ಬಾಗಲಕೋಟೆ :
ಸಿರಿಧಾನ್ಯಗಳನ್ನು ಆಹಾರದಲ್ಲಿ ಬಳಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಇದು ನಮ್ಮ ಪರಂಪರೆ ಎಂದು ಪ್ರಾಚಾರ್ಯಾರಾದ ಡಾ.ರಾಜೇಶ್ವರಿ ತೆಗ್ಗಿ ಹೇಳಿದರು.
ಮಹಿಳಾ ದಿನಾಚರಣೆ ಅಂಗವಾಗಿ ಪೌಷ್ಟಿಕಾಂಶದ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ನಗರದ ಬವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯ ಆವರಣದಲ್ಲಿ “ಪೌಷ್ಟಿಕ ಆಹಾರ ಮೇಳ” ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಸುಮಾರು ೨೮ ತಂಡಗಳು ಭಾಗವಹಿಸಿದ್ದವು. ಪ್ರಶಿಕ್ಷಣಾರ್ಥಿಗಳು ಹೊಸ ಬಗೆಯ ಆಲೋಚನೆಗಳಿಂದ ಕೂಡಿದ ಪೌಷ್ಟಿಕ ಆಹಾರವನ್ನು ಮತ್ತು ವಿವಿಧ ಸಿರಿಧಾನ್ಯಗಳನ್ನು ಬಳಸಿ ಆಹಾರ ತಯಾರಿಸಿದ್ದರು. ಈ ಕಾರ್ಯಕ್ರಮದ ಉದ್ದೇಶ “ಆರೋಗ್ಯಕರ ಮತ್ತು ರುಚಿಕರವಾದ ಆಹಾರವನ್ನು ಸೇವಿಸುವ ಅಭ್ಯಾಸವನ್ನು ಉತ್ತೇಜಿಸುವುದಾಗಿತ್ತು”
ವಿವಿಧ ರೀತಿಯ ಸಿರಿಧಾನ್ಯಗಳ ಆಹಾರ ಪದಾರ್ಥಗಳು ಹಾಗೂ ಪಾನೀಯಗಳನ್ನು, ಮನೆಯಲ್ಲೇ ತಯಾರಿಸಿ ಮತ್ತು ಸ್ಥಳದಲ್ಲಿಯೆ ಬಂದು ತಯಾರಿಸಿದ ಆಹಾರವನ್ನು ಎಲ್ಲಾ ಪ್ರಶಿಕ್ಷಣಾರ್ಥಿಗಳು ಪ್ರದರ್ಶನ ಮಾಡಿದರು.
ಈ ಕಾರ್ಯಕ್ರಮದ ನಿರ್ಣಾಯಕರಾಗಿ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿನಿಯರಾದ ಶಿಲ್ಪಾ ತೆಗ್ಗಿ ಮತ್ತು ಸುಷ್ಮಾ ನಂದವಾಡಗಿ ಆಗಮಿಸಿದ್ದರು. ಮಹಿಳಾ ಘಟಕದ ಕಾರ್ಯದರ್ಶಿಗಳಾದ ಗೀತಾ ಮಟ್ಟಿಕಲ್ಲಿ ಕಾರ್ಯಕ್ರವನ್ನು ಆಯೋಜಿಸಿದ್ದರು. ಮಹಾವಿದ್ಯಾಲಯ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಕೂಡ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.