This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ಹಾವು ಕಡಿತ ಘೋಷಿತ ಕಾಯಿಲೆಗಳ ಪಟ್ಟಿಗೆ ಸೇರ್ಪಡೆ : ಆರೋಗ್ಯ ಇಲಾಖೆ

ಹಾವು ಕಡಿತ ಘೋಷಿತ ಕಾಯಿಲೆಗಳ ಪಟ್ಟಿಗೆ ಸೇರ್ಪಡೆ : ಆರೋಗ್ಯ ಇಲಾಖೆ

ಬೆಂಗಳೂರು: ಕರ್ನಾಟಕ ಆರೋಗ್ಯ ಇಲಾಖೆಯು ಹಾವು ಕಡಿತವನ್ನೂ ಘೋಷಿತ ಕಾಯಿಲೆಗಳ ಪಟ್ಟಿಗೆ ಸೇರ್ಪಡೆ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕದಲ್ಲಿ 2023-24ರ ಸಾಲಿನಲ್ಲಿ ಹಾವು ಕಡಿತ ತಡೆಗಟ್ಟುವ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ರಾಜ್ಯದಲ್ಲಿ ಹಾವು ಕಡಿತದ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಹಾವು ಕಡಿತ ಚಿಕಿತ್ಸೆಗೆ ಒಳರೋಗಿ, ಹೊರರೋಗಿಯಾಗಿ ದಾಖಲಾದವರು, ಮರಣ ಉಂಟಾದ ಪ್ರಕರಣಗಳು ಸಹಿತ ಎಲ್ಲ ಮಾಹಿತಿಗಳನ್ನು ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ವೈದ್ಯಕೋಯ ವಿಜ್ಞಾನ ಸಂಸ್ಥೆಗಳು ಕಡ್ಡಾಯವಾಗಿ ಭಾರತ ಸರ್ಕಾರದ ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯಲ್ಲಿ ದಾಖಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.

2023 ರಲ್ಲಿ ಕರ್ನಾಟಕದಲ್ಲಿ 6,595 ಜನರಿಗೆ ಹಾವುಗಳು ಕಡದಿವೆ. ಇದರಲ್ಲಿ 19 ಜನರು ಮೃತಪಟ್ಟಿದ್ದಾರೆ. ಈ ವರ್ಷ, ಅಧಿಕೃತ ಅಂಕಿಅಂಶಗಳ ಪ್ರಕಾರ, ಇದುವರೆಗೆ 543 ಜನರಿಗೆ ಹಾವುಗಳು ಕಡಿದಿವೆ.ಹಾವು ಕಡಿತವನ್ನು ಯಶಸ್ವಿಯಾಗಿ ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಯಾವುದೇ ಮಧ್ಯಸ್ಥಿಕೆಗಾಗಿ, ಅದರ ಹರಡುವಿಕೆಯ ದತ್ತಾಂಶ ಸಂಗ್ರಹವು ಮೊದಲ ಹೆಜ್ಜೆಯಾಗಿದೆ. ಈ ರೋಗದ ವರದಿ ಕಡ್ಡಾಯಗೊಳಿಸುವ ಮೂಲಕ ರಾಜ್ಯ ಸರ್ಕಾರ ಉತ್ತಮ ಹೆಜ್ಜೆ ಅನುಸರಿಸಿದೆ.

ಸೆಂಟರ್ ಫಾರ್ ಒನ್ ಹೆಲ್ತ್ ಅಟ್ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌ಸಿಡಿಸಿ) ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಚಟುವಟಿಕೆಗಳ ಅನುಷ್ಠಾನವನ್ನು ಸಮನ್ವಯಗೊಳಿಸುತ್ತಿದೆ. ಈ ಕ್ಷೇತ್ರದ ಸಂಬಂಧಿತ ತಜ್ಞರೊಂದಿಗೆ ಸಮಾಲೋಚಿಸಿ ಸರ್ಕಾರ ‘ಒನ್ ಹೆಲ್ತ್ ಅಪ್ರೋಚ್’ನೊಂದಿಗೆ ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ’ ಅನ್ನು ರಚಿಸಿದೆ. ಎನ್​ಎಪಿಎಸ್​ಇ ಯ ಉದ್ದೇಶವು ಭಾರತದಲ್ಲಿ 2030 ರ ವೇಳೆಗೆ ಹಾವು ಕಡಿತಕ್ಕೆ ಸಂಬಂಧಿಸಿದ ಮರಣ ಮತ್ತು ಅಂಗವೈಕಲ್ಯವನ್ನು ಅರ್ಧದಷ್ಟು ಕಡಿಮೆ ಮಾಡುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Nimma Suddi
";