ಗದಗದ ಐತಿಹಾಸಿಕ ಜೋಡು ಮಾರುತಿ ದೇವಸ್ಥಾನದ ಭಕ್ತರಲ್ಲಿ ಕಳವಳ ಶುರುವಾಗಿರ್ಧಧೂ, ಜೋಡು ಮಾರುತಿ ದೇವಸ್ಥಾನದ ಪಕ್ಕದಲ್ಲೇ ಶಾದಿಮಹಲ್ ನಿರ್ಮಾಣಕ್ಕೆ ಪ್ಲಾನ್ ಹಾಕಲಾಗಿದೆ. ಇದರಿಂದ ಹಿಂದೂ ಸಮುದಾಯದ ಪೂಜೆ ಪುರಸ್ಕಾರಕ್ಕೆ ತೊಂದರೆಯಾಗುವ ಆತಂಕ ಎದುರಾಗಿದೆ. ಕೋಮಸೌಹಾರ್ದ ಧಕ್ಕೆ ಆಗುವ ಆತಂಕದಲ್ಲಿ ಹಿಂದೂ ಸಮುದಾಯವಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಪರವಾನಿಗೆ ನೀಡದಂತೆ ಒತ್ತಾಯ ಮಾಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಗದಗದ ಐತಿಹಾಸಿಕ ಜೋಡು ಮಾರುತಿ ದೇವಸ್ಥಾನದ ಭಕ್ತರಲ್ಲಿ ಕಳವಳ ಶುರುವಾಗಿದೆ. ಏಕೆಂದರೆ ಜೋಡು ಮಾರುತಿ ದೇವಸ್ಥಾನದ ಪಕ್ಕದಲ್ಲೇ ಶಾದಿಮಹಲ್ ನಿರ್ಮಾಣಕ್ಕೆ ಪ್ಲಾನ್ ಹಾಕಲಾಗಿದೆ. ಇದರಿಂದ ಹಿಂದೂ ಸಮುದಾಯದ ಪೂಜೆ ಪುರಸ್ಕಾರಕ್ಕೆ ತೊಂದರೆಯಾಗುವ ಆತಂಕ ಎದುರಾಗಿದೆ. ಕೋಮಸೌಹಾರ್ದ ಧಕ್ಕೆ ಆಗುವ ಆತಂಕದಲ್ಲಿ ಹಿಂದೂ ಸಮುದಾಯವಿದೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಪರವಾನಿಗೆ ನೀಡದಂತೆ ಒತ್ತಾಯ ಮಾಡಲಾಗಿದೆ.
ಹಿಂದು-ಮುಸ್ಲಿಂ ಭಾವೈಕ್ಯತೆಗೆ ಹೆಸರುವಾಸಿಯಾದ ಗದಗ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ. ಗದಗ ಜಿಲ್ಲೆಯಲ್ಲಿ ಈ ವಾಗ ಒಂದು ಆತಂಕ ಆರಂಭವಾಗಿದೆ. ಹೀಗಾಗಿ ಶಾದಿಮಹಲ್ ಬೇಡ ಅಂತ ಡಿಸಿ ಕಚೇರಿ ಎದುರು ಹಿಂದೂ ಸಂಘಟನೆ ಕಾರ್ಯಕರ್ತರ ಆಕ್ರೋಶ. ಹೌದು ಗದಗ ನಗರದ ಐತಿಹಾಸಿಕ ದೇವಸ್ಥಾನ ಜೋಡು ಮಾರುತಿ ದೇವಸ್ಥಾನ ಪಕ್ಕದಲ್ಲೇ ಶಾದಿಮಹಲ್ ನಿರ್ಮಾಣಕ್ಕೆ ಒಂದು ಸಮುದಾಯ ಮುಂದಾಗಿದೆ. ಇದು ಹಿಂದೂ ಜನ್ರ ಕೋಪಕ್ಕೆ ಕಾರಣವಾಗಿದೆ.
ಶ್ರೀ ಜೋಡು ಮಾರುತಿ ದೇವಸ್ಥಾನ. ಆ ದೇವಸ್ಥಾನದ ಪಕ್ಕದಲ್ಲೇ ಶಾದಿಮಹಲ್ ನಿರ್ಮಾಣ ಮಾಡಲು ಒಂದು ಸಮುದಾಯ ಮುಂದಾಗಿದೆ. ಆದ್ರೆ ಹಿಂದೂ ಮಂದಿ ಶಾದಿಮಹಲ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದೂಗಳ ಪೂಜೆ ಪುನಸ್ಕಾರಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದ್ರು ಹಿಂದೂ ಪರ ಸಂಘಟನೆ ಕಾರ್ಯಕರ್ತರು, ಮಹಿಳೆಯರು ಪ್ರತಿಭಟಿಸಿ ಒತ್ತಾಯ ಮಾಡಿದ್ದಾರೆ. ಒಂದು ವೇಳೆ ನಿರ್ಮಾಣ ಆರಂಭಿಸಿದ್ರೆ ಮುಂದೇ ಏನಾದ್ರೂ ಆದ್ರೆ ಜಿಲ್ಲಾಡಳಿತವೇ ಹೊಣೆ ಅಂತ ಎಚ್ಚರಿಕೆ ನೀಡಿದ್ದಾರೆ ಎಂದು ಮಾಹಿತಿ ಕಂಡು ಬಂದಿದೆ.