ವಿದ್ಯೆ ಎಂದರೆ ಸಾಕು ಆ ಪದ ವಿನಯಕ್ಕೆ ಮಾತ್ರ ಸೂಕ್ತವಾಗುತ್ತದೆ ಎಂದು ತಿಳಿದವರು ಹೇಳುತ್ತಾ ಬಂದಿದ್ದಾರೆ. ಆದರೆ ವಿದ್ಯಾರ್ಥಿಗಳಾದ ನಾವು ಅಹಂಕಾರವನ್ನು ತೊರೆಯಬೇಕು ಅತೀಯಾದ ಬಯಕೆಯನ್ನು ಸುಟ್ಟು ಹಾಕಬೇಕು. ಆದರೆ ಇವತ್ತಿನ ದಿನ ಅತೀ ಹೆಚ್ಚು ದೇಶ ಬಗ್ಗೆ ನಿರ್ಲಕ್ಷö್ಯವನ್ನು ಹೊಂದುತ್ತಾ ಇದ್ದೇವೆ. ಅದೆಷ್ಟೋ ವಿದ್ಯಾವಂತರಿ0ದಲೆ ದೇಶದ ಆರ್ಥಿಕ ಸ್ಥಿತಿಗತಿಯೂ ಅದಗೆಡಲೂ ಕಾರಣವೂ ಆಗಿದೆ. ಆಗಿದ್ದರೆ ವಿದ್ಯಾವಂತರೆ ಕಾರಣ ಹೇಗೆ ಎಂದು ಪ್ರಶ್ನೇ ಮಾಡಿದರೆ ತುಂಬಾ ನಿಧಾನವಾಗಿ ಯೋಚನೆ ಮಾಡಿದರೆ, ಇವತ್ತು ತಂತ್ರಜ್ಷಾನದಲ್ಲಿ ಅತೀ ಹೆಚ್ಚು ಮುಂದುವರೆದವರು ವಿದ್ಯಾವಂತರೆ ಆ ತಂತ್ರಜ್ಷಾನದ ಮೂಲಕ ಜನರಿಗೆ ಮೋಸ ಮಾಡುವವರು ಆಗಿದ್ದಾರೆ. ಆ್ಯಕ್ ಮಾಡುವವರು, ಟ್ರೋಲ್ ಮಾಡುವವರು ಸೈಬರ್ ಕೈಂ ಮಾಡುವವರೆಲ್ಲ ವಿದ್ಯಾವಂತರೆ, ಇವತ್ತು ಪೇಸ್‌ಬುಕ್‌ನಲ್ಲಿ ಎಷ್ಟೊಂದು ಜನರ ಐಡಿಯನ್ನು ಆ್ಯಕ್ ಮಾಡಿ ದುಡ್ಡನ್ನು ಪಡೆದುಕೊಳ್ಳುತ್ತಿಲ್ಲವೆ ನೀವೇ ಅರ್ಥ ಮಾಡಿಕೊಳ್ಳಿ? ಎಷ್ಟು ಜನ ಹೆಣ್ಣು ಮಕ್ಕಳು ಈ ಸಮಾಜಿಕ ಜಾಲತಾಣದಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ರೀತಿಯ ಅಡ್ಡ ದಾರಿಯನ್ನು ಹಿಡಿಯಿರಿ ಅಂತ ಯಾವ ಪುಸ್ತಕವೂ ಹೇಳಿಕೊಟ್ಟಿಲ್ಲ. ಅದರೂ ಕೆಟ್ಟ ಮಾರ್ಗ ಕಂಡುಕೊಳ್ಳುವುದು ತಪ್ಪಲ್ಲವೇ?.
