ಕೋಲಾರ : ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಎರಡು ಬಣಗಳ ನಡುವೆ ಕಿತ್ತಾಟ ಇದ್ದು, ನನ್ನ ವಿಚಾರದಲ್ಲಿ ಅವರಿಗೆ ಯಾವುದೇ ವೈಮನಸ್ಸು ಇಲ್ಲ. ನಮ್ಮ ಎರಡೂ ಬಣದ ನಾಯಕರ ಜೊತೆ ಮಾತನಾಡಿದ್ದೇನೆ. ನನ್ನನ್ನು ಎರಡೂ ಬಣದ ನಾಯಕರು ಒಪ್ಪಿಕೊಂಡಿದ್ದಾರೆ. ಈಗ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ತಿಳಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಗೌತಮ್, ಈಗಲೇ ನಾವು ಸೆಕೆಂಡ್ ಸ್ಟೇಜ್ ಕ್ಯಾನ್ಸರ್‌ನಲ್ಲಿದ್ದೇವೆ, ಜನ ಮೂರನೇ ಬಾರಿ ವೋಟ್ ಹಾಕೋ ಹೊರಗಿನವರು ಮತ್ತು ಸ್ಥಳೀಯರು ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆವಿ ಗೌತಮ್, ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಇಲ್ಲಿಗೆ ಚುನಾವಣೆಗೋಸ್ಕರ ಎಲ್ಲರೂ ಬಂದಿರೋರೆ. ನನಗೂ ಕೋಲಾರ ಹೊಸದಲ್ಲ. ಬೆಂಗಳೂರಿನಲ್ಲಿ ಕೋಲಾರದವರೇ 75% ಜನ ಇದ್ದಾರೆ ಎಂದರು.
ಮತದಾರರ ಮುಂದೆ ಹೋಗಿ ಕಾಂಗ್ರೆಸ್ ಪಕ್ಷ ಕೊಟ್ಟಿರುವ ಐದು ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸುತ್ತೇವೆ. ಗ್ಯಾರಂಟಿ ಯೋಜನೆಗಳ ಶ್ರೀರಕ್ಷೆಯೇ ನಮಗೆ ಆಶೀರ್ವಾದವಾಗಿದೆ. ಐದು ಗ್ಯಾರಂಟಿಗಳಿಂದ ಜನಗಳಿಗೆ ಉಪಯೋಗವಾಗಿದೆ. ಇವೇ ನಮಗೆ ಮತಗಳಾಗಿ ಪರಿವರ್ತನೆಯಾಗುತ್ತವೆ ಎಂದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆವಿ ಗೌತಮ್ ಮುಳಬಾಗಲು ತಾಲೂಕಿನ ಕುರುಡುಮಲೆಯಲ್ಲಿ ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ, ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆವಿ ಗೌತಮ್, ಕೋಲಾರದಲ್ಲಿ ಸ್ಪರ್ಧೆ ಮಾಡುವಂತೆ ನನಗೆ ಹೈಕಮಾಂಡೇ ಹೇಳಿದ್ದು, ನೀನು ಅಭ್ಯರ್ಥಿಯಾದ್ರೆ ಎಲ್ಲರೂ ಒಪ್ಪಿಕೊಳ್ತಾರೆ ಎಂದು ಹೈಕಮಾಂಡ್ ತೀರ್ಮಾನ ತೆಗೆದುಕೊಂಡು ನನ್ನನ್ನು ಕಳಿಸಿದೆ ಎಂದು ಸೂಚಿಸಿದರು.