This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Education NewsLocal NewsNational NewsPolitics NewsState News

ಮಾಧ್ಯಮ ಜೊತೆ ಜಿಲ್ಲಾ ಚುನಾವಣಾಧಿಕಾರಿ ಸಮಾಲೋಚನೆ

ಮಾಧ್ಯಮ ಜೊತೆ ಜಿಲ್ಲಾ ಚುನಾವಣಾಧಿಕಾರಿ ಸಮಾಲೋಚನೆ

ಬಾಗಲಕೋಟೆ

ಮುಂಬರುವ ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಅವರ ಅಧ್ಯಕ್ಷತೆಯಲ್ಲಿ ಮಾದ್ಯಮದವರ ಜೊತೆ ಮಂಗಳವಾರ ಸಮಾಲೋಚನಾ ಸಭೆ ಜರುಗಿತು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಪಾಲನೆಗೆ ಜಿಲ್ಲೆಯಲ್ಲಿ 136 ಸೆಕ್ಟರ ಅಧಿಕಾರಿಗಳು, 60 ಪ್ಲೈಯಿಂಗ್ ಸ್ಕ್ವಾಡ್, 72 ಸ್ಟ್ಯಾಟಿಕ್ ಸರ್ವೇಲನ್ಸ್ ತಂಡ, 22 ವಿಡಿಯೋ ಸರ್ವೆಲೆನ್ಸ್ ತಂಡ, 7 ವಿಡಿಯೋ ವೀವಿಂಗ್ ತಂಡ ಹಾಗೂ 24 ಚೆಕ್‍ಪೋಸ್ಟಗಳನ್ನು ರಚಿಸಲಾಗಿದೆ. ಚುನಾವಣಾ ಅಭ್ಯರ್ಥಿಗಳು ಒಟ್ಟು 95 ಲಕ್ಷದವರೆಗೆ ಅಧಿಕೃತವಾಗಿ ಖರ್ಚು ಮಾಡಲು ಚುನಾವಣಾ ಆಯೋಗ ಕಲ್ಪಸಿಸಿದೆ ಎಂದರು.

ಅಭ್ಯರ್ಥಿಗಳು ಎಲೆಕ್ಟ್ರಾನಿಕ್ಸ್ ಮಾಧ್ಯಮಗಳಾದ ಟಿವಿ, ರೇಡಿಯೋ, ಕೇಬಲ್ ನೆಟವರ್ಕ, ಎಫ್‍ಎಂ ಚನಲ್, ಸಾರ್ವಜನಿಕ ಸ್ಥಳಗಳಲ್ಲಿ ಆಡಿಯೋ ವಿಜುವಲ್ ಡಿಸಪ್ಲೇ, ಇ-ನ್ಯೂಸ್ ಪೇಪರ, ಎಸ್.ಎಂ.ಎಸ್, ಸೋಸಿಯಲ್ ಮೀಡಿಯಾ, ಇಂಟರ್‍ನೆಟ್ ವೆಬ್‍ಸೈಟ್‍ಗಳಲ್ಲಿ ಚುನಾವಣಾ ಜಾಹೀರಾತುಗಳನ್ನು ನೀಡಬೇಕಾದಲ್ಲಿ ಎಂಸಿಎಂಸಿ ಸಮಿತಿಗೆ ಅಭ್ಯರ್ಥಿಗಳು ಮೂರು ದಿನಗಳ ಮುಂಚಿತವಾಗಿ ಸಲ್ಲಿಸಬೇಕು.ಪೇಯ್ಡ ನ್ಯೂಸ್ ಕೂಡಾ ಎಂಸಿಎಂಸಿ ವ್ಯಾಪ್ತಿಗೆ ಒಳಪಡುತ್ತಿರುವುದಾಗಿ ತಿಳಿಸಿದರು.

ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷದವರು ಸಭೆ, ರ್ಯಾಲಿ, ವಾಹನ, ತಾತ್ಕಾಲಿಕ ಪಕ್ಷದ ಕಚೇರಿ, ಧ್ವನಿವರ್ಧಕ, ಹೆಲಿಕ್ಯಾಪ್ಟರ ಹಾಗೂ ಹೆಲಿಪ್ಯಾಡ್ ಪರವಾನಿಗೆ ಕೋರಿ ಸುವಿದಾ ಆ್ಯಪ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಆ್ಯಪ್‍ನಲ್ಲಿ ಸಲ್ಲಿಸಿದ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಬಹುದಾಗಿದೆ. ಭಾರತ ಚುನಾವಣಾ ಆಯೋಗವು ಸಿವಿಜಿಲ್ ಆ್ಯಪ್ ಪ್ರಾರಂಭಿಸಿದ್ದು, ಈ ಆ್ಯಪ್ ಮೂಲಕ ಯಾವುದೇ ವ್ಯಕ್ತಿಯು ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಅಲ್ಲದೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾದ ದೂರು ನಿರ್ವಹಣಾ ಕೇಂದ್ರಕ್ಕೆ ಸಾರ್ವಜನಿಕರು 1950 ನಂಬರಿಗೆ ಕರೆ ಮಾಡಬಹುದಾಗಿದೆ ಎಂದರು.

