ದೇಶ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇರುವುದರಿಂದ ರಾಜಕೀಯ ಮುಖಂಡರು ಹೊಂದಾಣಿಕೆ, ಟಿಕೆಟ್ ವಿಚಾರದಲ್ಲಿ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಜೊತೆಗೆ, ಒಂದು ಪಕ್ಷಗಳು ಇನ್ನೊಂದು ಪಕ್ಷವನ್ನು, ಅದರ ನಾಯಕರನ್ನು ತೆಗಳುವುದರಲ್ಲಿ ಇನ್ನಷ್ಟು ಬ್ಯೂಸಿಯಾಗಿದ್ದಾರೆ. ಈಗ ಕರ್ನಾಟಕದ ಬಜೆಟ್ ಅಧಿವೇಶನವೂ ಆರಂಭವಾಗಿದೆ.
ಮೊದಲ ದಿನ ಅಸೆಂಬ್ಲಿಯಲ್ಲಿ ಜೈರಾಮ್, ಜೈಭೀಮ್ ಘೋಷಣೆ ಕೇಳಿ ಬಂದಿದೆ.ಕಳೆದ ಬಾರಿಯ ಅಂದರೆ 2019ರ ಚುನಾವಣೆಯಲ್ಲಿನ ಹೊಂದಾಣಿಕೆ ಮತ್ತು ಮುಂಬರುವ ಚುನಾವಣೆಯಲ್ಲಿನ ಮೈತ್ರಿಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿಯೂ ಆಗಿರುವ ಡಿ.ಕೆ.ಶಿವಕುಮಾರ್ ತಮ್ಮದೇ ಆದ ವ್ಯಂಗ್ಯ ಧಾಟಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ಜರಿದಿದ್ದಾರೆ.
ಜೊತೆಗೆ, ಜೆಡಿಎಸ್ ನಾಯಕರ ಹಿಂದಿನ ಕೆಲವು ಘಟನೆಗಳನ್ನು ಹೇಳಿಕೆಯನ್ನು ದಳಪತಿಗಳಿಗೆ ಜ್ಞಾಪಿಸಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸೀಟ್ ಸಿಗಬಾರದು ಎನ್ನುವ ಬಿಜೆಪಿಯ ಟಾರ್ಗೆಟ್ ಒಂದು ಕಡೆಯಾದರೆ, ಬಿಜೆಪಿಯಲ್ಲಿನ ಒಂದು ಬಣ ಮತ್ತು ಜೆಡಿಎಸ್ ಪಕ್ಷದವರು ಡಿ.ಕೆ .ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ವಿಶೇಷ ಪ್ರಯತ್ನವನ್ನು ಮಾಡುತ್ತಿರುವುದು ಗೊತ್ತಿರುವ ವಿಚಾರ.
ಡಿ.ಕೆ.ಸುರೇಶ್ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬೇರೆ ಗೇಮ್ ಪ್ಲ್ಯಾನ್ ಮಾಡುವತ್ತು ಹೆಜ್ಜೆಯಿಟ್ಟಿದ್ದಾರೆ.