ಶ್ರೀರಂಗಪಟ್ಟಣ: ಬರಗಾಲ ಹಾಗೂ ಕೆಆರ್‌ಎಸ್ ಜಲಾಶಯ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸದ ಕಾರಣ ಮಂಡ್ಯ ಜಿಲ್ಲೆಯ ರೈತರು ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದಿದ್ದ ಕಬ್ಬು ಬಿಸಿಲು ತಾಪಕ್ಕೆ ಸಂಪೂರ್ಣವಾಗಿ ಒಣಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಜಿಲ್ಲೆಯಾದ್ಯಂತ ಕೆಆರ್‌ಎಸ್ ಜಲಾಶಯ ವ್ಯಾಪ್ತಿಯಲ್ಲಿ ಬೇಸಿಗೆ ಅವಧಿಯಲ್ಲಿ ಬೆಳೆದು ನಿಂತಿರುವ ಕಬ್ಬು ಈ ಮೊದಲು ಬಾಡುವ ಹಂತಕ್ಕೆ ತಲುಪಿತ್ತು. ಫೆಬ್ರವರಿ ತಿಂಗಳು ಕಳೆದು ಮಾರ್ಚ್ ಆರಂಭವಾದರೂ ಮಳೆಯೂ ಬಾರದೆ, ನಾಲೆಗಳಲ್ಲಿನೀರು ಹರಿಸದ ಕಾರಣ ಒಣಗುವ ಹಂತಕ್ಕೆ ತಲುಪಿದೆ.ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ 35 ಸಾವಿರ ಹೆಕ್ಟೇರ್‌ನಲ್ಲಿ ಕೂಳೆ ಕಬ್ಬು, ಹೊಸದಾಗಿ ನಾಟಿ ಮಾಡಿರುವ ಕಬ್ಬು ಇದೆ.
ಈ ಪೈಕಿ ಕೊಳವೆ ಬಾವಿ, ಕೆರೆ ಅವಲಂಬಿತ ಹಾಗೂ ತನಿ(ಶೀತ) ಜಮೀನು ಪ್ರದೇಶಗಳಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿರುವ ಕಬ್ಬನ್ನು ನೀರುಣಿಸಿ ರೈತರು ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ನಾಲೆಯ ನೀರನ್ನೇ ಅವಲಂಬಿಸಿ ಬೆಳೆದಿದ್ದ ಸುಮಾರು ಉಳಿದ 25 ಸಾವಿರ ಹೆಕ್ಟೇರ್ ಕಬ್ಬಿನ ಬೆಳೆ ನಷ್ಟದ ಅಂಚಿಗೆ ತಲುಪಿದೆ. ಶೀಘ್ರ ಮಳೆಯಾಗದಿದ್ದರೆ ಸುಮಾರು 200 ಕೋಟಿ ರೂ. ಬೆಲೆ ಬಾಳುವ ಕಬ್ಬು ಜಿಲ್ಲೆಯಾದ್ಯಂತ ನಷ್ಟವಾಗಲಿದೆ ಎಂದು ಕೃಷಿ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.ಕೆಆರ್‌ಎಸ್ ಜಲಾಶಯದಲ್ಲಿ 89 ಅಡಿಯಷ್ಟು ನೀರಿದೆ. 7.5 ಟಿಎಂಸಿ ನೀರು ಲಭ್ಯವಿದೆ.
ಕೆಆರ್‌ಎಸ್ ಜಲಾಶಯದಲ್ಲಿ 7.5 ಟಿಎಂಸಿ ನೀರು ಲಭ್ಯವಿದೆ. ಕಳೆದ ವರ್ಷ ಜುಲೈ ತಿಂಗಳ ಅವಧಿವರೆಗೂ ಮಳೆ ಬೀಳಲಿಲ್ಲ. ಕೆಆರ್‌ಎಸ್ ಜಲಾಶಯ ಭರ್ತಿಯಾಗಲೇ ಇಲ್ಲ, ಈಗಾಗಲೇ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಧಿಗಿದೆ. ಈ ವರ್ಷವೂ ಜುಲೈ ತಿಂಗಳವರೆಗೆ ಮಳೆಯಾಗದಿದ್ದರೆ ಕುಡಿಯುವ ನೀರಿಗೂ ತೊಂದರೆಯಾಗಲಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗಿದೆ. ಶೀಘ್ರ ಮಳೆಯಾದರಷ್ಟೇ ನಾಲೆಗಳಿಗೆ ಜಲಾಶಯದಿಂದ ನೀರು ಹರಿಸಬಹುದು.
ಜಲಾಶಯದಲ್ಲಿ ಈ ಪ್ರಮಾಣದಲ್ಲಿನೀರು ಸಂಗ್ರಹವಿದ್ದ ಸಂದರ್ಭದಲ್ಲಿ ಕಟ್ಟು ಪದ್ಧತಿಯಲ್ಲಿ ನಾಲೆಗಳ ಮೂಲಕ ನೀರು ಹರಿಯಬಿಡಲಾಗುತ್ತಿತ್ತು. ಈಗ ನಾಲೆ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಹನಿ ನೀರನ್ನು ವಿಶ್ವೇಶ್ವರಯ್ಯ ನಾಲೆಗೆ ಹರಿಸಿಲ್ಲ. ಇದರಿಂದ ವಿಶ್ವೇಶ್ವರಯ್ಯ ನಾಲೆ ಅವಲಂಬಿತ ಕಬ್ಬು ಬೆಳೆ ಸಂಧಿಪೂರ್ಣವಾಗಿ ಬೇಸಿಗೆ ಬಿಸಿಲಿಗೆ ಒಣಗುತ್ತಿದೆ.