ಜಿ.ಪಂ ಸಿಇಓ ಶಶಿಧರ ಕುರೇರ ಮಾತನಾಡಿ ಸದಾಚಾರ ನೀತಿ ಸಂಹಿತೆಗೆ ಹಲವು ತಂಡಗಳನ್ನು ರಚಿಸಲಾಗಿದ್ದು, ಅವುಗಳು ನಿರ್ವಹಿಸುವ ಕಾರ್ಯಗಳ ಬಗ್ಗೆ ತಿಳಿಸಿದರು. 50 ಸಾವಿರಕ್ಕಿಂತ ಹೆಚ್ಚಿಗೆ ಹಣ ದಾಖಲೆ ಇಲ್ಲದೇ ಇದ್ದರೆ ಜಪ್ತ ಮಾಡಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಬೇಕಿದೆ. ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ ಹಣ ಇದ್ದರೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಬರುವ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ 24 ಚೆಕ್‍ಪೋಸ್ಟಗಳನ್ನು ಹಾಕಲಾಗಿದ್ದು, ನೀತಿ ಸಂಹಿತೆ ಬಂದ ದಿನದಿಂದ ದಿನ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿವೆ. ಶಾಂತ, ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಎಂಸಿಎಂಸಿ ಸಮಿತಿಯ ನೋಡಲ್ ಅಧಿಕಾರಿ ರವೀಂದ್ರ ಹಕಾಟಿ, ಚುನಾವಣಾ ತಹಶೀಲ್ದಾರ ಪಂಪಯ್ಯ, ಶಿರಸ್ತೇದಾರರಾದ ಮಹೇಶ ಪಾಂಡವ, ರಜಪೂತ ಸೇರಿದಂತೆ ಇತರರು ಉಪಸ್ಥಿತರಿದ್ದರು.

*ಮತದಾರರ ವಿವರ*
—————-
ನರಗುಂದ ಮತಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 17,81,395 ಮತದಾರರಿದ್ದು, 883993 ಪುರುಷ, 897306 ಮಹಿಳಾ ಹಾಗೂ 96 ಇತರೆ ಮತದಾರರು ಇದ್ದಾರೆ.

 

ಮುಧೋಳ ಮೀಸಲು ಮತಕ್ಷೇತ್ರದಲ್ಲಿ 100517 ಪುರುಷ, 105257 ಮಹಿಳಾ ಮತದಾರರು, 6 ಇತರೆ ಸೇರಿ ಒಟ್ಟು 2,05,780 ಮತದಾರರಿದ್ದರೆ,

ತೇರದಾಳ ಕ್ಷೇತ್ರದಲ್ಲಿ 115655 ಪುರುಷ, 117003 ಮಹಿಳಾ, 13 ಇತರೆ ಸೇರಿ ಒಟ್ಟು 232671,

ಜಮಖಂಡಿ ಮತಕ್ಷೇತ್ರದಲ್ಲಿ 109117 ಪುರುಷ, 111014 ಮಹಿಳಾ, 7 ಇತರೆ ಸೇರಿ ಒಟ್ಟು 220138,ಇದ್ದಾರೆ.

ಬೀಳಗಿ ಕ್ಷೇತ್ರದಲ್ಲಿ 114784 ಪುರುಷ, 118094 ಮಹಿಳಾ, 16 ಇತರೆ ಸೇರಿ ಒಟ್ಟು 232894,

ಬಾದಾಮಿ ಕ್ಷೇತ್ರದಲ್ಲಿ 112449 ಪುರುಷ, 111713 ಮಹಿಳಾ, 14 ಇತರೆ ಸೇರಿ ಒಟ್ಟು 224176,

ಬಾಗಲಕೋಟೆ ಕ್ಷೇತ್ರದಲ್ಲಿ 123276 ಪುರುಷ, 126089 ಮಹಿಳಾ, 20 ಇತರೆ ಸೇರಿ ಒಟ್ಟು 249385,

ಹುನಗುಂದ ಕ್ಷೇತ್ರದಲ್ಲಿ 112253 ಪುರುಷ, 113898 ಮಹಿಳಾ, 13 ಇತರೆ ಸೇರಿ ಒಟ್ಟು 226164

ಹಾಗೂ ನರಗುಂದ ಮತಕ್ಷೇತ್ರದಲ್ಲಿ 95942 ಪುರುಷ, 94238 ಮಹಿಳಾ ಹಾಗೂ 7 ಇತರೆ ಸೇರಿದಂತೆ ಒಟ್ಟು 190187 ಜನ ಮತದಾರರಿದ್ದಾರೆ.

 

Nimma Suddi
";