ಆಸ್ಟ್ರೇಲಿಯಾದ ರಾಜಕಾರಣಿಗಳು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಸೂಯೆ ಹೊಂದಿದ್ದಾರೆ ಎಂದು ಆಸ್ಟ್ರೇಲಿಯಾದ ವಿರೋಧ ಪಕ್ಷ ನಾಯಕ ಪೀಟರ್ ಡಟ್ಟನ್ ಹೇಳಿದ್ದಿ, ಪೀಟರ್ ಡಟ್ಟನ್ ಅವರು ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಹೊಗಳಿದರು.
ಜಗತ್ತಿನ ಮೂಲೆ ಮೂಲೆಯಲ್ಲಿ 20 ಸಾವಿರ ಜನರನ್ನು ಒಟ್ಟುಗೂಡಿಸಿ ಮೋದಿ-ಮೋದಿ ಎಂಬ ಘೋಷಣೆ ಕೂಗುವಂತೆ ಮಾಡುವ ಸಾಮರ್ಥ್ಯ ನಮ್ಮ ಯಾವ ನಾಯಕರಿಗೂ ಇಲ್ಲ ಎಂದರು.
ಕಳೆದ ವರ್ಷ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದು, ಆ ಭೇಟಿಯ ವೇಳೆ ಸಿಡ್ನಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯಕ್ಕೆ ಸೇರಿದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ಆಸ್ಟ್ರೇಲಿಯನ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಸಂಸದ ಪೀಟರ್ ಡಟ್ಟನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದರು ಮತ್ತು ಭಾರತೀಯ ಸಮುದಾಯದ ಕೆಲಸ ಶ್ಲಾಘಿಸಿದರು.
2013ರಲ್ಲಿ ಸಿಡ್ನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೂಡ ಡಟ್ಟನ್ ಇದೇ ರೀತಿಯ ಹೇಳಿಕೆ ನೀಡಿದ್ದು, ಭಾರತ್ ಮಾತಾ ಕಿ ಜೈ’, ‘ವಂದೇ ಮಾತರಂ’ ಮತ್ತು ‘ಮೋದಿ, ಮೋದಿ’ ಎಂಬ ಘೋಷಣೆ ಕೂಗಿದ ಭಾರತೀಯ ಜನಸಮೂಹದಿಂದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ ದೊರೆಯಿತು.
ಭಾರತದೊಂದಿಗಿನ ಸಂಬಂಧದ ಕುರಿತು ಮಾತನಾಡುತ್ತಾ ಡಟ್ಟನ್, ತಮ್ಮ ಸರ್ಕಾರವು ಅಧಿಕಾರದಲ್ಲಿದ್ದಾಗ ಇದು ಸಾಕಷ್ಟು ಅಸಾಧಾರಣ ಮತ್ತು ಅಭಿವೃದ್ಧಿ ಶೀಲವಾಗಿತ್ತುಎಂದು ತಿಳಿದರು.