿಮೆಯಿಂದ ಕಾಣಲಾಗುತ್ತಿತ್ತು. ನಮ್ಮ ಪದ್ಧತಿಯನ್ನು ತೀರ ಹಳೇಯ ಜೀವನ ಪದ್ಧತಿ ಎಂದು ಹೇಳುವ ದುಸ್ಥಿತಿಯಲ್ಲಿ ಹಿಂದುಗಳಿದ್ದರು ಎಂದು ಬೇಸರ ವ್ಯಕ್ತ ಪಡಿಸಿದರು.
ಹಿಂದು ಎಂದರೆ ಅದೊಂದು ವಿಶಿಷ್ಟವಾದ ಪದ್ಧತಿ ಎಂದು ಜಗತ್ತಿಗೆ ತಿಳಿಸುವ ಪ್ರಯತ್ನವನ್ನು ಮೊದಲ ಬಾರಿಗೆ ಮಾಡಿದವರು ಸ್ವಾಮಿ ವಿವೇಕಾನಂದರು. ಅದೇ ರೀತಿಯಲ್ಲೇ ಡಾ. ಕೇಶವ ಹೆಗಡೆವಾರ್ ಮುಂದುವರೆದರು. ಆತ್ಮವಿಸ್ಮೃತಿ ಎಂಬ ಜಡ್ಡು ದೇಶಕ್ಕೆ ಹಿಡಿದಿದ್ದು, ಅದರಿಂದ ದೇಶವನ್ನು ಹೊರತೆಗೆಯಲು ಡಾ. ಹೆಗಡೆವಾರು ಶ್ರಮಿಸಿದರು ಎಂದು ತಿಳಿಸಿದರು.
ಆರ್‌ಎಸ್‌ಎಸ್ ಶಾಖೆ ಎಂಬುವುದರ ಮೂಲಕ ಸಮಾಜಕ್ಕೆ ಆತ್ಮಾಭಿಮಾನ ಅರಿವು ಮೂಡಿಸಲು ವಿಶೇಷ ಕಾರ್ಯತಂತ್ರ ನೀಡಿದವರು ಡಾ. ಹೆಗಡೆವಾರ್. ಶಾಖೆ ಎಂದರೇ ಕೇವಲ ಆಟವಾಡುವುದು, ಹಾಡು ಹಾಡುವುದು ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದಲ್ಲ. ಅನ್ನ, ಪ್ರಾಣ, ವಿಜ್ಞಾನ, ಮನೋ ಹಾಗೂ ಆನಂದ ಎಲ್ಲವುಗಳ ಮೂಲಕ ಶರೀರವನ್ನು ಸ್ವಾಸ್ಥö್ಯವಾಗಿ ಇಟ್ಟುಕೊಳ್ಳುವುದನ್ನು ಶಾಖೆ ಕಲಿಸುತ್ತದೆ ಎಂದರು.
ಶಾಖೆಯಲ್ಲಿ ಯೋಗಕ್ಕೆ ಹೆಚ್ಚಿನ ಪ್ರಾಶಸ್ತö್ಯ ನೀಡಲಾಗುತ್ತದೆ. ಯೋಗದಿಂದ ಶರೀರ ಹಾಗೂ ಮನಸ್ಸನ್ನು ಗಟ್ಟಿಯಾಗಿಟ್ಟುಕೊಳ್ಳಲು ಸಾಧ್ಯ. ಶರೀರ ಸ್ವಾಸ್ಥö್ಯವಾಗಿದ್ದರೆ ಅಂದುಕೊAಡಿರುವುದನ್ನು ಸಾಧಿಸಲು ಸಹಾಯವಾಗುತ್ತದೆ ಎಂದರು.
ಬ್ರಿಟಿಷರು ನೀಡಿದ ಪಠ್ಯಕ್ರಮವನ್ನು ನಾವು ಅನುಸರಿಸುತ್ತಿದ್ದೇವೆ. ಅದರಿಂದ ಇಂದಿನ ಮಕ್ಕಳಿಗೆ ಬೇಕಿರುವ ವ್ಯವಹಾರಿಕೆ ಹಾಗೂ ಧಾರ್ಮಿಕ ಜ್ಞಾನ ಇಲ್ಲವಾಗಿದೆ. ಕಾರಣ, ನಮಗೆ ಎನ್‌ಇಪಿಯ ತುಂಬಾ ಅವಶ್ಯಕತೆ ಇತ್ತು. ಆದರೆ, ನಮ್ಮ ಕರ್ನಾಟಕ ಪ್ರಾಂತದಲ್ಲಿ ಎನ್‌ಇಪಿ ಜಾರಿಯಾಗಲಿಲ್ಲ ಎಂದರು. ಜಮಖಂಡಿಯ ಸ್ತಿçÃರೋಗ ತಜ್ಞೆ ಡಾ.ಲಕ್ಷ್ಮೀ ತುಂಗಳ ಇದ್ದರು.