This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local NewsNational NewsPolitics NewsState News

ಮತ್ತೊಮ್ಮೆ ನರೇಂದ್ರ ಮೋದಿ ದೇಶದ ಪ್ರಧಾನಿಯಾಗುವುದು ನಿಶ್ಚಿತ

ಮತ್ತೊಮ್ಮೆ ನರೇಂದ್ರ ಮೋದಿ ದೇಶದ ಪ್ರಧಾನಿಯಾಗುವುದು ನಿಶ್ಚಿತ

ಬಾಗಲಕೋಟೆ:

ದೇಶದ ಸಮಗ್ರ ಅಭಿವೃದ್ಧಿಯ ಕನಸಿನೊಂದಿಗೆ ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು.

ಅವರು ಸೋಮವಾರ ಬಿ.ವ್ಹಿ.ವ್ಹಿ.ಸಂಘದ ನೂತನ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ವಿಧಾನ ಸಭಾ ಮತಕ್ಷೇತ್ರ ಬಾಗಲಕೋಟೆ ವತಿಯಿಂದ ಹಮ್ಮಿಕೊಂಡ ಗ್ರಾಮ ಚಲೋ ಅಭಿಯಾನದ ಪೂರ್ವಭಾವಿ ಸಭೆಯನ್ನು ಉಧ್ಘಾಟಿಸಿ ಮಾತನಾಡಿದರು.

ಅಟಲ್ ಬಿಹಾರಿ ವಾಜಪೇಯಿ,ಲಾಲ್ ಕೃಷ್ಣ ಅಡ್ವಾಣಿ ಅವರ ಜೋತೆಗೆ ಮೋದಿಯವರನ್ನು ನೀಡಿದ ಭಾರತೀಯ ಜನತಾ ಪಕ್ಷ ಈ ದೇಶದ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ದವಾಗಿ ತನ್ನ ಎಲ್ಲ ಪಕ್ಷದ ಘೋಷಣೆಗಳನ್ನು ಇಂದು ನಿಜಮಾಡಿದೆ, ಕಾಶ್ಮೀರ ೩೭೦ ವಿಧಿ, ತ್ರಿವಳಿ ತಲಾಖ ನಿಷೇಧ ಅಲ್ಲದೆ, ಶ್ರೀರಾಮ ಮಂದಿರ, ಕಾಶಿ ವಿಶ್ವನಾಥ ಮತ್ತು ಉಜ್ಜಯನಿಯ ಸೋಮನಾಥ ದೇವಾಲಯ ಕಾರಿಡಾರ್,ಹಾಗೂ ಕೇದಾರನಾಥ ಸೋಮನಾಥ ದೇವಾಲಯ ಪುನರಾಭಿವೃದ್ಧಗೆ ಶೀಲಾನ್ಯಾಸ ಮಾಡಿ ಭಾರತದ ಅದ್ಯಾತ್ಮಿಕತೆಯನ್ನು ಪುನರುಜ್ಜೀವನಗೊಳಿದ್ದು ಭಾರತೀಯ ಹೆಮ್ಮೆ, ೧೦ ವರ್ಷಗಳ ನೀರಂತರ ಅವದಿಯಲ್ಲಿ ದೇಶದ ಸಮಗ್ರ ಅಭಿವೃದ್ಧಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮೊತ್ತಮ್ಮೆ ಪ್ರಧಾನಿಯನ್ನಾಗಿಸುವ ನಿಶ್ಚಲವಾದ ಗುರಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಮುಂದಿದೆ,

