ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಮುಗಿಯುತ್ತಿದ್ದಂತೆ ಬಿಜೆಪಿ ಸದಸ್ಯರು ಜೈ ಶ್ರೀರಾಂ ಘೋಷಣೆ ಕೂಗಿದರೆ, ಇದಕ್ಕೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಸದಸ್ಯರು ಜೈ ಭೀಮ್ ಘೋಷಣೆ ಕೂಗಿದರು.ಇವರಿಬ್ಬರ ನಡುವೆ ಜೆಡಿಎಸ್ ಸದಸ್ಯರು ಯಾವುದೇ ಘೋಷಣೆ ಕೂಗದೆ ತಟಸ್ಥರಾದರು.
ವಿಧಾನಸಭೆಗೆ ಕೇಸರಿ ಶಾಲು ತೊಟ್ಟುಕೊಂಡು ಆಗಮಿಸಿದ ಬಿಜೆಪಿ ಸದಸ್ಯರು ರಾಜ್ಯಪಾಲರ ಭಾಷಣ ಮುಗಿದ್ದಂತೆ ಜೈಶ್ರೀರಾಂ ಘೋಷಣೆ ಕೂಗಿದರು. ಈ ವೇಳೆ ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೆಲವು ಸದಸ್ಯರು ಜೈ ಭೀಮ್ ಘೋಷಣೆ ಕೂಗಿದರು.
ಬಿಜೆಪಿ ಸದಸ್ಯರ ಜೈಶ್ರೀರಾಂ ಘೋಷಣೆಗೆ ಪ್ರತಿಕ್ರಿಯೆಯಾಗಿ ಸಚಿವ ಬೈರತಿ ಸುರೇಶ್ ಅವರು ಜೈ ಸಂವಿಧಾನ ಎಂದು ಘೋಷಣೆ ಕೂಗಿದರೆ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಜೈ ಭೀಮ್ , ಜೈ ಬಸವಣ್ಣ ಎಂದು ಘೋಷಣೆ ಕೂಗಿ ಗಮನ ಸೆಳೆದರು.
ಎನ್ ಡಿ ಎ ಮೈತ್ರಿ ಜೆಡಿಎಸ್ ಸದಸ್ಯರು ಯಾವುದೇ ಘೋಷಣೆ ಕೂಗದೆ ತಟಸ್ಥವಾಗಿ ಉಳಿದರು. ಮಂಡ್ಯದಲ್ಲಿ ಕೆರಗೋಡು ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕೇಸರಿ ತೊಟ್ಟಿದ್ದು ಚರ್ಚೆಗೆ ಗ್ರಾಮವಾಗಿತ್ತು. ಈ ವೇಳೆ ಜೆಡಿಎಸ್ ವರಿಷ್ಠರೂ ಅಗಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಕೇಸರಿ ಶಾಲು ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.