ಬಾಗಲಕೋಟೆ
ಮತದಾರರಲ್ಲಿ ಮತದಾನ ಮಹತ್ವ ಸಾರುವ ನಿಟ್ಟಿನಲ್ಲಿ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿ ವಿಶೇಷ ಚಟುವಟಿಕೆ ಹಮ್ಮಿಕೊಂಡಿತ್ತು.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಮೆಹಂದಿ ಹಾಗೂ ರಂಗೋಲಿ ಮೂಲಕ ಮತದ ಮಹತ್ವದ ಜಾಗೃತಿ ಮೂಡಿಸಲಾಯಿತು.
ಅಮೀನಗಡದ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ಪರ್ಧೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಪಪಂ ಸಿಬ್ಬಂದಿ, ಪೌರ ಕಾರ್ಮಿಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಪೌರ ಕಾರ್ಮಿಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಕೈಯಲ್ಲಿ ನಮ್ಮ ಮತ:ನಮ್ಮ ಹಕ್ಕು, ತಪ್ಪದೆ ಮತದಾನ ಮಾಡಿ, ವೋಟ್ ಫಾರ್ ಇಂಡಿಯಾ, ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ ಎಂದು ಮೆಹಂದಿಯಲ್ಲಿ ಬರೆದುಕೊಂಡಿದ್ದು ಗಮನ ಸೆಳೆಯಿತು.
ನಾನಾ ಬಣ್ಣದಲ್ಲಿ ಮೂಡಿದ ರಂಗೋಲಿಯಲ್ಲಿ ಜನ ಸಾಮಾನ್ಯ ಶಕ್ತಿ ಮತ ಚಲಾವಣೆ, ನಿಮ್ಮ ಮತ ನಿಮ್ಮ ಭವಿಷ್ಯ, ನೈತಿಕ ಮತದಾನ ಮಾಡಿ ಸೇರಿದಂತೆ ಹಲವು ಘೋಷಣೆಗಳು ರಂಗೋಲಿ ಮೂಲಕ ಗಮನ ಸೆಳೆದವು.
ಉಪತಹಸೀಲ್ದಾರ್ ಎಂ.ಆರ್.ಹೆಬ್ಬಳ್ಳಿ, ಪಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಜೆಎಚ್‌ಐ ಸಂತೋಷ ವ್ಯಾಪಾರಿಮಠ, ಎಸ್.ವೈ.ಮಾಗುಂಡಪ್ಪನವರ, ರಮೇಶ ಕಡ್ಲಿಮಟ್ಟಿ, ನಾಗೇಶ ತಳೇವಾಡ ಇತರರು ಇದ್ದರು.
ರಂಗೋಲಿ ಸ್ಪರ್ಧೆ ವಿಜೇತರು:ಸರಸ್ವತಿ ಬಡಿಗೇರ (ಪ್ರಥಮ), ವೈ.ಪಿ.ದುರ್ಗದ (ದ್ವಿತೀಯ), ರೇಣವ್ವ ಚಲವಾದಿ (ತೃತೀಯ), ರೇಣುಕಾ ಚಲವಾದಿ, ಲಕ್ಷö್ಮವ್ವ ಚಲವಾದಿ, ಎನ್.ಎಸ್.ನಾಗರಾಳ, ಎಸ್.ಎ.ತಾಳಿಕೋಟಿ (ಸಮಾಧಾನಕರ ಬಹುಮಾನ) ಪಡೆದರು.
ಮೆಹಂದಿ ಸ್ಪರ್ಧೆ ವಿಜೇತರು:ಎಸ್.ಎಂ.ಬಸರಿಕಟ್ಟಿ (ಪ್ರಥಮ), ಮಂಜುಳಾ ಕಳ್ಳಿಮಠ (ದ್ವಿತೀಯ), ಭುವನೇಶ್ವರಿ ಬೇವಿನಮಟ್ಟಿ (ತೃತೀಯ) ಬಹುಮಾನ ಪಡೆದರು.