ಮೈಸೂರು: ನಾವೂ ಶ್ರೀರಾಮನ ಭಕ್ತರೇ, ಜೈ ಶ್ರೀರಾಮ್ ಬಿಜೆಪಿ ಆಸ್ತಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮಾತನಾಡಿದ ಅವರು, ನಾವೂ ಶ್ರೀರಾಮನ ಘೋಷಣೆ ಕೂಗುತ್ತಿದ್ದು, ನನ್ನ ಹೆಸರಲ್ಲೇ ರಾಮ ಇದ್ದಾನೆ, ತಂದೆ ಹೆಸರಲ್ಲೂ ರಾಮ ಇದ್ದು, ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಹೇಳುವಂತೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರಿಗೆ ಮನವಿ ಮಾಡಿದ್ದೆ ಎಂದರು.
ಜಾತ್ಯತೀತ ಪಕ್ಷವು ಕೋಮುವಾದಿ ಪಕ್ಷದ ಜೊತೆ ಕೈಜೋಡಿಸಿದ್ದು, ಅಧಿಕಾರಕ್ಕೆ ಬಂದು ಎಂಟು ತಿಂಗಳಿನಲ್ಲೇ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಈ ಬಗ್ಗೆ ಚರ್ಚೆ ಮಾಡಲು ಬಿಜೆಪಿ ಒಂದೇ ವೇದಿಕೆಗೆ ಬರಲಿ ಎಂದು ಸವಾಲು ಹಾಕಿದ್ದು, ಡಿ. 23ಕ್ಕೆ ಬರ ಪರಿಹಾರ ಸಭೆ ಮಾಡುವುದಾಗಿ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.
ಜ. 24 ಆದರೂ ಮೀಟಿಂಗ್ ಮಾಡಿಲ್ಲ. ಬಿಜೆಪಿಗೆ ರೈತರ ಪರ ಕಾಳಜಿ ಇಲ್ಲ. ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದೇ ಮಾತನಾಡಿದ್ದು.ಕೇಂದ್ರಕ್ಕೆ ಬರ ಪರಿಹಾರಕ್ಕೆ ಮನವಿ ನೀಡಿ ಮೂರ್ನಾಲ್ಕು ತಿಂಗಳಾಗಿದ್ದು, ಪ್ರತಾಪ್ ಸಿಂಹ ನಾಚಿಗೆ ಮಾನ ಮರ್ಯಾದೆ ಇಲ್ಲ. ಪ್ರಧಾನಿಯನ್ನು ಭೇಟಿ ಮಾಡಿದ್ದಾಗಲೂ ನೆನಪಿಸಿದ್ದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ರೈತರ ಮಗನಂತೆ. ಹಾಗಾದರೆ ನಾನು ಯಾರ ಮಗ? ರೈತನ ಮಗನಲ್ವಾ ಎಂದು ಪ್ರಶ್ನಿಸಿದ್ದಾರೆ.