This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಕರ್ನಾಟಕದ ಕೆಲವು ರಾಜಕಾರಣಿಗಳು ಈಗಲೂ ನರಬಲಿ ಕೊಡುತ್ತಾರೆ: ನಿರ್ದೇಶಕ ಅಗ್ನಿ ಶ್ರೀಧರ ಆರೋಪ

ಕರ್ನಾಟಕದ ಕೆಲವು ರಾಜಕಾರಣಿಗಳು ಈಗಲೂ ನರಬಲಿ ಕೊಡುತ್ತಾರೆ: ನಿರ್ದೇಶಕ ಅಗ್ನಿ ಶ್ರೀಧರ ಆರೋಪ

ಬೆಂಗಳೂರು: ನರಬಲಿ ಹೆಣ್ಣು ಮಕ್ಕಳ ಬಲಿ ಈಗಲೂ ಇದ್ದು, ಕಾಮಾಕ್ಯದಿಂದ ಕೇರಳದವರೆಗೂ ನರಬಲಿ ನಡೆಯುತ್ತದೆ. ಬಡ ಮಕ್ಕಳನ್ನು, ಒಂಟಿ ಹೆಣ್ಣು ಮಕ್ಕಳನ್ನು ಮತ್ತು ಬಿಕ್ಷುಕರನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತೆ.

ಕರ್ನಾಟಕದ ಕೆಲವು ರಾಜಕಾರಣಿಗಳು ಈಗಲೂ ನರಬಲಿ ಕೊಡುತ್ತಿದ್ದು, ನೇರವಾಗಿ ಅವರು ಇದರಲ್ಲಿ ಭಾಗಿಯಾಗಲ್ಲ. ಆದರೆ ಈ ಕೆಲಸ ಮಾಡಿಸುತ್ತಾರೆ ಎಂದು ನಿರ್ದೇಶಕ ಅಗ್ನಿ ಶ್ರೀಧರ್ ಆರೋಪ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಂಡುಪಾಳ್ಯ ಗ್ಯಾಂಗ್​ ಮೇಲೆ ಕೊಲೆ ಆರೋಪ ಹೊರಿಸಿದರು ಎಂದರು.ದಂಡುಪಾಳ್ಯ ಗ್ಯಾಂಗ್ ಆ ಕೊಲೆಗಳನ್ನು ಮಾಡಿರಲಿಲ್ಲ. ದಂಡುಪಾಳ್ಯ ಸಿನಿಮಾದಲ್ಲಿ ತೋರಿಸುವ ಅಂಶಗಳು ನೈಜವಲ್ಲ. ಕ್ರೀಂ ಸಿನಿಮಾದ ಕಥೆ ನರಬಲಿಗೆ ಸಂಬಂಧಿಸಿದೆ ಎಂದು ತಿಳಿಸಿದರು.

ಇನ್ನು ಅಗ್ನಿ ಶ್ರೀಧರ ಕ್ರೀಂ ಚಿತ್ರದಲ್ಲಿ ನಟಿಸಿದ್ದು, ಡಿ.ಕೆ.ದೇವೇಂದ್ರ, ನಿರ್ಮಿಸಿರುವ ಈ ಸಿನಿಮಾವನ್ನು ಅಭಿಷೇಕ್ ಬಸಂತ್ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿದ್ದಾರೆ. ಈ ಚಿತ್ರದ ವಿಷುಯಲ್ ಟ್ರೇಲರ್ ಇತ್ತೀಚೆಗೆ ಎ2 ಮ್ಯೂಸಿಕ್ ಮೂಲಕ ಬಿಡುಗಡೆಯಾಯ್ತು. ಲೇಖಕ ಅಗ್ನಿ ಶ್ರೀಧರ್ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದರು ಎಂದು ಮಾಹಿತಿ ಕಂಡು ಬಂದಿದೆ.

 

";