ಗೋವಾ: ಭಾರತ ದೇಶದಲ್ಲಿ ಒಂದಿಷ್ಟು ಸೀಮಿತ ವರ್ಗದ ಜನರು ಮಾತ್ರ ಜಾತ್ಯತೀತರಿದ್ದು, ಮಿಕ್ಕಂತೆ ಬಹುತೇಕ ಎಲ್ಲರೂ ಕೋಮುವಾದಿಗಳಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿಕೆ ನೀಡಿದರು.
ಕಳೆದ 10 ವರ್ಷದಲ್ಲಿ ಈ ರೀತಿಯ ಸನ್ನಿವೇಶ ನಿರ್ಮಾಣವಾಗಿದೆ.ಗೋವಾದಲ್ಲಿ ನಡೆದ 12ನೇ ಗೋವಾ ಕಲೆ ಹಾಗೂ ಸಾಹಿತ್ಯ ಹಬ್ಬದಲ್ಲಿ ‘ಜಾತ್ಯತೀತ ಮೂಲಭೂತವಾದಿ ನೆನಪುಗಳು’ ಎಂಬ ವಿಚಾರ ಸಂಕಿರಣದಲ್ಲಿ ಭಾಗಿಯಾಗಿದ್ದ ಮಣಿಶಂಕರ್ ಅಯ್ಯರ್, ತಮಗೆ 75 ವರ್ಷ ವಯಸ್ಸು ಆಗುವವರೆಗೂ ಭಾರತದಲ್ಲಿ ಎಲ್ಲರೂ ಜಾತ್ಯತೀತರೇ ಆಗಿದ್ದರು ಎಂದು ತಿಳಿಸಿದರು.
ಕೋಮುವಾದಿಗಳು ಇದ್ದರು. ಅವರ ಸಂಖ್ಯೆ ಕಡಿಮೆ ಇತ್ತು. ದೇಶದಲ್ಲಿ ಕೋಮುವಾದಿಗಳ ಸಂಖ್ಯೆ ಹೆಚ್ಚಾಗಿದೆ. ಕೇವಲ 10 ವರ್ಷಗಳಲ್ಲಿ ಈ ಪರಿವರ್ತನೆ ದೇಶದಲ್ಲಿ ಆಗಿದೆ, ನನ್ನ ಜೀವಿತಾವಧಿಯಲ್ಲಿ ನಾನು ಈ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದೇನೆ ಎಂದು ಮಣಿಶಂಕರ್ ಅಯ್ಯರ್ ಸೂಚಿಸಿಸಿದರು.