ಮಂಡ್ಯ: ರಾಜ್ಯದ ತೆರಿಗೆಯ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಿದರೆ ಅವಮಾನ ಆಯಿತು ಎಂದು ಬಿಜೆಪಿಯವರು ತಿಳಿಸಿದರು.
ಈ ದ್ರೋಹದ ವಿರುದ್ಧ ಅವರಿಗೆ ಪಾಠ ಕಲಿಸಬೇಕು ಎಂದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಇಂದು ಮಳವಳ್ಳಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮತ್ತು ಸರ್ಕಾರದ ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿದ ನಂತರ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು .
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನವರು ಏನೇ ಆಮಿಷ ತೋರಿಸಿದರೂ ಕೂಡ ಅದಕ್ಕೆ ಮಣಿಯದೇ ನಮ್ಮ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ. ಮಳವಳ್ಳಿಯಲ್ಲಿ ನೀಡಿದ್ದ ಭಾರವಸೆಯಂತೆ 470 ಕೋಟಿ ರೂ.ಗಳ ಅಂದಾಜು ಮೊತ್ತದ ಅಭಿವೃದ್ಧಿ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಕಳೆದ ಚುನಾವಣೆಯಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿ ಎಂಟು ತಿಂಗಳಲ್ಲಿ ಜಾರಿ ಮಾಡಿ ಭರವಸೆ ಈಡೇರಿಸಿದ್ದು, ಬಿಜೆಪಿ, ಜೆಡಿಎಸ್ ನಂತೆ ನಾವು ಮಾತಿಗೆ ತಪ್ಪುವವರಲ್ಲ. ಬಿಜೆಪಿ, ಜೆಡಿಎಸ್ ಈಗ ಒಂದಾಗಿದ್ದು, ಆದರೆ ಹಿಂದೊಮ್ಮೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನ ನಾಗಿ ಹುಟ್ಟು ತ್ತೇನೆ ಎಂದಿದ್ದರು. ಈಗ ಕೋಮುವಾದಿ ಬಿಜೆಪಿ ಯವರ ಜೊತೆಗೆ ಸೇರಿದ್ದಾರೆ. ಈಗ ನಾನೇ ಮಗನನ್ನು ಬಿಜೆಪಿ ಗೆ ಕಳುಹಿಸಿದೆ ಎನ್ನುತ್ತಾರೆ. ನಿಮ್ಮ ಜನತಾದಳ ಜಾತ್ಯಾತೀತ ದಲ್ಲಿ ಜಾತ್ಯಾತೀತ ಎನ್ನುವ ಪದ ತೆಗೆಯಿರಿ.ಹಾಗೆ ಇಟ್ಟುಕೊಳ್ಳಲು ನಿಮಗೆ ಯಾವುದೇ ನೈತಿಕತೆ ಇಲ್ಲ ಎಂದರು.