ತುಮಕೂರು : ನನ್ನ ಕೈಗೆ ಸರ್ಕಾರ ಸಿಕ್ಕಿದ್ದರೆ ಉರ್ದು ಮಾಧ್ಯಮ ಶಿಕ್ಷಣವನ್ನೇ ರದ್ದು ಮಾಡುತಿದ್ದೆ. ರಾಜ್ಯ ನಡೆಸುವವರು ಯಾರೂ ಕೂಡ ಉರ್ದು ಓದಿ ಅತಂತ್ರರಾದ ವಿದ್ಯಾರ್ಥಿಗಳ ಬಗ್ಗೆ ಯೋಚನೆ ಮಾಡಿಲ್ಲ ಎಂದು ಮಾಜಿ ಸಚಿವ ಜೆಸಿ ಮಾಧುಸ್ವಾಮಿ ತಿಳಿಸಿದರು.
ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್ಎಸ್ಎಲ್ಸಿವರೆಗೂ ಮಾತ್ರ ಉರ್ದು ಮೀಡಿಯಂ ಇರೋದು. ಪಿಯುಸಿ ಮತ್ತು ಡಿಗ್ರಿಯಲ್ಲಿ ಉರ್ದು ಮೀಡಿಯಂ ಇಲ್ಲ. ಉರ್ದು ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ನಂತರ ಏನು ಮಾಡ್ತಾರೆ ಎಂದರು.
ರಾಜ್ಯ ನಡೆಸುವವರು ಯಾರೂ ಕೂಡ ಉರ್ದು ಓದಿ ಅತಂತ್ರರಾದ ವಿದ್ಯಾರ್ಥಿಗಳ ಬಗ್ಗೆ ಯೋಚನೆ ಮಾಡಿಲ್ಲ. ಆ ಸಮುದಾಯ ಶೈಕ್ಷಣಿಕವಾಗಿ ವೈಫಲ್ಯ ಅನುಭವಿಸಲು ರಾಜಕಾರಣಿಗಳಾದ ನಾವೇ ಕಾರಣ. ಕೇರಳ ಮತ್ತು ತಮಿಳುನಾಡಿನಲ್ಲಿ ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಮುಂದಿದ್ದಾರೆ. ಕಾರಣ ಆಯಾ ರಾಜ್ಯದ ಭಾಷೆಯಲ್ಲಿ ಅವರು ಶಿಕ್ಷಣ ಕಲಿತು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.
.