ಬಾಗಲಕೋಟೆ:
ಪ್ರಸಕ್ತ ಸಾಲಿನಲ್ಲಿ ಕೃಷಿ ಪರಿಕರಗಳು ಮತ್ತು ಗುಣಮಟ್ಟ ನಿಯಂತ್ರಣ ಯೋಜನೆಯಡಿ ಹೈಟೆಕ್ ಹಾರ್ವೆಸ್ಟರ್ ಹಬ್ಗಳನ್ನು ಬೆಳೆಯ ವಿಧ ಮತ್ತು ಕಟಾವು ಅವಧಿಯ ಆಧಾರದ ಮೇಲೆ ಕಾರಿಡಾರ್ ಮಾದರಿಯಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ ಆಯವ್ಯಯದಲ್ಲಿ ಘೋಷಿಸಿದ್ದು, ಕಾರಿಡಾರ್ನಲ್ಲಿ ಯಂತ್ರೋಪಕರಣಗಳು ಸಂಚರಿಸಿ ಕಾರ್ಯನಿರ್ವಹಿಸಬಹುದಾಗಿದೆ.
ಹೈಟೆಕ್ ಹಾರ್ವೆಸ್ಟರ್ ಹಬ್ಗಳನ್ನು ಅನುಷ್ಟಾನ ಮಾಡಲು ಸೇವಾಧಾರ ಫಲಾನುಭವಿಗಳು ಭಾಗವಹಿಸಬಹುದಾಗಿದೆ. ಪರಿಶಿಷ್ಟ ಜಾತಿ ವರ್ಗದ ರೈತರಿಗೆ ಗರಿಷ್ಠ ಶೇ.೭೦ ಸಹಾಯಧನವನ್ನು ನೀಡಲಾಗುತ್ತದೆ. ಶುಗರ್ಕೇನ್ ಹಾರ್ವೆಸ್ಟರ್ ಹಬ್ನಲ್ಲಿ ಶುಗರ್ಕೇನ್ ಹಾರ್ವೆಸ್ಟರ್ದೊಂದಿಗೆ Iಟಿಣeಡಿ ಖoತಿ ಖoಣಚಿvಚಿಣoಡಿ ದಾಸ್ತಾನೀಕರಿಸುವುದು ಕಡ್ಡಾಯವಾಗಿರುತ್ತದೆ. ಹೈಟೆಕ್ ಹಾರ್ವೆಸ್ಟರ್ ಹಬ್ ಘಟಕಗಳಲ್ಲಿ ಈ ಮೇಲಿನ ಹೈಟೆಕ್
ಯಂತ್ರೋಪಕರಣಗಳನ್ನು ದಾಸ್ತಾನೀಕರಿಸಿ ರೈತರಿಗೆ ಬಾಡಿಗೆ ಆಧಾರದಲ್ಲಿ ಒದಗಿಸಲು ಅವಕಾಶವಿರುತ್ತದೆ.
ಹೈಟೆಕ್ ಹಾರ್ವೆಸ್ಟರ್ ಹಬ್ಗಳಲ್ಲಿ ದಾಸ್ತಾನೀಕರಿಸುವ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದ ಮೇಲೆ ಕಾರಿಡಾರ್ನಲ್ಲಿ ಬರುವ ರೈತರಿಗೆ ಒದಗಿಸುವುದು. ಕಾರ್ಯಾದೇಶ ನೀಡಿದ ನಂತರ ಖರೀದಿಸಿದ ಯಂತ್ರೋಪಕರಣಗಳಿಗೆ ಮಾತ್ರ ಸಹಾಯಧನವನ್ನು ನೀಡಲಾಗುವುದು. ಜಿಲ್ಲೆಗೆ ಒಂದು ಶುಗರ್ಕೇನ್ ಹಾರ್ವೆಸ್ಟರ್ ಹಬ್ (೧ ಪ.ಜಾ ವೈಯಕ್ತಿಕ ಫಲಾನುಭವಿ) ಕೇಂದ್ರ ಕಛೇರಿಯಿಂದ ಕಾರ್ಯಕ್ರಮವಿದ್ದು, ಜಿಲ್ಲಾ ಮಟ್ಟದ ಉಪಕರಣ ಸಮಿತಿ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಬಾಗಲಕೋಟೆ ರವರ ಅಧ್ಯಕ್ಷತೆಯಲ್ಲಿ ನಿಯಮಾನುಸಾರ ಹೈಟೆಕ್ ಹಾರ್ವೆಸ್ಟರ್ ಹಬ್ಗಳನ್ನು ನಿರ್ವಹಿಸಲು ಸೇವಾದಾರ ಸಂಸ್ಥೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಜಿದಾರರು ಇಚ್ಛಿಸುವ ಹಬ್ಗೆ ಅರ್ಜಿ ನಮೂನೆಯಲ್ಲಿ, ನೋಂದಾಯಿಸಿದ ಸಂಸ್ಥೆ ಪ್ರಮಾಣ ಪತ್ರ, ಪಹಣಿ, ಜಾತಿ ಪ್ರಮಾಣ ಪತ್ರ, ಗುರುತಿನ ಪತ್ರ, ಬ್ಯಾಂಕ್ ಖಾತೆ ಸಂಖ್ಯೆ, ೨೦ ರಊ.ಗಳÀ ಛಾಪಾ ಕಾಗದದ ಮೇಲೆ ಹಬ್ಅನ್ನು ಪರಭಾರೆ ಮಾಡುವುದಿಲ್ಲವೆಂದು ಮುಚ್ಚಳಿಕೆ ಪತ್ರ, ಸಕ್ಕರೆ ಕಾರ್ಖಾನೆಯಿಂದ ಕಬ್ಬು ಕಟಾವಿಗೆ ಮಾಡಿಕೊಂಡ ಲಿಖಿತ ಒಪ್ಪಂದ ಪ್ರಮಾಣ ಪತ್ರ ಹಾಗೂ ಸಹಾಯಧನವು ಆಗಿರುವುದರಿಂದ ಕಡ್ಡಾಯವಾಗಿ ರಾಷ್ಟಿçÃಕೃತ ಬ್ಯಾಂಕ್ನಿAದ ತಾತ್ವಿಕ ಸಾಲ ಮಂಜೂರಾತಿ ಪತ್ರವನ್ನು ಸಂಬAಧಿಸಿದ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಮಾರ್ಚ ೪ ಕೊನೆಯ ದಿನವಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.