This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local NewsNational NewsState News

ಕೂಡಲಸಂಗಮದಲ್ಲಿ ಶರಣ ಮೇಳ

ಕೂಡಲಸಂಗಮದಲ್ಲಿ ಶರಣ ಮೇಳ

ಬಾಗಲಕೋಟೆ

ಕ್ರೈಸ್ತರಿಗೊಂದು, ಮುಸ್ಲಿಂರಿಗೊಂದು ತೀರ್ಥ ಕ್ಷೇತ್ರಗಳಿದ್ದಂತೆ ಶರಣರಿಗೆ ತೀರ್ಥ ಕ್ಷೇತ್ರ ಯಾವುದೆಂದರೆ ಅದು ಕೂಡಲಸಂಗಮ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಹಮ್ಮಿಕೊಂಡ ೩೭ನೇ ಶರಣಮೇಳದಲ್ಲಿ ಸ್ವಾಮಿ ಲಿಂಗಾನAದ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಕನ್ನಡದ ಶರಣರಿಗೆ, ಶರಣು ಕನ್ನಡಕ್ಕೆ ಎಂದು ಭಾಷಣ ಆರಂಭಿಸಿದ ಹಂಸಲೇಖ ತಮ್ಮ ಜೀವನದಲ್ಲಿ ಅದೆಷ್ಟೋ ಮುಖ್ಯ ಘಟನೆಗಳು ನಡೆದಿವೆ.

ಜಿಲ್ಲೆಯಲ್ಲಿ ಒಂದು ಪ್ರಶಸ್ತಿ ಕೊಡುತ್ತಾರೆಂದರೆ ಅದು ಜಿಲ್ಲೆಯ ಸುದ್ದಿ. ಒಂದು ರಾಷ್ಟ್ರದಲ್ಲಿ ಸುದ್ದಿಯಾಗುವ ಪ್ರಶಸ್ತಿ ಅಂದರೆ ಅದು ರಾಷ್ಟ್ರೀಯ ಪ್ರಶಸ್ತಿ ಆಗುತ್ತದೆ. ಇಂದು ರಾಷ್ಟ್ರದಲ್ಲಿ ದೊಡ್ಡ ಸುದ್ದಿಯಾಗಿದೆ. ಈ ಪ್ರಶಸ್ತಿಗೆ ರಾಷ್ಟ್ರೀಯತೆ ಹೇಗೆ ಬಂತು ಅಂದರೆ ಈ ಸಮಾಜದ ದಿಟ್ಟ ಮಹಿಳೆ ಮೇಧಾ ಪಾಟ್ಕರ್ ಅವರು ಬಂದಿದ್ದಾರೆ. ಹೀಗಾಗಿ ಈ ಪ್ರಶಸ್ತಿಗೆ ರಾಷ್ಟ್ರಮಟ್ಟದ ಕೊಂಬು ಬಂದಿದೆ.

ನಮ್ಮ ದೇಶದಲ್ಲಿ ನದಿಗಳಿಗೆ ಹೆಣ್ಣುಮಕ್ಕಳ ಹೆಸರಿದೆ. ನರ್ಮದೆಯಿಂದ ಬಂದಿರುವ ಮೇಧಾ ಪಾಟ್ಕರ್ ಸಹ ಒಂದು ಹೆಣ್ಣು ಎಂದರು.

ಆಲಮಟ್ಟಿಯ ಜಲಾಶಯ ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಡ್ಯಾಂ ಆಗಿದೆ. ಆಲಮಟ್ಟಿಗೆ ೨೬ ಬಾಗಿಲುಗಳಿವೆ, ೮೪ ಕಿಲೋಮೀಟರ್ ಉದ್ದದ ನದಿಯಾಗಿದೆ. ಈ ಆಲಮಟ್ಟಿಯ ೨೬ ಬಾಗಿಲುಗಳು ಬಸವಣ್ಣನವರ ವಚನಗಳಿದ್ದಂತೆ. ಆಲಮಟ್ಟಿಯ ಕುರಿತು ನಾನು ಹಾಡು ಬರೆದಿದ್ದೇನೆ. ಮುಂದಿನ ತಿಂಗಳು ಬಿಡುಗಡೆಗೊಳಿಸಲಾಗುವುದು. ಇಡಿ ರಾಷ್ಟ್ರಕ್ಕೆ ಆಲಮಟ್ಟಿಯನ್ನು ಪರಿಚಯಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಆಲಮಟ್ಟಿ ೨೬ ಬಾಗಿಲುಗಳ ಮಹಾಗಂಗೆ. ಈ ವಿಚಾರಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಆ ೨೬ ಬಾಗಿಲು ಬಸವನ ಬಾಗಿಲು. ಬಸವ ನಮಗೆ ಭಾಗ್ಯಗಳನ್ನು ಕೊಟ್ಟ ಮಹಾ ಸಂತ. ಆ ಕುರಿತು ನಾಲ್ಕು ಹಾಡು ಬರೆದಿದ್ದು ಈ ತೆಂಕನದ ಕ್ಷೇತ್ರದಲ್ಲಿ ನಾನು ಇಲ್ಲಿಗೆ ತಂದು ಬಿಡುಗಡೆ ಮಾಡುವವನಿದ್ದೇನೆ. ಶರಣ ಗ್ರಂಥದಿAದ ಬಸವ ಭಾರತ ಆಗಲಿ ಎಂದರು.

