ಬೆಂಗಳೂರು: ನಾನು ಡಬ್ಬಲ್ ಡಿಗ್ರಿ ಮಾಡಿದ್ದೇನೆ ಆದರೂ ನನಗೆ ಉದ್ಯೋಗ ಇಲ್ಲ. ಹೀಗಂತ ಜನಸ್ಪಂದನದಲ್ಲಿ ತಮ್ಮ ಸಮಸ್ಯೆ ತೋಡಿಕೊಂಡಿದ್ದು ವಿಶೇಷ ಚೇತನ ನವ್ಯಶ್ರೀ ಎನ್ನುವ ಬೆಂಗಳೂರಿನ ನಿವಾಸಿ ವಿಶೇಷ ಚೇತನ ನವ್ಯಶ್ರೀ ಅವರು ತಾಯಿ ರಮಾಮಣಿ ಅವರ ಜತೆ ಬಂದು ಉದ್ಯೋಗಕ್ಕಾಗಿ ಸಿಎಂ ಗೆ ಮನವಿ ಮಾಡಿದರು.
ಈಕೆಯ ಮನವಿ ಸ್ವೀಕಾರ ಮಾಡಿದ ಸಿಎಂ ಸಿದ್ದರಾಮಯ್ಯ ಉದ್ಯೋಗ ಮೇಳದ ವೇಳೆ ಈ ಅರ್ಜಿ ಪರಿಗಣಿಸುವಂತೆ ಮುಖ್ಯಮಂತ್ರಿಗಳು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ವಿಶಿಷ್ಟ ಚೇತನ ಸತ್ಯನಾರಾಯಣ ಅವರು ತಮ್ಮ ಡಯಾಲಿಸಿಸ್ ಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಕೊಡಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಅರ್ಜಿ ಪರಿಶೀಲಿಸಿ ಚಿಕಿತ್ಸೆಗೆ ನೆರವು ನೀಡುವಂತೆ ತಿಳಿಸಿದರು.