ಬೆಂಗಳೂರು : ತಾಳಿ ಕಟ್ಟಿ ಮನೆ ತುಂಬಿಸಿಕೊಂಡು ಬಿಡಿ ಅಥವಾ ಬಿಟ್ಟುಬಿಡಿ ಅತ್ತಲೂ ಇಲ್ಲ, ಇತ್ತ ಕಡೆಯೂ ಇಲ್ಲ ಎಂಬಂತೆ ಅತಂತ್ರ ಸ್ಥಿತಿಯಲ್ಲಿ ಮುಂದುವರಿಸಬೇಡಿ. ಪಕ್ಷದ ಸಹೋದ್ಯೋಗಿ ಶಿವರಾಮ್ ಹೆಬ್ಬಾರ್ ಅವರ ಬಗ್ಗೆ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಯಲ್ಲಿ ಸೋಮವಾರ ರಾಜ್ಯ ಸರಕಾರಕ್ಕೆ ಮಾಡಿದ ಸಲಹೆ ನೀಡಿದರು.
ಕರ್ನಾಟಕ ಸೌಹಾರ್ದ ಸಹಕಾರಿ ವಿಧೆಯಕ -2024’ದ ಮೇಲಿನ ಚರ್ಚೆಯಲ್ಲಿ ಶಿವರಾಮ್ ಹೆಬ್ಬಾರ್ ಹಾಗೂ ಯತ್ನಾಳ್ ಮಧ್ಯೆ ಜಟಾಪಟಿ ನಡೆಯುತ್ತಲೇ ಇತ್ತು. ಇದನ್ನು ಕುತೂಹಲದಿಂದ ಗಮನಿಸುತ್ತಿದ್ದ ಕಾಂಗ್ರೆಸ್ ಸದಸ್ಯರು ‘ಇದು ಬಿಜೆಪಿಯ ‘ಎ ಮತ್ತು ಬಿ’ ಟೀಂಗಳು ಎಂದು ಕಿಚಾಯಿಸಿದರು.
ಇದರಿಂದ ಮಾತು ಮುಂದುವರಿಸಿದ ಯತ್ನಾಳ್, ”ಶಿವರಾಮ್ ಹೆಬ್ಬಾರ್ ಒಮ್ಮೆ ಆ ಕಡೆ, ಮತ್ತೊಮ್ಮೆ ಈ ಕಡೆ ಎನ್ನುವಂತಾಗಿದ್ದಾರೆ. ಪಕ್ಕಾ ತಾಳಿ ಕಟ್ಟಿ ಬಿಡಿ, ಇಲ್ಲಬೇಡ ಅಂತಾದರೂ ಬಿಟ್ಟುಬಿಡಿ..,” ಎಂದರು. ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ.ಸೋಮಶೇಖರ್ ಅವರು ಕಾಂಗ್ರೆಸ್‌ಗೆ ಮರಳಲಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಈ ಚರ್ಚೆ ಸದನದಲ್ಲಿಗಮನ ಸೆಳೆಯಿತು.