This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಶಿಕ್ಷಕ ವೃತ್ತಿಗೆ ಬೈ ಕೃಷಿಗೆ ಜೈ  ಹೇಳಿದ, ಮುಳಸಾವಳಗಿಯ  ಸಂಗನಗೌಡ

ಶಿಕ್ಷಕ ವೃತ್ತಿಗೆ ಬೈ ಕೃಷಿಗೆ ಜೈ  ಹೇಳಿದ, ಮುಳಸಾವಳಗಿಯ  ಸಂಗನಗೌಡ

ರೈತರ ಮಕ್ಕಳೆಲ್ಲ ಕೃಷಿ ಕೈಗೊಳ್ಳದೆ ಈಗ ಸರಕಾರಿ, ಖಾಸಗಿ ನೌಕರರ ಮುಖ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬರು ಶಿಕ್ಷಕ ವೃತ್ತಿಯನ್ನು ಬಿಟ್ಟು ಕೃಷಿ ಕೈಗೊಂಡು ಬದುಕು ಕಟ್ಟಿಕೊಂಡಿದ್ದಾರೆ. ಕಾಯಕವೇ ಕೈಲಾಸ ಎಂಬ ಅಣ್ಣ ಬಸವಣ್ಣನ ವಾಣಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಕೃಷಿಯಲ್ಲಿಯೇ ಖುಷಿ ಪಡುತ್ತಿದ್ದಾರೆ.

ಹೌದು, ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದ ಸಂಗನಗೌಡ ಶಿ. ಬಿರಾದಾರ ಈ ‘ಆಗದ ಅಪರೂಪದ ರೈತ. ಕೆಲವು ವರ್ಷಗಳ ಹಿಂದೆ ನೀರಿಲ್ಲದ ಪರಿಸ್ಥಿತಿಯಲ್ಲಿ ದಿನವೊಂದಕ್ಕೆ ಸಾವಿರಾರು ರೂ. ಖರ್ಚು ಮಾಡಿ ಟ್ಯಾಂಕರ್ ಮೂಲಕ ನೀರು ಹನಿಸಿ ಸ್ವಂತ ಮಕ್ಕಳಂತೆ ಲಿಂಬೆ ಹಾಗೂ ದ್ರಾಕ್ಷಿ ಬೆಳೆ ಬೆಳೆದು ಕೃಷಿಯಲ್ಲಿ ಯಶಸ್ಸು ಸಾಧಿಸಿದ್ದಾರೆ.

ಬಿಎಸ್‌ಸಿ, ಬಿ.ಇಡಿ ಪದವಿ ಪಡೆದು 8 ವರ್ಷ ಶಿಕ್ಷಕ ವೃತ್ತಿ ಕೈಗೊಂಡ ಕೃಷಿ ಕಡೆ ಹಂಬಲ ಹೆಚ್ಚಾಗಿ ಶಿಕ್ಷಕ ವೃತ್ತಿಗೆ ಗುಡ್ ಬೈ ಹೇಳಿ ಈಗ ಸಮಗ್ರ ಕೃಷಿಯಲ್ಲಿ ಖುಷಿ ಕಾಣುತ್ತಿರುವ ಪ್ರಗತಿಪರ ರೈತರು. ಕ್ರಿಯಾಶೀಲತೆ ಉಪಯೋಗಿಸಿಕೊಂಡು ಇದ್ದ ಜಮೀನಿನಲ್ಲಿ ವಿವಿ’ ಬೆಳೆಗಳನ್ನು ಬೆಳೆದು ಲಾ’ಕಿದೆ. ವರ್ಷಕ್ಕೆ ಹತ್ತಾರು ಲಕ್ಷ ರೂಪಾಯಿ ಆದಾಯದೊಂದಿಗೆ ರೈತರಿಗೆ ಮಾದರಿಯಾಗಿದ್ದಾರೆ.

ಹನಿ ನೀರಿಗೂ ತತ್ವಾರವಿದ್ದ ಸಮಯದಲ್ಲಿ ಸಹೋದರನ ಪ್ರೇರಣೆಯಿಂದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಒಣ ಬೇಸಾಯವನ್ನೆಲ್ಲ ಸಾವಕಾಶವಾಗಿ ನೀರಾವರಿಯತ್ತ ವಾಲುವಂತೆ ಮಾಡಿದರು. 300 ಲಿಂಬೆ ಗಿಡಗಳಿಗೆ ಮಕ್ಕಳಿಗಿಂತ ಮಕ್ಕಳಾಗಿ ಸಾಕಿ ಸಲುಹಿ ದೊಡ್ಡ ಗಿಡಗಳನ್ನಾಗಿ ಮಾಡಿದ್ದಾರೆ. ಕುಡಿಯುವ ನೀರಿಗೂ ತೊಂದರೆಯಿದ್ದಾಗ ದಿನನಿತ್ಯ ಸಾವಿರಾರು ರೂ. ಖರ್ಚು ಮಾಡಿ ಲಿಂಬೆ ಬೆಳೆಗಳಿಗೆ ಬೊಗಸೆ-ಬೊಗಸೆ ನೀರು ಹಾಕಿ ಬದುಕಿಸಿದ ಸಾ’ನೆ ಇವರದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಆಗಿರುವುದರಿಂದ ಅಲ್ಲಲ್ಲಿ ಕಾಲುವೆಗಳು ಹರಿದು ಸಾಕಷ್ಟು ನೀರಿನ ಅನುಕೂಲ. ಹೀಗಾಗಿ ಸೀತಾಳ, ಮಾವು, ಲಿಂಬೆ, ಬಾಳೆ, ಪೇರಲ ಹಣ್ಣುಗಳನ್ನು ಬೆಳೆದು ಆರ್ಥಿಕ ಸಬಲತೆಗೆ ಸಹಕಾರಿಯಾಗಿದೆ. ದೇವರಹಿಪ್ಪರಗಿ ಕ್ಷೇತ್ರದಲ್ಲಿ ಕೆರೆಗಳೆಲ್ಲ ತುಂಬಿದೆ ಅಂತರ್ಜಲ ಮಟ್ಟ ಹೆಚ್ಚಾಗಿ ಕೃಷಿ ಕಾಯಕಕ್ಕೂ ಅನುಕೂಲವಾಗಿದೆ. ನೀರಾವರಿಗಾಗಿ ಬಾವಿ ಇದ್ದು, ಕೊಳವೆಬಾವಿಗಳನ್ನು ಕೊರೆಸಿದ್ದಾರೆ. ಕೃಷಿ ಹೊಂಡ ನಿರ್ಮಿಸಿ ನೀರನ್ನು ಸಂಗ್ರಹಿಸಿದ್ದಾರೆ.

