ಹೋಳೆಆಲೂರ ರೆಲ್ವೆ ಬ್ರಿಡ್ಜ ಮಗ್ಗಲು ಪಾದಚಾರಿಗಳ ರಸ್ತೆ ಮಾದರಿಯಂತೆ ಬಾಗಲಕೋಟೆ-ಮಲ್ಲಾಪುರ ಮಲ್ಲಯ್ಯನ ದೇವಸ್ಥಾನಕ್ಕೆ ಪಾದಚಾರಿ ರಸ್ತೆ ನಿರ್ಮಾಕ್ಕೆ ಮನವಿ
ಬಾಗಲಕೋಟೆ:
ಬಾಗಲಕೋಟೆಯಿಂದ ಮಲ್ಲಾಪುರ-ಮುಗಳೋಳ್ಳಿ ರಸ್ತೆ ನಿರ್ಮಾಣ ಮಾಡುವಂತೆ ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ದಾರ ಕಮೀಟಿವತಿಯಿಂದ ಮನವಿ.
ಬಾಗಲಕೋಟೆ ನೂತನ ರೆಲ್ವೆ ನಿಲ್ದಾಣ ಕಾಮಗಾರಿ ವಿಕ್ಷಣೆಗೆ ಬಂದ ದಕ್ಷೀಣ ನೈರುತ್ಯ ವಲಯದ ರೈಲ್ವೆ ಇಲಾಖೆಯ ಹುಬ್ಬಳ್ಳಿಯ ಜೆನರಲ್ ಮ್ಯಾನೇಜರ್ ಸಂಜೀವ ಕೀಶೂರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಬಾಗಲಕೋಟೆಯಿಂದ ೨-೩ ಕಿ.ಮಿ ಅಂತರದಲ್ಲಿರುವ ಮಲ್ಲಾಪುರ ಮಲ್ಲಯ್ಯನ ದೇವಸ್ಥಾನವು ಬಹಳ ಪುರಾತನವಾಗಿದ್ದು ಸದರಿ ದೇವಸ್ಥಾನಕ್ಕೆ ಬಾಗಲಕೋಟೆಯಿಂದ ಸಾವಿರಾರು ಭಕ್ತಾಧಿಗಳು ಹೋಗಿ ಬರುತ್ತಿದ್ದು, ಆಲಮಟ್ಟಿ ಹಿನ್ನಿರಿನಿಂದ ರಸ್ತೆ ಮುಳಗಡೆ ಹೊಂದಿ, ದೇವಸ್ಥಾನಕ್ಕೆ ಹೋಗಿ ಬರಲು ೨೦-೨೫ ಕೀ.ಮೀ ಸುತ್ತವರಿದು ಹೋಗಿಬರಬೇಕಾಗುತ್ತದೆ
ಅಲ್ಲದೆ ಮಲ್ಲಾಪೂರದ ಸುತ್ತಮುತ್ತಲು ರೈತರ ಜಮಿನುಗಳಿದ್ದು, ಜಮೀನುಗಳಿಗೆ ಹೋಗಲು ರೈತರಿಗೂ ಸಹ ತೊಂದರೆಯಾಗುತ್ತಿದೆ, ಈಗ ಹೊಸದಾಗಿ ರೈಲ್ವೆ ಹಳಿ ಕಾಮಗಾರಿ ನಡೆದಿದ್ದು, ಬಾಗಲಕೋಟೆಯಿಂದ(ಮಲ್ಲಾಪುರ) ಮುಗಳೊಳ್ಳಿಗೆ ಹೋಗಲು ರಸ್ತೆ( ಬ್ರೀಜ್ದ್ ನಂ ೩೩ಕೆಎಮ್೯೬/೭೦೦-೮೦೦) ಡಬಲ್ ಲೈನ್ ನಿರ್ಮಾಣ ಕಾರ್ಯ ತೀವ್ರಗತಿಯಲ್ಲಿ ನಡೆದಿದೆ.
ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠರ ಆಶಯದಂತೆ ಭಕ್ತಾಧಿಗಳಿಗೆ ಹಾಗೂ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗವಂತೆ ಬಾಗಲಕೋಟೆಯಿಂದ ಮಲ್ಲಾಪುರ ಮುಗಳೋಳ್ಳಿಗೆ ಹೋಗಲು ಹೊಸದಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ಹಳಿಯ ಮಗ್ಗಲು ರಸ್ತೆಯನ್ನು ನಿರ್ಮಸಿಕೋಡಬೇಕೆಂದು ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ದಾರ ಕಮೀಟಿ ಒತ್ತಾಯಿಸಿದರು.
ಇದೆ ಸಂಧರ್ಭದಲ್ಲಿ ಸಂಸಧ ಪಿ.ಸಿ.ಗದ್ದಿಗೌಡರ ಉಪಸ್ಥಿತರಿದ್ದರು. ಕಮೀಟಿಯ ಪ್ರಭುಕಾಂತ ನಾರಾ, ಮಲ್ಲಪ್ಪ ಡಾವಣಗೇರೆ, ವೀರಣ್ಣ ಗಂಗಾವತಿ,ರಾಮಣ್ಣ ಕಟ್ಟಿಮನಿ, ಬಸವರಾಜ ಯಂಕಂಚಿ ,ನಾನೆಗೌಡ ಪಾಟೀಲ, ಮಲ್ಲಯ್ಯಸ್ವಾಮಿ ಕುಂದರಿಗಿಮಠ,ಬಸಯ್ಯ, ಶಂಕರ ಸಗರ, ಸಂಗಪ್ಪ ಸಜ್ಜನ, ದರಿಯಪ್ಪ ಯಳ್ಳಿಗುತ್ತಿ, ಸಂಗಪ್ಪ ಕೊಪ್ಪದ, ಶಿವಶಂಕರ ಯಾದವಾಡ, ತಮ್ಮಣ್ಣ ಯಳ್ಳಿಗುತ್ತಿ, ಸುರೇಶ ಮಜ್ಜಗಿ ಸೇರಿದಂತೆ ಅನೇಕರು ಇದ್ದರು.