ಬೆಂಗಳೂರು: ಜೆಡಿಎಸ್ ನವರಿಗೆ ಆತ್ಮವೇ ಇಲ್ಲ ಸಾಕ್ಷಿ ಎಲ್ಲಿದೆ? ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಯ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ವಿಧಾನಸೌಧದಲ್ಲಿ ಮಂಗಳವಾರ ರಾಜ್ಯಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತದಾನ ಮಾಡಿದ ಬಳಿಕ ಮಾತನಾಡಿ, ಚುನಾವಣೆಯಲ್ಲಿ ಸೊಲುತ್ತೇವೆ ಅಂತ ಯಾರು ನಿಂತುಕೊಳ್ಳೋದಿಲ್ಲ. ನಮಗೆ ಎಷ್ಟು ಮತಗಳು ಬೇಕೋ ಅಷ್ಟು ಬರುತ್ತೆ. ನಮ್ಮ ಮೂವರು ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
.ಜೆಡಿಎಸ್ ಗೆ ಚುನಾವಣೆಯಲ್ಲಿ ಅಭ್ಯರ್ಥಿ ಹಾಕುವ ಅಗತ್ಯವಿರಲಿಲ್ಲ. ಆದರೂ ಹಾಕಿದ್ದಾರೆ. ನಮ್ಮ ಅಭ್ಯರ್ಥಿಗೆ ನಿಷ್ಠೆಯಿಂದ ಮತಹಾಕಬೇಕು ಎಂದು ನಾವು ನಮ್ಮ ಸೂಚಿಸಿದ್ದೇವೆ. ನಮ್ಮ ಮೂರು ಅಭ್ಯರ್ಥಿಗಳು ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಗೆ ಗೆಲ್ಲಲು 45 ಮತಗಳ ಅಗತ್ಯವಿದೆ ಅಷ್ಟು ಮತಗಳು ಅವರಿಗಿದೆಯೇ ? ಅವರಿಗೆ ಆತ್ಮಸಾಕ್ಷಿ ಇದೆಯೇ ಎಂದು ಪ್ರಶ್ನಿಸಿ ಅವರ ಮತಗಳೇ ನಮಗೆ ಬರುತ್ತವೆ .ಬೇರೆ ಪಕ್ಷಗಳಿಂದ ಮತಗಳು ಬರಬಹುದಾ ಎಂಬ ಪ್ರಶ್ನೆಗೆ, ಬರಬಹುದು ಎಂದು ಉತ್ತರಿಸಿದ ಸಿಎಂ, ನಾವು ಆಸೆ ಆಮಿಷ ಒಡ್ಡುವ ಪ್ರಮಯವೇ ಇಲ್ಲ. 134 + ನಾಲ್ಕು ಪಕ್ಷೇತರರ ಬೆಂಬಲ ಇದೆ ಎಂದರು.