ಬೆಂಗಳೂರು: ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯದಿಂದ ನಗರದಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದು, ಕಳೆದ ವರ್ಷದಿಂದ ಬಿಎಂಟಿಸಿ ಬಸ್ಗೆ ಬಲಿಯಾದವರ ಸಂಖ್ಯೆ ಹೆಚ್ಚಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
2023 ಆಗಸ್ಟ್ನಲ್ಲಿ 2, ಅಕ್ಟೋಬರ್ನಲ್ಲಿ 5, ಹಾಗೂ ಜನವರಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಬಿಎಂಟಿಸಿ ಬಸ್ಗಳ ಅಪಘಾತಕ್ಕೆ ಬ್ರೇಕ್ ಹಾಕಲು ನಗರ ಸಂಚಾರಿ ಪೊಲೀಸರು ಯೋಜನೆ ರೂಪಿಸಿದ್ದು, ಅದು ಪ್ರತಿದಿನ 50 ಬಿಎಂಟಿಸಿ ಬಸ್ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ. ಈ ಬಗ್ಗೆ ಸಂಚಾರ ವಿಭಾಗದ ಜಂಟಿ ಆಯುಕ್ತ ಅನುಚೇತ್ ಮಾತನಾಡಿ, ಪ್ರತಿವರ್ಷ ಬಿಎಂಟಿಸಿ ಬಸ್ಗಳಿಂದ 30ಕ್ಕು ಹೆಚ್ಚು ಮಾರಣಾಂತಿಕ ಅಪಘಾತಗಳು ಸಂಭವಿಸುತ್ತಿದ್ದು, ಹೆಚ್ಚು ಜನರಿಗೆ ಗಂಭೀರ ಗಾಯ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು.
ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳು ಸಾಕಷ್ಟಿದ್ದು, ಸಿಗ್ನಲ್ ಜಂಪ್ ಮತ್ತು ಅತಿವೇಗದ ಚಾಲನೆ ಪ್ರಕರಣಗಳು ಹೆಚ್ಚಾಗಿವೆ. ಅದ್ದರಿಂದ ಬಿಎಂಟಿಸಿ ಚಾಲಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಪ್ರತಿದಿನ 50 ಕ್ಕೂ ಹೆಚ್ಚು ಚಾಲಕರಿಗೆ ಸಂಚಾರಿ ನಿಯಮಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. 12 ಸಾವಿರ ಚಾಲಕರಿಗೂ ತರಬೇತಿ ನೀಡುತ್ತೇವೆ. ಈಗಾಗಲೇ ಸುಮಾರು 3 ಸಾವಿರ ಚಾಲಕರಿಗೆ ತರಬೇತಿ ನೀಡಲಾಗಿದೆ ಎಂದು ಮಾಹಿತಿ ಕಂಡು ಬಂದಿದೆ.