ಕೃಷಿಗೆ ಸಹಕಾರಿಯಾಗಿ ವಿವಿ’ ತಳಿಯ 5 ಆಕಳು, 5 ಮುರ್ರಾ ಎಮ್ಮೆ, 10 ಕುರಿ, ಜವಾರಿ ಹಾಗೂ ಗಿರಿ ತಳಿಯ 200 ಕೋಳಿ ಸಾಕಣೆ ಮಾಡಿ ಸೈರಾಜ ಎನಿಸಿಕೊಂಡಿದ್ದಾನೆ. ಹೈನುಗಾರಿಕೆ ತುಂಬ ಕಷ್ಟಕರವಾಗಿದ್ದು, ಅವುಗಳಿಗೆ ಪೌಷ್ಟಿಕ ಆಹಾರ ನೀಡಿ ಹಾಲು ಪಡೆಯುವುದರ ಜೊತೆಗೆ ಗೊಬ್ಬರವನ್ನು ಬಳಸಲಾಗುತ್ತಿದೆ. ಇದರಿಂದ ಸಾಕಷ್ಟು ಆರ್ಥಿಕ ಲಾ’ವೂ ಪಡೆಯುತ್ತಿದೆ, ಕೃಷಿಗೆ ಸಹಕಾರಿಯಾಗುತ್ತಿದೆ.

ಸದಾ ರೈತಪರ ಚಿಂತನೆಯಲ್ಲಿರುವ ಸಂಗನಗೌಡರಿಗೆ ಮುಳಸಾವಳಗಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಸಂಘದ ಅಧ್ಯಕ್ಷ ಸ್ಥಾನ ಒಲಿದು ಬಂದಿದ್ದು, ಹುದ್ದೆಗೆ ತಕ್ಕಂತೆ ನ್ಯಾಯ ಒದಗಿಸುವ ಕಾರ್ಯ ನಡೆಯುತ್ತಿದೆ. ಸರಕಾರದಿಂದ ರೈತರಿಗೆ ಸಿಗುವ ಸೌಲ’್ಯ ಒದಗಿಸಲಾಗುತ್ತಿದೆ. ಸಾಲ ನೀಡುವುದಕ್ಕಾಗಲಿ, ಯಾವುದಾದರೂ ಯೋಜನೆಗಳು, ಸೌಲಬ್ಯಗಳನ್ನು ನೀಡಲು ಯಾರಿಂದಲೂ ಒಂದು ರೂ. ಪಡೆಯದೆ ರೈತರ ಪಾಲಿನ ಕಣ್ಮಣಿಯಾಗಿದ್ದಾರೆ. ಉತ್ತಮ ಆಡಳಿತಗಾರರಾಗಿ ಜನಮನ್ನಣೆ ಗಳಿಸಿದ್ದಾರೆ.

ತಮ್ಮ 15 ಜಮೀನಿನಲ್ಲಿ 3 ಬೆಳ್ಳಿ ಲಿಂಬೆ, ಸೀತಾಲ, ಪೇರಲ, ಬಾಳೆ, ತೆಂಗು ಬೆಳೆದಿದ್ದಾರೆ. ಅದರಂತೆ ತೊಗರಿ, ಕಬ್ಬು ಜೋಳದ ಬೆಳೆ ಬೆಳೆದು ತೋಟಗಾರಿಕೆ ಮೂಲಕ ಕೃಷಿಯಲ್ಲಿ ಖುಷಿ ಕಾಣುತ್ತಿದೆ. ದಿನ ಬೆಳಗಾದರೆ ಸಾಕು ಜಮೀನಿನಲ್ಲಿ ಕಾಲ ಕಳೆಯುತ್ತ ಕುಟುಂಬ ಸದಸ್ಯರೆಲ್ಲ ಸೇರಿ ಕೃಷಿ ಕಾಯಕದಲ್ಲಿ ಸುಂದರ ಬದುಕು ಕಟ್ಟಿಕೊಂಡಿದ್ದಾರೆ.

";