This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

International NewsLocal NewsNational NewsState News

ಕಾನೂನಿನ ಹೋರಾಟದ ಮೂಲಕ ಕಾಶಿ ಮಥುರಾ ವಿಮೋಚನೆ

ಕಾನೂನಿನ ಹೋರಾಟದ ಮೂಲಕ ಕಾಶಿ ಮಥುರಾ ವಿಮೋಚನೆ

ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾನ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಷ್ಟೆ ಖುಷಿ : ಚರಂತಿಮಠ

ಬಾಗಲಕೋಟೆ:

ಕಾನೂನು ಹೋರಾಟದ ಮುಖಾಂತರವೇ ಕಾಶಿ ಮಥುರಾ ವಿಮೋಚನೆಯಾಗಲಿದ್ದು, ಅಯೋಧ್ಯ ಪ್ರಭು ಶ್ರೀ ರಾಮನ ಪ್ರಾಣ ಪ್ರತಷ್ಠಾಪನೆ ದೇಶದಲ್ಲಿ ಮೋತ್ತಮ್ಮೆ ಸ್ವಾತಂತ್ರ‍್ಯ ಸಿಕ್ಕಿದಷ್ಟು ಖುಷಿ ಮನೆಮಾಡಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು,

ನಗರದ ಬಿ.ವಿ.ವಿ.ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಆವರಣದಲ್ಲಿರುವ ಶಿವಾಲಯದಲ್ಲಿ ರಾಮಜನ್ಮ ಭೂಮಿಯ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಸೋಮವಾರದಂದು ವಿಶೇಷ ಹೋಮ,ಹವನ,ಅನ್ನಸಂತರ್ಪಣೆ,ದೀಪೋತ್ಸವಗಳ ರಾಮೋತ್ಸವಕ್ಕೆ ಶ್ರೀರಾಮಲಲ್ಲಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಆರತಿ ಚಾಲನೆ ನೀಡಿ ಮಾತನಾಡಿದರು.
‘ಕಾನೂನಿನ ಚೌಕಟ್ಟಿನಲ್ಲಿ, ಅಯ್ಯೋಧೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಂಡಿದೆ.

ಭಾರತೀಯರ ರಾಮಮಂದಿರ ಸ್ಥಾಪನೆ ಕುರಿತು ಹಲವು ಶತಮಾನಗಳ ಕನಸು ನನಸಾಗುತ್ತಿರುವ ಈ ಸಂಭ್ರಮದಲ್ಲಿ ಇಡೀ ದೇಶದ ಜನತೆ ಪಾಲ್ಗೊಂಡಿದೆ. 1947 ರ ಸ್ವಾತಂತ್ರ್ಯ ಪಡೆದ ಸಂಭ್ರಮ ಈಗ ಮತ್ತೆ ಮರುಕಳಿಸುತ್ತಿದೆ. ಇವತ್ತು ಸೋಮನಾಥ ಟೆಂಪಲ್ ಸರ್ಧಾರ್ ವಲ್ಲಭಭಾಯಿ ಪಟೇಲ್ ಇದ್ದಾಗಲೇ ಜೀರ್ಣೋದ್ಧಾರ ಆಗಿತ್ತು,

ಹಿರಿಯರಾದ ಎಲ್.ಕೆ.ಅಡ್ವಾನಿಯವರ ಹೋರಾಟ ಫಲ ಮೋದಿ ಅವರ ಕಾಲದಲ್ಲಿ ರಾಮಮಂದಿರ ಆಗಿದೆ. ಇವರ ಕಾಲದಲ್ಲೇ ಕಾಶಿ ಮಥುರಾ ಎರಡು ಸ್ಥಳಗಳು ಮಸೀದಿ ಮುಕ್ತ ಆಗುತ್ತವೆ ಎಂಬ ನಂಬಿಕೆ ಇದೆ,ಕಾಶಿ ಮಥುರಾ ಹೋರಾಟ ಅಯೋದ್ಯಾ ತರಹ ತೀವ್ರತರಹ ಆಗೋದಿಲ್ಲ.

ಯಾಕೆಂದರೆ ಸರ್ವೆ ಮಾಡೋದಕ್ಕೆ ಕೋರ್ಟ್ ಆದೇಶ ನೀಡಿದೆ. ಕಾಶಿ ಸರ್ವೆ ವರದಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿ ಆಗಿದೆ, ಮಥುರಾ ಸರ್ವೆ ಮಾಡೋದಕ್ಕೆ ಅಲಹಾಬಾದ್ ಅನುಮತಿ ಕೊಟ್ಟಿತ್ತು, ತಾತ್ಕಾಲಿಕವಾಗಿ ಸುಪ್ರೀಂ ಕೋರ್ಟ್ ತಡೆ ಕೊಟ್ಟಿದೆ. ಇದೇ ತಿಂಗಳು 23 ಅಥವಾ 29 ಅದರ ವಿಚಾರಣೆ ನಡೆಯಲಿದೆ, ನಮಗೆ ವಿಶ್ವಾಸವಿದೆ ಕಾನೂನು ಹೋರಾಟದ ಮುಖಾಂತರವೇ ಕಾಶಿ ಮಥುರಾ ವಿಮೋಚನೆಯಾಗುತ್ತದೆ

ಆದಷ್ಟು ಬೇಗ ಆಗಲಿ ಎಂದು ಪ್ರಾರ್ಥನೆ ಮಾಡೋಣ ಎಂದ ಅವರು ಈ ಸಂಭ್ರಮದ ಘಳಿಗೆಯನ್ನು ನಮ್ಮ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ,ಜೋತಗೆ ನಗರ ಗ್ರಾಮೀಣ ಬಾಗದ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಅನ್ನಸಂತರ್ಪಣೆ,ದೀಪೋತ್ಸವ ಕಾರ್ಯಕ್ರಮಗಳಲ್ಲಿ ಗ್ರಾಮೀಣ ಜನ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಶ್ರೀರಾಮನ ಭಕ್ತಿ ಮೇರೆದಿದ್ದಾರೆ ಎಂದರು.

ನಂತರ ಶಿವಾಲಯದ ಎದುರಿಗೆ ವೈದ್ಯ ವಿದ್ಯಾರ್ಥಿಗಳು ಬಿಡಿಸಿದ ವಿವಿಧ ರಂಗೋಲಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಿವಾಲಯದಲ್ಲಿ ಈಶ್ವರನ ದರ್ಶನ ಪಡೆದು, ಶ್ರೀರಾಮಲಲ್ಲಾ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಹೋಮಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಬಿ.ವ್ಹಿ.ವ್ಹಿ.ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಬಿ.ವಿ.ವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ (ಬೇವೂರ), ಮಹಾಂತೇಶ ಶೆಟ್ಟರ, ಬಿ.ವಿ.ವಿ ಸಂಘದ ಗೌರವಾನ್ವಿತ ಸದಸ್ಯರು, ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ದಂತ ವೈದ್ಯಕೀಯ ಕಾಲೇಜ್ ಪ್ರಾಚಾರ್ಯ ಡಾ.ಶ್ರೀನಿವಾಸ ವನಕಿ, ನರ್ಸಿಂಗ್ ಕಾಲೇಜ್ ಪ್ರಾಚಾರ್ಯ ಡಾ.ದಿಲೀಪ್ ನಾಟೆಕರ್, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ, ಡಾ.ಸೊಲಬಣ್ಣವರ್, ಡಾ.ಆಶಾಲತಾ ಮಲ್ಲಾಪೂರ, ಡಾ.ಕೋರಾ, ವಿವಿಧ ಕಾಲೇಜುಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

*ವಿವಿದಡೆ ಬೇಟಿ*
ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ನಗರ ಹಾಗೂ ಗ್ರಾಮೀಣ ಬಾಗದ ಕಾರ್ಯಕ್ರಮದಲ್ಲಿ ಬಾಗಿಯಾದರು, ಮುಚಖಂಡಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಹಾಗೂ ಶ್ರೀ ವೀರಭದ್ರೇಶ್ವರ ದೆವರಗೆ ವಿಶೇಷ ಪೂಜೆ ಕಾರ್ಯದಲ್ಲಿ ಹಾಗೂ ಇಂಜನಿಯರಿಂಗ ಕಾಲೇಜು ವೃತ್ತದಲ್ಲಿರುವ ಶಿವಾಲಯದಲಕ್ಕೆ ಬೇಟಿ ಅನ್ನಸಂತರ್ಪಣೆಗೆ ಚಾಲನೆ, ಕಣವಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಅನ್ನಸಂತರ್ಪಣೆ ಕಾರ್ಯಕ್ಕೆ ಚಾಲನೆ, ಮೋಟಗಿ ಶ್ರಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ, ನವನಗರದ ಲಕ್ಷ್ಮೀ ದೇವಸ್ಥಾನ,ಆಶ್ರಯ ಕಾಲೋನಿಯಲ್ಲಿರುವ ಶ್ರೀ ಆಂಜನೇಯ,ವಿದ್ಯಾಗಿರಿಯಲ್ಲಿ ಕಾಳಿಕಾಂಬಾ ದೇವಸ್ಥಾನದಲ್ಲಿ ನೂತನ ಮೌನೇಶ್ವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಬಾಗವಹಸಿದ ದರ್ಶನ ಪಡೆದರು,ನಂತರ ಅಮೀನಗಡದಲ್ಲಿ ನಡೆದ ಶ್ರೀರಾಮೋತ್ಸವ ಹಾಗೂ ಸೀತಿಮನಿಯಲ್ಲಿ ನಡೆದ ಸೀತಾಮಾತಾ ದೇವಸ್ಥಾನಕೆ ಬೇಟಿ ನೀಡಿ ದರ್ಶನ ಪಡೆದರು.

Nimma Suddi
";