ಯಾದಗಿರಿ: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿನ್ನೆ ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತಾಡುವಾಗ ತಮ್ಮ ಎಂದಿನ ಮಾತಿನ ವರಸೆ ಮುದುವರಿಸಿದರು ಎಂದು ಮಾಹಿತಿ ತಿಳಿದು ಬಂದಿದೆ.
ಜನರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸುವುದು ಅವರಿಗೆ ಬಹಳ ಇಷ್ಟ. ಹಾಗಾಗೇ, ಭಾಷಣಗಳನ್ನು ಮಾಡುವಾಗ ಅತಿಶಯೋಕ್ತಿಗಳನ್ನು ಬಳಸುತ್ತಿದ್ದು, ಇಲ್ಲಿ ಅವರು ಮಾತಾಡುವುದನ್ನು ಕೇಳಿ ನರೇಂದ್ರ ಮೋದಿಯವರು ಬರ್ತಾರಾ ಮತ್ತೇ ಪ್ರಧಾನಿ ಆಗ್ತಾರಾ ಅನ್ನುತ್ತಾರೆ. ಅವರು ಹಾಗೆ ಹೇಳುತ್ತಿದ್ದ ಹಾಗೆಯೇ ಜನ ಮೋದಿ ಮೋದಿ ಅಂತ ಒಕ್ಕೊರಲಿಂದ ಕೂಗುತ್ತಾರೆ.
ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಆಗುತ್ತಾರೆ ಅಂತ ಹೇಳುತ್ತಿವೆ ಮತ್ತು ಅದು ಎಲ್ಲರಿಗೂ ಗೊತ್ತಿರುವ ಸಂಗತಿ.ಯತ್ನಾಳ್ ಅಡುವ ಮುಂದಿನ ಮಾತು ಕೇಳಿ.ಕರ್ನಾಟದಲ್ಲಿ ನಾವು ಬರ್ತೀವಿ, ನಾನೇ ಮುಖ್ಯಮಂತ್ರಿ ಆಗ್ತೀನಿ, ಡಿಕೆ ಶಿವಕುಮಾರ್ ಗೆ ಏಯ್ ಹೋಗೋ ಅಂತೀನಿ ಅನ್ನುತ್ತಾರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಇದೇ ಯತ್ನಾಳ್ ಡಿಸೆಂಬರ್ ಒಳಗೆ ಸರ್ಕಾರ ಉರುಳಿ ಹೋಗುತ್ತದೆ ಅಂತ ಹೋದಲೆಲ್ಲೆಡೆ ಹೇಳುತ್ತಿದ್ದರು.
ಡಿಸೆಂಬರ್ ಕಳೆಯಿತು, ಯತ್ನಾಳ್ ತಮ್ಮ ಹೇಳಿಕೆಯ ಅವಧಿ ಲೋಕಸಭಾ ಚುನಾವಣೆಗೆ ವಿಸ್ತರಿಸಿದ್ದು, ಈಗ ಸಿದ್ದರಾಮಯ್ಯ ಸರ್ಕಾರ ಉರುಳುವುದರ ಜೊತೆಗೆ ತಾನೇ ಮುಖ್ಯಮಂತ್ರಿ ಆಗುತ್ತೇನೆ ಎನ್ನುತ್ತಿರುವುದು ಬೆಳಕಿಗೆ ಬಂದಿದೆ.