ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಮೂಲಕ ಜನರ ಋಣ ತೀರಿಸಲು ಇದೊಂದು ಅವಕಾಶವಾಗಿದೆ ಎಂದು ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ತಿಳಿಸಿದರು.
ಇದೇ ವೇಳೆ ಟೆಕೆಟ್ ತಪ್ಪಿರುವ ಸಂಸದ ಪ್ರತಾಪ್ ಸಿಂಹ ಅವರು ಕ್ಷೇತ್ರಕ್ಕೆ ಮಾಡಿರುವ ಕೆಲಸವನ್ನು ಪ್ರಶಂಸಿದ ಅವರು, ಅವರು ನನ್ನನ್ನು ಸಹೋದರನ ರೀತಿ ನೋಡುತ್ತಿದ್ದು, ಅವರ ಬೆಂಬಲ ಇದೆ ಎಂದು ತಿಳಿಸಿದ್ದಾರೆ.
ಟಿಕೆಟ್ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಭೇಟಿ ನೀಡಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಒಂಬತ್ತು ವರ್ಷಗಳಿಂದ ನಾನು ಜನರ ಜೊತೆ ಇದ್ದೇನೆ. ಜನರ ಋಣ ತೀರಿಸುವುದಕ್ಕೆ ಇದು ಒಂದು ಅವಕಾಶವಾಗಿದೆ ಎಂದರು.
ಇನ್ನು ಪ್ರತಾಪ್ ಸಿಂಹ ಅವರ ಬಗ್ಗೆ ಮಾತನಾಡಿ, ಸಾರ್ವಜನಿಕ ಬದುಕಿಗೆ ಬಂದ ಮೇಲೆ ಸಾರ್ವಜನಿಕವಾಗಿ ಇರಬೇಕಾಗುತ್ತದೆ. ಅವರು ನನ್ನನ್ನು ಸಹೋದರನ ರೀತಿಯಲ್ಲಿ ನೋಡಿದ್ದಾರೆ. ಪ್ರತಾಪ್ ಸಿಂಹ ಎರಡು ಅವಧಿ ಸಂಸದರಾಗಿ ಕೆಲಸ ಮಾಡಿದ್ದಾರೆ. ಕ್ಷೇತ್ರದಲ್ಲಿ ಒಳ್ಳೆಯ ಅಡಿಪಾಯ ಹಾಕಿದ್ದಾರೆ. ಅವರ ಸಹಕಾರ ಇದ್ದರೆ ನನಗೆ ಅನುಕೂಲ ಆಗುತ್ತದೆ. ಅವರು ಉತ್ತಮ ಅಭಿವೃದ್ಧಿ ಕಾರ್ಯ ಮಾಡ್ತಾ ಇದ್ದಾರೆ ಎಂದರು.
ಪ್ರತಾಪ್ ಸಿಂಹ ಜೊತೆ ಯಾವಾಗಲೂ ನಾನು ಸಂಪರ್ಕ ಇದ್ದೇನೆ. ಅವರ ಬೆಂಬಲ ಇರುತ್ತದೆ. ಒಂದು ವರ್ಷಗಳ ಹಿಂದೆಯೆ ನನಗೆ ಚುನಾವಣೆ ನಿಲ್ಲುವ ಯೋಚನೆ ಬಂದಿತ್ತು. ಅಧಿಕಾರ ಇದ್ದರೆ ಇನ್ನೂ ಒಳ್ಳೆಯ ಕೆಲಸ ಮಾಡಲು ಆಗತ್ತದೆ ಎಂದು ತಿಳಿಸಿದರು.