This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsPolitics NewsState News

ಜಾತಿ ಲೆಕ್ಕಾಚಾರದಲ್ಲಿ ರಾಜ್ಯ ಸರಕಾರ

ಜಾತಿ ಲೆಕ್ಕಾಚಾರದಲ್ಲಿ ರಾಜ್ಯ ಸರಕಾರ

ಜಾತಿ ಲೆಕ್ಕಾಚಾರದಲ್ಲಿ ರಾಜ್ಯ ಸರಕಾರ
ದೇಶದ ಅಭಿವೃದ್ಧಿಯತ್ತ ಮೋದಿ ಚಿಂತನೆ

ಬಾಗಲಕೋಟೆ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ರಾಜ್ಯವನ್ನು ೫೦ ವರ್ಷದ ಹಿಂದಿನ ಪರಿಸ್ಥಿತಿಗೆ ಕೊಂಡೊಯ್ದಿದೆ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ದೂರಿದರು.

ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಪ್ರಭುಶಂಕರೇಶ್ವರ ಸಾಂಸ್ಕೃತಿಕ ಭವನದ ಆವರಣದಲ್ಲಿ ನಮೋ ಬ್ರಿಗೇಡ್ ಸಂಘಟನೆಯಿಂದ ಹಮ್ಮಿಕೊಂಡ ನಮೋ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯವನ್ನು ಮತ್ತೆ ೫೦ ವರ್ಷದ ಹಿಂದಿನ ಪರಿಸ್ಥಿತಿಗೆ ಕೊಂಡೊಯ್ದಿದೆ.

ಆಗ ಬಸ್‌ಗೆ ಕೊರತೆ ಇದ್ದರೂ ಬಸ್ ಹತ್ತಲು ಕಿಟಕಿ ಬಳಸುತ್ತಿದ್ದೆವು. ಇದೀಗ ಮತ್ತೆ ಅದೇ ಪರಿಸ್ಥಿತಿ ಬಂದೊದಗಿದೆ. ಅಲ್ಲದೆ ಹಿರಿಯರು, ಮಹಿಳೆಯರಿಗೆ ಬಸ್‌ನಲ್ಲಿ ಗೌರವದಿಂದ ನಡೆಸಿಕೊಳ್ಳುವ ಬದಲಾಗಿ ಯುವಕರು ಸೇರಿದಂತೆ ಬಹುತೇಕರು ಅಗೌರವದಿಂದ ಕಾಣುವಂತಾಗಿದೆ ಎಂದು ದೂರಿದರು.

ರಾಜ್ಯ ಸರಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದೆ. ೧೦ ಸಾವಿರ ರೂ. ಕೋಟಿ ನೀಡಿದ್ದು ಇದೀಗ ಜಾತಿ ರಾಜಕಾರಣದಲ್ಲಿ ತೊಡಗಿದೆ. ಜಾತಿ ಗಣತಿ ವರದಿಯಲ್ಲಿ ೭೬ ಲಕ್ಷದಷ್ಟು ಮುಸಲ್ಮಾನರಿದ್ದು ರಾಜ್ಯದ ಪರಿಸ್ಥಿತಿ ದೇವರೇ ಬಲ್ಲ.

ಬಿಜೆಪಿ ಸರಕಾರದ ಅವಧಿಯಲ್ಲಿ ಕುಕ್ಕರ್ ಬ್ಲಾಸ್ಟ್ ತಡೆಯಲಾಯಿತು. ಇದೀಗ ಕೆಫೆಯಲ್ಲಿನ ಬಾಂಬ್ ಸ್ಪೋಟದ ಕುರಿತಾಗಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ ಬಾಂಬ್ ಹಾಕಿದವನಿಗೆ ತರುಣ ಎಂದು ಸಂಭೋಧಿಸುತ್ತಾರೆ. ಅವನೊಬ್ಬ ಟೆರರಿಸ್ಟ್ ಹೀಗಿದ್ದಾಗ ತರುಣ ಎನ್ನುವಷ್ಟರ ಮಟ್ಟಿಗೆ ರಾಜ್ಯ ಸರಕಾರ ಮೃಧು ಧೋರಣೆ ತಾಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲಿ ಹಿಂದು ಧರ್ಮಕ್ಕೆ ದೊರೆತ ಸೌಭಾಗ್ಯ ಯಾರ ಕಾಲದಲ್ಲೂ ದೊರೆತಿಲ್ಲ. ಮೋದಿ ಅವರ ಪರಿವಾರದ ಹೆಸರಿನೊಂದಿಗೆ ಅಧಿಕಾರಕ್ಕೆ ಬಂದವರಲ್ಲ. ಹಿಂದಿನ ೬೫ ವರ್ಷಗಳ ದೇಶದ ಇತಿಹಾಸದಲ್ಲಿ ಇಂತಹ ರಾಜನನ್ನು ಕಂಡಿಲ್ಲ ಎಂದು ಹೇಳಿದರು.

ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುತ್ತಾರೆಂದು ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ. ಇದನ್ನು ಅರಿತ ಸೋನಿಯಾ ಗಾಂಧಿ ಈಗಾಗಲೇ ರಾಜ್ಯಸಭೆ ಪ್ರವೇಶಿಸಿದ್ದಾರೆ. ಅವರ ಪುತ್ರ ರಾಹುಲ್ ಗಾಂಧಿ ಯಾತ್ರೆ ಮೊಟಕುಗೊಳಿಸಿ ವಿದೇಶಕ್ಕೆ ಹಾರಿದ್ದಾರೆ. ಪರಿಸ್ಥಿತಿ ಹೀಗಿರುವಾಗ ೨೦೨೪ಕ್ಕೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಎನ್ನುವುದು ಫಿಕ್ಸ್ ಆಗಿದ್ದು ೨೦೨೯ರಲ್ಲಿ ಯೋಗಿ ಪ್ರಧಾನಿಯಾಗಬೇಕೆಂದರೆ ೨೦೨೪ರಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೇಬೇಕು ಎಂದರು.

ನನಗಿರುವ ಸಾಮರ್ಥ್ಯದಂತೆ ಮೋದಿ ಅವರ ಸಾಧನೆ ತಿಳಿಸುವ ಕೆಲಸ ಮಾಡುತ್ತಿದ್ದೇನೆ. ನೀವು ಸಹ ಹತ್ತಾರು ಜನರಿಗೆ ತಿಳಿಸಿ, ಕನಿಷ್ಠ ಒಬ್ಬರಿಗಾದರೂ ನರೇಂದ್ರ ಮೋದಿ ಸಾಧನೆ ತಿಳಿಸಿ. ಏನೂ ಮಾಡದಿದ್ದರೆ ಲೋಕಸಭೆ ಚುನಾವಣೆಯ ಮತದಾನದಂದು ನರೇಂದ್ರ ಮೋದಿ ಅವರ ಹೆಸರು ಹೇಳೀಕೊಂಡು ಯಾರು ಅಭ್ಯರ್ಥಿ ಆಗಿರುತ್ತಾರೋ ಅವರಿಗೆ ಮತ ನೀಡಿ.

ತಮ್ಮ ಕ್ಷೇತ್ರಕ್ಕೆ ಬಿಜೆಪಿಯಿಂದ ಇವರೇ ಅಭ್ಯರ್ಥಿ ಆಗಬೇಕೆಂದು ಒತ್ತಡ ತರಬೇಡಿ. ಇವರಾದರೆ ಮಾತ್ರ ಮತ ಹಾಕುತ್ತೇವೆಂದರೆ ಮೋದಿ ಕೆಲಸಕ್ಕೇನು ಬೆಲೆ?. ಎಂದ ಸೂಲಿಬೆಲೆ ಈ ಬಾರಿಯದ್ದು ಎಂಪಿ ಚುನಾವಣೆಯಲ್ಲ ಬದಲಾಗಿ ಅದು ಪಿಎಂ ಚುನಾವಣೆ ಆಗಿದೆ. ಈ ಬಾರಿ ಪಿಎಂ ಆಯ್ಕೆಗಾಗಿ ಚುನಾವಣೆ ಮಾಡೋಣ ಎಂದು ಕರೆ ನೀಡಿದರು.

ಬ್ರಿಗೇಡ್‌ನ ರಾಜ್ಯ ಸಂಚಾಲಕ ವರ್ದಮಾನ್ ತ್ಯಾಗಿ, ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ದೇಶಭಕ್ತರ ಗುಂಪು ಕಟ್ಟಿಕೊಂಡು ರಾಜ್ಯದೆಲ್ಲೆಡೆ ವರ್ಷದಿಂದ ತಿರುಗಾಡುತ್ತ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ೧೬ ದಿನ ೩,೭೦೦ ಕಿ.ಮೀ. ಸೈಕಲ್ ಯಾತ್ರೆ ಸೇರಿದಂತೆ ಹಲವು ಚಟುವಟಿಕೆ ಕೈಗೊಳ್ಳಲಾಗಿದೆ ಎಂದರು.

ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಡಾ.ಎಂ.ಎಸ್.ಕಡಪಟ್ಟಿ, ವೀರೇಶ ಉಂಡೋಡಿ, ಬಸವರಾಜ ನಾಡಗೌಡರ, ಸುಜಾತಾ ತತ್ರಾಣಿ, ಗುರುನಾಥ ಚಳ್ಳಮರದ, ವಿಜಯಕುಮಾರ ಕನ್ನೂರ, ಮಲ್ಲೇಶ ನಿಡಗುಂದಿ, ಸಂತೋಷ ಕಂಗಳ, ಬಸವರಾಜ ಬೇವೂರ, ಯುವಾ ಬ್ರಿಗೇಡ್‌ನ ಜಿಲ್ಲಾ ಸಂಚಾಲಕ ಶ್ರೀಧರ ನಿರಂಜನ, ವೀರೇಶ ಉಂಡೋಡಿ, ರಾಹುಲ್ ಸಜ್ಜನ ಇತರರು ಇದ್ದರು.

ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯರು, ಯುವಕರು, ಬ್ರಿಗೇಡ್ ಸದಸ್ಯರು ಸೂಲಿಬೆಲೆ ಅವರನ್ನು ಸನ್ಮಾನಿಸಿದರು.

Nimma Suddi
";