ಶಾಲೆಯಿಂದ ಹಿಡಿದು ಕಾಲೇಜ್‌ವರಿಗೂ ಸ್ವಾತಂತ್ರö್ಯ ಹೋರಾಟಗಾರರ ಬಗ್ಗೆ ಓದಿಕೊಂಡು ಬರುತ್ತೇವೆ ಆದರೆ ಇವತ್ತು ಬ್ರಷ್ಟಾಚಾರವನ್ನು ನೋಡಿಕೊಂಡು ಸುಮ್ಮನೆ ಇರುತ್ತೇವೆ. ಯಾರೋ ಅಧಿಕಾರಿ ಅಮಾಯಕರನ್ನು ದುರುಪಯೋಗ ಮಾಡಿಕೊಳ್ಳುವುದು ಕಣ್ಣಾರೆ ನೋಡುತ್ತೇವೆ ಆದರೂ ಸುಮ್ಮನೆ ನಮಗೆ ಯಾಕೆ ಬೇಕು ಅಂತ ನಮ್ಮ ದಾರಿಯನ್ನು ಹಿಡಿಯುತ್ತೇವೆ. ನಮಗೆ ಯಾಕೇ ಬೇಕು ಎನ್ನುವ ನಾವು ನಮಗೆ ಶಿಕ್ಷಣ ಆದರೂ ಯಾಕೆ ಬೇಕು ಎಂಬ ಪ್ರಶ್ನೇ ನಮ್ಮ ತಲೆಯಲ್ಲಿ ಬರುವುದಿಲ್ಲ. ಸರಳವಾಗಿ ಮೋಸ ಮಾಡಿಕೊಂಡೆ ಜೀವನ ಮಾಡಬಹುದು ಅಲ್ಲವೇ? “ಅಕ್ಷರದ ಮಹತ್ವ ಅರಿತವರಿಗೆ ಗೋತ್ತು” ಎನ್ನುವಂತೆ ವಿದ್ಯಾವಂತರ ಕೈಯಲ್ಲಿಯೇ ದೇಶದ ಭವಿಷ್ಯ ಅಡಗಿರುತ್ತದೆ ಎನ್ನುವುದನ್ನು ಮರಿಯಬಾರದು ಅಲ್ಲವೇ! ಹಲವಾರು ಕಡೆ ನೋಡಿದರು ಇವತ್ತು ವಿದ್ಯಾವಂತರು ಏನು ಮಾಡುತ್ತಾ ಇದ್ದಾರೆ ಅಂದರೆ ತುಂಬಾ ಓದಿಕೊಂಡಿದ್ದೇನೆ ಅಂತಾ ನಾಲ್ಕು ಮಂದಿ ಮುಂದೆ ತಲೆ ಎತ್ತಿ ನಡೆಯುತ್ತಾರೆ. ಆದರೆ ಪಕ್ಕದಲ್ಲಿ ಒಬ್ಬ ಅಜ್ಜ ನರಳಾಡುತ್ತಿದ್ದರೆ ಒಂದು ಹನಿ ನೀರು ಕೊಡುವುದಕ್ಕೆ ಹಿಂದೆ-ಮು0ದೆ ನೋಡುತ್ತೇವೆ ಅಲ್ಲಿ ಅವರು ಮಾರ್ಯಾದೆ ಬಗ್ಗೆಯೂ ಯೊಚಿಸುತ್ತಾರೆ.