ಮೋದಿಜಿಯವರು ಭಾರತೀಯ ಧಾರ್ಮಿಕ ಶೃಧ್ಧಾಕೇಂದ್ರಗಳನ್ನು ಪುನರುಜ್ವಿವನಗೋಳಿಸುತ್ತಿರುವುದು ನಮ್ಮ ಭಾಗ್ಯವೆ ಸರಿ, ಕಿಸಾನ ಸಮ್ಮಾನ ಯೋಜನೆ, ಪಿ.ಎಮ್.ಫಸಲ್ ಬಿಮಾಯೋಜನೆ,ಡಿಜಿಟಲ್ ಕ್ರಾಂತಿ, ಉಜ್ವಲ್ ಗ್ಯಾಸ್ ಯೋಜನೆ,ಆಯುಷ್ಮಾನ ಭಾರತ,ಬೇಟಿ ಪಡಾವೋ ಬೇಟಿ ಬಚಾವೋ ಯೋಜನೆಗಳ್ಳು ಸಾಕಾರಗೊಳಿಸಿದೆ ದೇಶದ ಸಮಗ್ರ ಅಭಿವೃದ್ಧಿಗಾಗಿ ಮೋದಿಯವರನ್ನು ಮೊತ್ತಮ್ಮೆ ಪ್ರಧಾನಿಯನ್ನಾಗಿಸುವ ಸಂಕಲ್ಪ ಮಾಡೋಣ, ಈ ಗ್ರಾಮ ಚಲೋ ಅಭಿಯಾನವನ್ನು ಎಲ್ಲರೂ ಕೂಡಿ ಯಶಸ್ವಿಗೋಳಿಸೋಣ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣ ಸಾ ಭಾಂಡಗೆ ಮಾತನಾಡಿ ಮುಂದಿನ ಲೋಕಸಬೇಯ ಚುನಾವಣೆ ಕುರಿತು ಸಹವಿಸ್ತಾರವಾಗಿ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಜಿಲ್ಲಾ ಉಪಾಧ್ಯಕ್ಷ ಅಶೋಕ ಲಿಂಬಾವಳಿ ಪ್ರಸ್ತಾವಿಕ ಮಾತನಾಡಿ ಗ್ರಾಮ ಚಲೋ ಅಭಿಯಾನದ ಕುರಿತು ಮಾಹಿತಿ ನೀಡದರು. ಸಭೆಯಲ್ಲಿನಂದು ಗಾಯಕವಾಡ,ಬಸವರಾಜ ಯಂಕAಚಿ ಮಾತನಾಡಿದರು.

ಬಿಜೆಪಿ ಮುಖಂಡರಾದ ಡಾ.ಎಂ.ಎಸ್.ದಡ್ಡೆನ್ನವರ,ಗುAಡುರಾವ ಶಿಂದೆ, ಸುರೇಶ ಕೊಣ್ಣುರ, ಸತ್ಯನಾರಾಯಣ ಹೆಮಾದ್ರಿ, ರಾಜು ನಾಯ್ಕರ, ಸದಾನಂದ ನಾರಾ,ರಾಜು ಮುದೆನೂರ,ಶಿವಾನಂದ ಟವಳಿ,ಬಸವರಾಜ ಅವರಾದಿ, ಜ್ಯೋತಿ ಭಜಂತ್ರಿ,ಸುಜಾತಾ ತತ್ರಾಣಿ, ಸರಸ್ವತಿ ಕುರಬರ,ಶಿವಲೀಲಾ ಪಟ್ಟಣಶೆಟ್ಟಿ,ಶಶಕಲಾ ಮಜ್ಜಗಿ,ಶೋಭಾರಾವ್, ಮುತ್ತು ಸಿಮಿಕೇರಿ, ರಾಜು ಶಿಂತ್ರೆ,ಶರತಗೌಡ ಪಾಟೀಲ, ಮಲ್ಲು ಮುತ್ತಪ್ಪಣ್ಣವರ, ವಿಜಯ ಚೆಟ್ಟರಕಿ, ಕಿರಣಶಿಂಗ ಗಲಗಲಿ,ಸೇರಿದಂತೆ ರಾಜ್ಯ ಪದಾಧಿಕಾರಿಗಳು,ಜಿಲ್ಲಾಪದಾಧೀಕಾರಿಗಳು,ನಗರಸಭೆ ಸದಸ್ಯರು,ವಾರ್ಡ ಅಧ್ಯಕ್ಷರು,ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ,ಬೂತ ಅಧ್ಯಕ್ಷರು ಸೇರಿದಂತೆ ಅನೇಕ ಜನರು ಬಾಗಹಿಸಿದ್ದರು.

ಶ್ರೀರಾಮ ಮಂದಿರ, ಕಾಶಿ ವಿಶ್ವನಾಥ ಮತ್ತು ಉಜ್ಜಯನಿಯ ಸೋಮನಾಥ ದೇವಾಲಯ ಕಾರಿಡಾರ್,ಹಾಗೂ ಕೇದಾರನಾಥ ಸೋಮನಾಥ ದೇವಾಲಯ ಪುನರಾಭಿವೃದ್ಧಗೆ ಶೀಲಾನ್ಯಾಸ ಮಾಡಿ ಭಾರತದ ಅದ್ಯಾತ್ಮಿಕತೆಯನ್ನು ಪುನರುಜ್ಜೀವನಗೊಳಿದ್ದು ಭಾರತೀಯರ ಹೆಮ್ಮೆ. _ ಡಾ.ವೀರಣ್ಣ ಚರಂತಿಮಠ ಮಾಜಿ ಶಾಸಕರು.

 

 

 

 

 

 

 

Nimma Suddi
";