ಬಾಗಲಕೋಟೆ
ನಮೋ ಬ್ರಿಗೇಡ್‌ನಿಂದ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಹಾಗೂ ಬಾದಾಮಿ ನಗರದಲ್ಲಿ ಮಾ.೨ ರಂದು ಹಮ್ಮಿಕೊಂಡ ನಮೋ ಭಾರತ ಕಾರ್ಯಕ್ರಮದಲ್ಲಿ ರಾಷ್ಟಿಯ ಚಿಂತಕ, ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆಗಮಿಸಲಿದ್ದಾರೆ ಎಂದು ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕ ಶ್ರೀಧರ ನಿರಂಜನ ಹೇಳಿದರು.
ಜಿಲ್ಲೆಯ ಅಮೀನಗಡದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟಿçÃಯ ಚಿಂತನೆಯೊAದಿಗೆ ಕಳೆದ ೧೫ ವರ್ಷದಿಂದ ನರೇಂದ್ರ ಮೋದಿ ಅವರ ಕಾರ್ಯ ಹಾಗೂ ರಾಷ್ಟಿçÃಯ ಚಿಂತನೆಯುಳ್ಳ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು ಇದೀಗ ಇದೀಗ ನಮೋ ಭಾರತದ ಕಾಲ ಶುರುವಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಮೋದಿ ಅವರ ಆಡಳಿತದಲ್ಲಿನ ಅಭಿವೃದ್ಧಿ ಕಾರ್ಯ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ನಮೋ ಭಾರತ ಕಾರ್ಯಕ್ರಮ ಜಿಲ್ಲೆಯ ಅಮೀನಗಡ ಹಾಗೂ ಬಾದಾಮಿಯಲ್ಲಿ ಮಾ.೨ರಂದು ಜರುಗಲಿದೆ. ಅಮೀನಗಡ ಪ್ರಭುಶಂಕರೇಶ್ವರ ಗಚ್ಚಿನಮಠದ ಅನುಭವ ಮಂಟಪದ ಆವರಣದಲ್ಲಿ ಮಧ್ಯಾಹ್ನ ೨.೩೦ ಗಂಟೆಗೆ ಬಹಿರಂಗ ಸಮಾವೇಶ ಆಯೋಜಿಸಲಾಗಿದೆ. ಸಂಜೆ ೫.೩೦ ಗಂಟೆಗೆ ಬಾದಾಮಿಯ ಎಪಿಎಂಸಿ ಆವರಣದಲ್ಲಿ ಬಹಿರಂಗ ಸಮಾವೇಶ ಆಯೋಜಿಸಲಾಗಿದೆ. ಬಾದಾಮಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಮತಗಿ-ಕೋಟೆಕಲ್‌ನ ಹೊಳೆಹುಚ್ಚೇಶ್ವರ ಮಠದ ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಅನವಾಲದ ಪೂರ್ಣಾನಂದ ಆಶ್ರಮದ ಕೈಲಾಸಪತಿ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು ಎರಡೂ ಸ್ಥಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಗುರುನಾಥ ಚಳ್ಳಮರದ ಮಾತನಾಡಿ, ಕಳೆದ ೧೦ ವರ್ಷದಲ್ಲಿ ಪ್ರಧಾನಿ ಮೋದಿ ಅವರು ವಿಕಾಸದ ಹಬ್ಬವನ್ನೇ ಮಾಡಿದ್ದಾರೆ. ಅಭಿವೃದ್ಧಿಯ ಕಲ್ಪನೆಯನ್ನು ವಿಸ್ತಾರಗೊಳಿಸಿದ್ದಾರೆ. ಇದೀಗ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಅವರ ಸಾಧನೆಗಳನ್ನು ಜನತೆಗೆ ತಿಳಿಸಿ ಮನವರಿಕೆ ಮಾಡಬೇಕಾಗಿದೆ. ಬನ್ನಿ ಭಾರತಕ್ಕೆ ನಮೋ ಎನ್ನೋಣ, ನಮೋಗೆ ಉಘೇ ಎನ್ನೋಣ. ಈ ನಿಟ್ಟಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೋದಿ ಅಭಿಮಾನಿಗಳು ಭಾಗವಹಿಸಬೇಕು ಎಂದು ವಿನಂತಿಸಿದರು.
ರಾಹುಲ್ ಸಜ್ಜನ, ಪ್ರಶಾಂತ ಕುಂಬಾರ ಇತರರಿದ್ದರು.