ತುಮಕೂರು: ಸರ್ಕಾರ ಮಾಡಲು ಕಷ್ಟವಾಗುವ ಅನ್ನ, ಆಹಾರ, ಆರೋಗ್ಯ ಮೊದಲಾದ ಸೇವೆಗಳನ್ನು ಮಠಮಾನ್ಯಗಳು ಅಚ್ಚುಕಟ್ಟಾಗಿ ಒದಗಿಸುತ್ತಿದ್ದು, ಮಠಗಳ ಅನುದಾನ ಕಡಿತ ಮಾಡದೆ ಲಭ್ಯವಿರುವ ಸಂಪನ್ಮೂಲದ ಆಧಾರದ ಮೇಲೆ ಅನುದಾನ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಇದೇ ವೇಳೆ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದು, ಡಾ..ಶಿವಕುಮಾರ ಶಿವಮೂರ್ತಿ ಶಿವಯೋಗಿಗಳ 5 ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ದಾಸೋಹ ದಿನ ನಮ್ಮ ಪಾಲಿಗೆ ಪುಣ್ಯ ದಿನವಾಗಿದ್ದು ಸಿದ್ಧಗಂಗಾ ಶ್ರೀಗಳು ಅನ್ನ ಆರೋಗ್ಯ, ಅಕ್ಷರ ದಾಸೋಹದ ಮೂಲಕ ದಾರಿ ದೀಪವಾದವರು. ಪ್ರತಿಬಾರಿಯೂ ಮಠಕ್ಕೆ ಬಂದಾಗಲೂ ಮೊದಲಿಗೆ ವಿಚಾರಿಸುತ್ತಿದ್ದುದು ಪ್ರಸಾದ ಆಯ್ತಾ ಎಂದು ಹೇಳಿದರು.
ಮಠದ ಮಾನ್ಯ ಗಳು ಸರಕಾರ ಮಾಡಲು ಕಷ್ಟವಾಗುವ ಅನ್ಮ ಆಹಾರ, ಆರೋಗ್ಯ ಸೇವೆ ಒದಗಿಸುತ್ತಿರುವ ಬಗ್ಗೆ ನಾನು ಹಲವಾರಯ ವೇದಿಕೆಯಲ್ಲಿ ಹೇಳಿದ್ಧೇನೆ. ಮಠಮಾನ್ಯಗಳು ಶಿಕ್ಷಣ ಆರಂಭಿಕ ಶಿಕ್ಷಣ ಹಾಗೂ ಉನ್ನತ ಶಿಕ್ಷಣದಲ್ಲಿ ಜಾತಿ ಧರ್ಮ ಇಲ್ಲದೆ ಬಡಮಕ್ಕಳಿಗೆ ಕೆಲವು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿವೆ. ಯಾವುದೇ ಧರ್ಮ, ಜಾತಿ ತುಷ್ಠೀಕರಣ ಮಾಡದೆ ಅನುದಾನ ಹಂಚಿಕೆ ಮಾಡಿ. ಮಠಗಳ ಅನುದಾನ ಕಡಿತ ಮಾಡದೆ ಲಭ್ಯವಿರುವ ಸಂಪನ್ಮೂಲದ ಆಧಾರದ ಮೇಲೆ ಅನುದಾನ ನೀಡಿ. ಎಂದು ಸೂಚಿಸಿದರು.