ಬಸವಾತ್ಮಜೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್, ಈ ಶರಣಮೇಳದಲ್ಲಿ ಭಾಗಿಯಾಗಲು ಅವಕಾಶ ದೊರೆತಿದ್ದು ತಮ್ಮ ಪುಣ್ಯ. ಬಸವಣ್ಣನ ತಪೋಭೂಮಿ. ಇಂದು ನಾವೆಲ್ಲ ವಿಶ್ವಗುರು ಎಂಬ ಪದ ಕೇಳುತ್ತಿದ್ದೇವೆ. ಬಸವಣ್ಣ ಮಾತ್ರ ವಿಶ್ವಗುರು.

ಅಂದು ಬಸವಣ್ಣನವರ ವಿಚಾರಗಳಿಗೆ ಹೇಗೆ ವಿರೋಧವಿತ್ತೋ ಇಂದು ಸಹ ವಿರೋಧವಿದೆ. ಸಮಾನತೆಯ ವಿರೋಧಗಳ ಮಾತುಗಳನ್ನು ಕೇಳುತ್ತಿದ್ದೇವೆ. ಬೇಕೆ… ಬೇಕು ನ್ಯಾಯ ಬೇಕು ಎನ್ನುವ ಕನ್ನಡ ಪದ ಮಾತ್ರ ನನಗೆ ಗೊತ್ತಿದೆ. ನರ್ಮಾದಾ ನದಿ ಹೋರಾಟಗಾರರ ಮುಂದೆ ಈ ಪ್ರಶಸ್ತಿ ಸ್ವೀಕರಿದ್ದೇನೆ.

ಪರಿವರ್ತನೆಗೆ ಜನಶಕ್ತಿಯೇ ಸಾಕು. ಬಸವಣ್ಣ ಕ್ರಾಂತಿಕಾರಿಗಳು. ಆ ಕ್ರಾಂತಿಕಾರಿ ಕೆಲಸಗಳನ್ನು ಪಾಲನೆ ಮಾಡುವದು ನಮ್ಮ ಕರ್ತವ್ಯ ಎಂದು ಹೇಳಿದರು.

ಚಿತ್ರನಟ ಡಾಲಿ ಧನಂಜಯ, ನಾನು ಈ ಹಿಂದೆ ಅಲ್ಲಮಪ್ರಭು ಚಿತ್ರದಲ್ಲಿ ಅಲ್ಲಮಪ್ರಭುಗಳ ಪಾತ್ರ ಮಾಡಿದ್ದೆ. ಈವರೆಗಿನ ನನಗಿಷ್ಟದ ಪಾತ್ರ ಅಂದರೆ ಅದು ಅಲ್ಲಮಪ್ರಭು ಪಾತ್ರ. ಚರಾಚರ ಎಂಬುದು ಕಿಂಚಿತ್ತ್ ಎಂಬ ವಚಗಳನ್ನ ಹೇಳಿದ ನಾಟ ಡಾಲಿ ಧನಂಜಯ್, ಕೆಟ್ಟು ಹಾಳಾಗುವದು ಕಲ್ಯಾಣ, ಆಚಾರ, ಪ್ರಚಾರ ಇವೆಲ್ಲವೂ ಕಲ್ಯಾಣ ಎಂಬ ಬಸವಣ್ಣನವರ ವಚನ ಹೇಳಿದರು.

Nimma Suddi
";