ಸ್ವಲ್ಪ ಜನ ಯುವಕಿಯರು ಅಂತೂ ಬಿಕ್ಷಕನನ್ನು ಕಂಡರೆ ಸಾಕು ತಾವೇನು ರಾಜ ಮಹಾರಾಜನ ಕುಟುಂಬದಲ್ಲಿ ಹುಟ್ಟಿ ಬಂದ0ತೆ ನಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಪ ವಿದ್ಯಾರ್ಥಿಗಳ ಕನಸು ಕೇಳಬೇಕು “ದಾರಿ ಯಾವುದಾರೇನು ಚೆನ್ನಾಗಿ ದುಡ್ಡು ಮಾಡಬೇಕು” ಎನ್ನುತ್ತಾರೆ. ಅದೆಷ್ಟೊ ಯುವಕಿಯರು ಸಹ ಭೋಗ ಜೀವನದತ್ತ ಪಲಾಯನ ಮಾಡುತ್ತಾ ಇದ್ದಾರೆ. ಒಂದು ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಓದುವುದಕ್ಕೆ ಅವಕಾಶವೇ ಇದ್ದಿಲ್ಲ ಆದರೆ ಆ ಅವಕಾಶ ಇವತ್ತು ಸರಿಯಾಗಿ ಉಪಯೋಗಕ್ಕೆ ಬರುತ್ತಿಲ್ಲ. ಒಬ್ಬರನ್ನು ಕಂಡರೆ ಮತ್ತೋಬ್ಬರಿಗೆ ಸಿಟ್ಟು, ಸ್ವಾರ್ಥ ನಾನು ಮುಂದೆ ನೀನು ಮುಂದೆ ಎಂಬ ಸ್ಪರ್ದೆಗಳು ಎನು ಆಗುತ್ತಾ ಇದೆ ನಮ್ಮ ದೇಶದಲ್ಲಿ ಎಂಬ ಅರಿವು ಬೇಡ ನಾವು ಮಾತ್ರ ಬೇಳೆಯಬೇಕು ಅನ್ನೊದು ನಮಗೆ ಬೇಕು. ಯಾರು ಅದರೂ ರಾಮಾಯಣ ಮಹಾಭಾರತ ದೇಶ ಭಕ್ತರ ಉದಾಹರಣೆಯನ್ನು ತಗೆದುಕೊಂಡು ವಿದ್ಯಾವಂತರಿಗೆ ಮಾದರಿಯನ್ನು ನೀಡಿ ಇಲ್ಲವೇ ಅವರಿಗೆ ಬೋಧನೆಯನ್ನು ಮಾಡಿ ನೋಡಿ ಏನೂ ಪುರಾಣ ಹೇಳುತ್ತಿಯಾ ಹೋಗು ಮಾರಾಯ ನಮಗೆಲ್ಲಾ ಗೊತ್ತು ಅಂತಾರೆ ..
ಬರಿ ಚೇಷ್ಟೇ ಮಾತುಗಳು ಕೇಳಿ ಬರುತ್ತೇವೆ ಹೊರತು ದುಷ್ಟರನ್ನು ಬಗ್ಗುಬಡೆಯುವ ಯೋಚನೆ ವಿದ್ಯಾವಂತರಿಗೆ ಇರುವುದಿಲ.್ಲ ಒಂದು ವೇಳೆ ಇದ್ದರು ಅದು ಸ್ವಲ್ಪ ಮಟ್ಟಿಗೆ ಮಾತ್ರ ಮತ್ತು ನೊಂದವರಿಗೆ ನೆರಳಾಗುವುದು ನಮಗೆ ಆ ವಿಷಯದ ಬಗ್ಗೆ ಪರಿಚಯವೇ ಇರುವುದಿಲ್ಲ. ಇನ್ನು ಸ್ವಲ್ಪ ಜನರ ಯೊಚನೆ ನೋಡಬೇಕು ಒಂದೇ ಅದು ಎನು ಅಂದರೆ ಚೆನ್ನಾಗಿ ಓದಬೇಕು ರ‍್ಯಾಂಕ್ ಬರಬೇಕು ಅಮೇಲೆ ವಿದೇಶಕ್ಕೆ ಓಡಿ ಹೋಗಬೇಕು. ಚೆನ್ನಾಗಿ ದುಡ್ಡು ಮಾಡಬೇಕು ಇಷ್ಟೇ ನಮ್ಮೆಲ್ಲೆರ ದೊಡ್ಡ ಗುರಿ, ಇದೆಲ್ಲಾ ಬಿಟ್ಟು ಒಳ್ಳೆಯ ದಾರಿಯನ್ನು ಕಂಡುಕೊಳ್ಳುವಲ್ಲಿ ನಾವೆಲ್ಲರೂ ಮುಂದಾಗಬೇಕು.
ಶಶಿಕಲಾ.ನಾಗಪ್ಪ.ತಳವಾರ