ಬೆಂಗಳೂರು: ಸಂಸದ ಪ್ರತಾಪ್‌ಸಿಂಹಗೆ ಅವರ ಹೇಳಿಕೆಗಳು ಹಾಗೂ ನಡವಳಿಗಳೇ ಮುಳುವು ಎಂದು ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ತಿಳಿಸಿದರು.
ಸಂಸದ ಪ್ರತಾಪ್‌ಸಿಂಹಗೆ ಟಿಕೆಟ್ ಕೈ ತಪ್ಪುವ ವಿಚಾರದಲ್ಲಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಮೈಸೂರು ಕೊಡಗಿನ ಸಂಸದರಾಗಿ ಕೆಲಸ ಮಾಡಿದ್ದು, ಪಕ್ಷ ಯಾವುದೇ ಇದ್ದರೂ ಕೆಲಸ ಮಾಡಿದ್ದಾರೆ. ನಮ್ಮ ಕೆಲಸಕ್ಕಿಂತ ಹೆಚ್ಚಾಗಿ ನಮ್ಮ ನಡವಳಿಕೆ ಜನ ಗಮನಿಸ್ತಾರೆ. ಪ್ರತಾಪ್‌ಸಿಂಹಗೆ ಅವರ ಹೇಳಿಕೆಗಳು, ನಡವಳಿಕೆಗಳೇ ಮುಳುವಾಗಿವೆ ಎಂದರು.
ಪ್ರತಾಪ್ ಸಿಂಹ ಅವರು ಒಮ್ಮೆ ಮೈಸೂರು ಮಹಾರಾಜರಾಗಿ ಒಂದು ಪಟ್ಟು ಜಾಸ್ತಿ ಕೆಲಸ ಮಾಡಿದ್ದೀನಿ ಅಂದಿದ್ದರು. ಮಹಾರಾಜರು ಎಲ್ಲಿ? ಪ್ರತಾಪ್ ಸಿಂಹ ಎಲ್ಲಿ? ನಾನೇ ಬುದ್ದಿವಂತ, ನಾನೆ ಮೇಲೂ ಎಂಬ ದುರಂಕಾರದ ಹೇಳಿಕೆಗಳಿಂದ ಟಿಕೆಟ್ ಮಿಸ್ ಆಗಿರಬಹುದು ಎಂದು ವ್ಯಾಖ್ಯಾನಿಸಿದರು.
ಜನರಿಗೆ ವಿರೋಧಿ ಅಂತ ಕಂಡಾಗ ಪರಿಣಾಮ ಬೇರೆಯದ್ದೇ ಆಗುತ್ತದೆ. ನಿನ್ನೆ ಕಣ್ಣೀರು ಹಾಕಿದ್ದಾರೆ, ನೋವಾಗಿರಬಹುದು. ಯದುವಂಶದವರು, ಅರಸರು ಅಗಲಿದರೂ ಅವರ ಕೆಲಸ ಅಜರಾಮರ. ಅನ್ನ, ನೀರು, ಶಿಕ್ಷಣ ಎಲ್ಲಾ ಅರಸರು ಕೊಟ್ಟಿದ್ರು. ಯದುವೀರ್ ಅವ್ರನ್ನು ಅಭ್ಯರ್ಥಿ ಮಾಡ್ತಾರೆ ಎಂದು ವಿವರಿಸಿದರು.