ಕೊಪ್ಪಳ : ಬಹುಸಂಖ್ಯಾತ ದಲಿತರ ದಶಕಗಳ ಬೇಡಿಕೆಯಾಗಿದ್ದ ನ್ಯಾ. ಎ ಜೆ ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸಚಿವ ಸಂಪುಟದಲ್ಲಿ ಅಂಗಿಕರಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿದ ಪ್ರಯುಕ್ತ, ದಲಿತ ಸಂಘಟನೆಗಳ ಒಕ್ಕೂಟದಿಂದ ವಿಜಯೋತ್ಸವ ಆಚರಿಸಿ ಸಂಭ್ರಮಿಸಲಾಯಿತು. ಇದೇ ವೇಳೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಸೇರಿದಂತೆ ಎಲ್ಲಾ ಸಚಿವ ಸಂಪುಟದ ಎಲ್ಲಾ ಸಚಿವರಿಗೆ ಅಭಿನಂದನೆ ಸಲ್ಲಿಸಲಾಯಿತು. ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಪೂಜಾರ ಹಾಗೂ ಹನುಮಂತಪ್ಪ ಮ್ಯಾಗಳಮನಿ, ಯಲ್ಲಪ್ಪ ಹಳೆಮನಿ ಮಾತನಾಡಿ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಮಾದಿಗ ಸಮಾಜದ ಮುಖಂಡರಾದ , ನಿಂಗಜ್ಜ ಶಾಪುರ, ಹನುಮಂತಪ್ಪ ಮ್ಯಾಗಳಮನಿ, ಶಿವಣ್ಣ ಹಟ್ಟಿ, ಗಾಳೆಪ್ಪ ಹಿಟ್ನಾಳ,ಮಾರುತಿ ಚಾಮಲಾಪೂರ,, ಮಲ್ಲಿಕಾರ್ಜುನ ಪೂಜಾರ, ಲಕ್ಷ್ಮಣ ಗುಳದಳ್ಳಿ ಯಮನೂರಪ್ಪ ದನಕನದೊಡ್ಡಿ, ಈರಪ್ಪ ಕಂಪಸಾಗರ, ಯಲ್ಲಪ್ಪ ಹಳೆಮನಿ ಆನಂದ ದೊಡ್ಡಮನಿ, ಹನುಮಂತ ಡಿ ಹೊಸಳ್ಳಿ, ಭೀಮಣ್ಣ ಹಿಟ್ನಾಳ, ನಾಗರಾಜ ಮ್ಯಾಗೇರಿ ಲಕ್ಷ್ಮಣ ಗುಳದಳ್ಳಿ,ದೇವರಾಜ ನಡುಲಮನಿ,ರಮೇಶ ಬೇಳೂರು,,ಕೆಂಚಪ್ಪ ವೀರಾಪೂರ,ರವಿಚಮ್ಡ್ರ ಗುಡ್ಲಾನೂರ,ಯಂಕಪ್ಪ ಹೊಸಳ್ಳಿ,ಹನುಮೇಶ ಹಾಲವರ್ತಿ,ಯಮನೂರಪ್ಪ ಗೊರವರ,ಬಸವರಾಜ ಕುಕನೂರ,ದೇವೆಂದ್ರ ಪೂಜಾರ,ದುರುಗೇಶ ಅಳವಂಡಿ,ಮಹಾಂತೇಶ ದೊಡ್ಡಮನಿ,ಮುದುಕಪ್ಪ ಕೊಪ್ಪಳ,ನಾಗರಾಜ ಬಂಗ್ಲಿ,ಮಲ್ಲಿಕಾರ್ಜುನ ಬಂಗ್ಲಿ,ಲಕ್ಷ್ಮಣ ಹೊಸಮನಿ,ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು