ಬಾಗಲಕೋಟೆ
ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣ ಮಹತ್ವದ ಪಾತ್ರ ವಹಿಸುತ್ತದೆ ಎಂದು ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.
ನಗರದ ಬಸವೇಶ್ವರ ಬ್ಯಾಂಕ್, ಸಿರಿ ಸಾಂಸ್ಕೃತಿಕ ಸಂಸ್ಥೆ, ಜಿಲ್ಲಾ ವನಿತಾ ಲೋಕ, ವನಸಿರಿ ಸರ್ವಾಭಿವೃದ್ಧಿ ಸಂಸ್ಥೆ ವತಿಯಿಂದ ನಾನಾ ಕೌಶಲ್ಯಾಭಿವೃದ್ಧಿ ತರಬೇತಿಗಳ ೧೮ನೇ ಬ್ಯಾಚ್ ಉದ್ಘಾಟಿಸಿ ಅವರು ಮಾತನಾಡಿದರು. ಬ್ಯಾಂಕ್ ವತಿಯಿಂದ ನಡೆಸುತ್ತಿರುವ ಕೌಶಲ್ಯ ತರಬೇತಿ ಪಡೆದು ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಸ್ಪೋಕನ್ ಇಂಗ್ಲೀಷ ತರಬೇತುದಾರ ಅಶೋಕ ಕೆಂಪಲಿAಗಣ್ಣವರ, ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಇಂಗ್ಲೀಷ್ ಕಲಿಕೆಯ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ವಿವೇಕಾನಂದ ಕೇಮಾಳಿ, ಅಕಾರಿಗಳಾದ ಬಿ.ಎಸ್.ನಾವಲಗಿ, ಎಸ್.ಬಿ.ಬದಾಮಿ, ಪಿ.ಎನ್,ಹಳ್ಳಿಕೇರಿ, ಎಂ.ಎಸ್.ಗುಡಗುAಟಿ, ವಿ.ಎಂ.ಹಿರೇಮಠ, ಶಿಲ್ಪಾ ಯರಾಶಿ, ಜಯಮ್ಮ ಅಬ್ದುಲಪೂರ, ಉಷಾ ಜಿಗಜಿನ್ನಿ, ಅರ್ಚನಾ ಗಡ್ಡಿಮಠ, ತರಬೇತುದಾರರಾದ ರಾಜೇಶ್ವರಿ ಅಂಗಡಿ, ಮಂಜುಳಾ ಭೂತೆ ಇದ್ದರು.
ತರಬೇತಿ ಪಡೆದು ಉದ್ಯೋಗ ಕೈಗೊಂಡು ಸಾಧನೆ ಮಾಡಿರುವ ಇಬ್ಬರು ಮಹಿಳೆಯರಿಗೆ ಸಿರಿ ಸಂಸ್ಥೆಯಿAದ ಸನ್ಮಾನಿಸಲಾಯಿತು. ೭೫ಕ್ಕೂ ಹೆಚ್ಚಿನ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ತರಬೇತಿಯಲ್ಲಿ ಭಾಗವಹಿಸಿದ್ದರು.