ಮಂಡ್ಯ: ಬಜೆಟ್‌ಗೆ ವಿಪಕ್ಷಗಳ ಟೀಕೆ ವಿಚಾರವಾಗಿ ಮಂಡ್ಯದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,‘ಬಡವರ ವಿರೋಧಿಗಳಿಗೆ ಬಜೆಟ್ ಅರ್ಥ ಆಗಲ್ಲ. ನಾವು ಬಡವರ ಪರ ಮಾಡಿರುವ ಬಜೆಟ್ ಇದಾಗಿದೆ ಎಂದು ಪ್ರತ್ಯುತ್ತರ ನೀಡಿದರು.
ನಾವು ಗ್ಯಾರಂಟಿ ಮಾತ್ರ ತಂದಿಲ್ಲ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡಿದ್ದೇವೆ. ನಮಗೆ ಕೇಂದ್ರದಿಂದ 1 ಲಕ್ಷದ 87 ಸಾವಿರ ಕೋಟಿ ನಷ್ಟ ಆಗಿದೆ. ಅದು ಬಂದರೆ ಹೆಚ್ಚು ಅಭಿವೃದ್ಧಿ ಮಾಡಬಹುದಿದ್ದು, ರಾಜ್ಯದಲ್ಲಿ ವಿರೋಧ ಪಕ್ಷ ಇರುವುದು ಒಂದೇ. ಬಿಜೆಪಿ ಜೊತೆ ಜೆಡಿಎಸ್ ಅವರು ಮರ್ಜ್ ಆಗಿದ್ದಾರೆ ಎಂದರು.
ಜೆಡಿಎಸ್ ಅವರು ಜೆಡಿಎಸ್ ರೀತಿಯಲ್ಲಿ ಕೆಲಸ ಮಾಡದೇ, ಬಿಜೆಪಿ ಅವರ ರೀತಿ ಕೆಲಸ ಮಾಡುತ್ತಿದ್ದು, ಪ್ರತ್ಯೇಕ ಪಕ್ಷವಾಗಿ ಜೆಡಿಎಸ್ ಇಲ್ಲ ಎಂದು ಹೇಳಿದರು.ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಂಚನಹಳ್ಳಿ ಗ್ರಾಮಕ್ಕೆ ಆಗಮಿಸಿದ ಸಿಎಂಗೆ ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ವಾಗತ ಕೋರಿದರು.
ಬಳಿಕ ಮಂಚನಹಳ್ಳಿಯಲ್ಲಿ ಕನಕದಾಸರ ಪುತ್ಥಳಿ ಉದ್ಘಾಟಿಸಿದ ಅವರು, ‘ಕನಕದಾಸರ ಪ್ರತಿಮೆ ಲೋಕಾರ್ಪಣೆ ಮಾಡಿದ್ದೇವೆ, ನಿಮಗೆ ಅಭಿನಂದನೆ. ಸಂತ ಕನಕದಾಸರು ಈ ದೇಶದಲ್ಲಿ ಜಾತಿ ತಾರತಮ್ಯ ಹೋಗಿ ಎಲ್ಲರೂ ಮನುಷ್ಯ ರಾಗಿ ಬಾಳುವ ಕನಸು ಕಂಡಿದ್ದರು. ಅವರನ್ನ ಕವಿ ಅಂತಲೂ ಕರೆಯುತ್ತೇವೆ ಎಂದರು.