ಹುಬ್ಬಳ್ಳಿ: ಇತಿಹಾಸ ಪ್ರಸಿದ್ಧ 12 ನೇ ಶತಮಾನದಲ್ಲಿ ಜೀವಿಸಿದ್ದ ಚಾಂಗದೇವ ಮುಸ್ಲಿಂ ಆಗಿದ್ದರೂ ಆತನಿಗೆ ಇಲ್ಲಿ ದೇವಸ್ಥಾನ ನಿರ್ಮಿಸಿದ್ದು ಭಾವೈಕ್ಯತೆಯ ಸಂಕೇತ ಆಗಿದೆ. ಒಂದು ಕಡೆ ಆತನಿಗೆ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದರೆ, ಜಾತ್ರೆಯ ಎರಡನೇ ದಿನ ಅದೇ ಚಾಂಗದೇವನ ಹೆಸರಿನಲ್ಲಿ ಇದೇ ದೇವಸ್ಥಾನದ ಮುಂದೆ ಉರುಸು ಕೂಡ ನೆರವೇರುತ್ತೆ. ಇನ್ನು ಈ ಚಾಂಗದೇವನಿಗೆ ಇಷ್ಟಾರ್ಥಸಿದ್ಧಿ ದೇವ ಅಂತಾನೂ ಕರೆಯಲಾಗುತ್ತೆ ಎಂದು ಮಾಹಿತಿ ತಿಳಿದು ಬಂದಿದೆ.
ಈಗ ಈ ಪುಣ್ಯ ಭೂಮಿಲ್ಲಿ ಜಾತಿ ಮತ ಪಂಥ, ಧರ್ಮದ ಹಂಗು ಮೀರಿ ನಡೆದುಕೊಳ್ಳಲಾತ್ತದೆ. ಈ ಭೂಮಿಯಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆಸಲಾಗುತ್ತದೆ. ಇದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರು ಗ್ರಾಮದ ಜಾತ್ರೆಯ ವಿಶೇಷ.ಯಮನೂರು ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಪುಣ್ಯ ಸ್ಥಳ. ಭಾವೈಕ್ಯತೆಯನ್ನು ನಾಡಿಗೆ ಸಾರಿ ಹೇಳಿದ ಪುಣ್ಯ ಭೂಮಿ. ಅಂಥ ಸ್ಥಳದಲ್ಲಿಂದು ಜಾತ್ರೆಯ ಸಂಭ್ರಮ.
ಇಂಥ ಮಹಿಮಾ ಪುರುಷನ ಸ್ಮರಣೆಗಾಗಿ ಇಂದಿಗೂ ಜಾತ್ರೆಯನ್ನು ಮಾಡಲಾಗುತ್ತಿದೆ. ಒಂದು ಕಡೆ ದೇವಸ್ಥಾನವಿದ್ದರೆ, ಮತ್ತೊಂದು ಭಾಗದಲ್ಲಿ ಮಸೀದಿ ಇರುವುದು ಇಲ್ಲಿಯ ವಿಶೇಷತೆ. ದೇವಸ್ಥಾನದಲ್ಲಿ ಚಾಂಗದೇವ ಪ್ರತಿಷ್ಠಾಪಿಸಿದ ಉಗ್ರ ನರಸಿಂಹ ದೇವ ಸಾಲಿಗ್ರಾಮಕ್ಕೆ ವಿಶೇಷ ಪೂಜೆ ಮಾಡಲಾಗುತ್ತೆ.
ಹಿಂದೂ -ಮುಸ್ಲಿಂ ಸಮುದಾಯದವರೆಲ್ಲಾ ಸೇರಿ ಬಲು ಸಂಭ್ರಮದಿಂದ ನಡೆಸುವ ಈ ಜಾತ್ರೆಯಲ್ಲಿ ಹಲವಾರು ಪವಾಡಗಳೂ ನಡೆಯುತ್ತವೆ ಅನ್ನುವ ನಂಬಿಕೆಯೂ ಜನರಲ್ಲಿದೆ.ಚಾಂಗದೇವರ ಜಾತ್ರೆಯೇ ಒಂದು ವಿಶೇಷ. ನೂರಾರು ವರ್ಷಗಳ ಹಿಂದೆ ಚಾಂಗದೇವ ಈ ಗ್ರಾಮದಲ್ಲಿ ನೆಲೆಸಿದ್ದ ಅನ್ನುವ ಪ್ರತೀತಿ ಇದೆ. ಅವತಾರ ಪುರುಷನಾಗಿದ್ದ ಆತ ಸಂತ ಪರಂಪರೆಯ ಮಹಾಜ್ಞಾನಿಯಾಗಿ ಸಂಚರಿಸುತ್ತಾ, ಹಿಂದೂ- ಮುಸ್ಲಿಮರಲ್ಲಿ ಭಾವೈಕ್ಯತೆಯನ್ನು ಮೂಡಿಸಿದ.
ಜಾತ್ರೆಗೆ ಲಕ್ಷಾಂತರ ಜನರು ಆಗಮಿಸಿ, ಚಾಂಗದೇವನ ದರ್ಶನ ಪಡೆಯುತ್ತಾರೆ. ಜಾತ್ರೆಯ ಮೊದಲ ದಿನ ಚಾಂಗದೇವನಿಗೆ ಗಂಧಾಭಿಷೇಕ ಮಾಡಲಾಗುತ್ತದೆ. ಬಳಿಕ ಬೆಣ್ಣೆ ಹಳ್ಳದ ನೀರಿನಿಂದಲೇ ಸಂತರು ದೀಪ ಬೆಳಗಿಸಿ ಪವಾಡ ಮೆರೆಯುತ್ತಾರೆ ಅನ್ನೋ ನಂಬಿಕೆ. ಇದನ್ನು ನೋಡಲು ಹೊರ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ.