ನೆಲಮಂಗಲ: ಪಂಜಾಬ್ನಲ್ಲಿ ಅತಿ ಹೆಚ್ಚು ಗಾಂಜಾ ಬಳಸಲಾಗುತ್ತಿದ್ದು, ಅದು ಉಡ್ತಾ ಪಂಜಾಬ್ ಆಗಿಬಿಟ್ಟಿದ್ದು, ಬೆಂಗಳೂರು ಕೂಡ ಆಗುವ ಆತಂಕ ಇದ್ದು,ಆದರೆ ಇತ್ತೀಚೆಗೆ ಕಮ್ಮಿಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ವಶಪಡಿಸಿಕೊಂಡ ಮಾದಕ ವಸ್ತುಗಳ ವಿನಾಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಾಕೊಲೇಟ್ ಮೂಲಕ ಡ್ರಗ್ ಸಪ್ಲೈ ಮಾಡುತ್ತಿದ್ದರು. ಇತ್ತೀಚೆಗೆ ಇದು ಕಮ್ಮಿ ಆಗಿದೆ ಬಾರ್ ಅಂಡ್ ರೆಸ್ಟೋರೆಂಟ್ ಕ್ಲಬ್, ಪಾರ್ಟಿಗಳಲ್ಲೂ ಸಹ ಡ್ರಗ್ ಸಪ್ಲೈ ಮಾಡುವುದನ್ನು ಕೇಳಿದ್ದೇವೆ ಎಂದರು.
ಇದು ನಿಲ್ಲಬೇಕು, ಯುವಕರು ಮಕ್ಕಳನ್ನು ಉಳಿಸಬೇಕು ಎಂಬುದು ನಮ್ಮ ಕಳಕಳಿ. ನಮ್ಮ ಪೊಲೀಸರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಡ್ರಗ್ ಪೆಡ್ಲರ್ಗಳು ಸಿಕ್ಕಿದಾಗ ಅವರ ಆಸ್ತಿಗಳನ್ನು ಮುಟ್ಟುಗೋಲು ಮಾಡಿಕೊಳ್ಳುವ ಕೆಲಸವಾಗುತ್ತದೆ ಎಂದು ಹೇಳಿದರು.
ಡ್ರಗ್ಸ್ ಪ್ರಕರಣ ಸಂಬಂಧ ರಾಜ್ಯದಲ್ಲಿ 2023ರಲ್ಲಿ 6764 ಕೇಸ್ ದಾಖಲಾಗಿದ್ದು, 9645 ಕೆಜಿ ಗಾಂಜಾ ಸೀಜ್ ಮಾಡಲಾಗಿದ್ದು, 233 ಕೆಜಿ ಸಿಂಥೆಟಿಕ್ ಡ್ರಗ್ ಸೀಜ್ ಮಾಡಲಾಗಿದೆ. ಪ್ರಕರಣದಲ್ಲಿ 7400 ಮಂದಿ ಭಾರತೀಯರು, 136 ಮಂದಿ ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಒಟ್ಟು 128 ಕೋಟಿ ಮೌಲ್ಯದ ಡ್ರಗ್ ಸೀಜ್ ಮಾಡಲಾಗಿದೆ ಎಂದು ವಿವರಿಸಿದರು.